ಪೊನ್ನಂಪೇಟೆ, ಅ. ೧೫: ಕೊಡಗಿನ ಯುವ ಗಾಯಕ ಅನ್ವಿತ್ ಕುಮಾರ್ ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ "ಸರಿಗಮಪ" ೨೦ನೇ ಅವತರಣಿಕೆಯ ಮೆಗಾ ಆಡಿಶನ್‌ನಲ್ಲಿ ಭಾಗವಹಿಸಿ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮದ ಗಣಪತಿ ದೇವಸ್ಥಾನ ಅರ್ಚಕರಾದ ವಿಷ್ಣುಮೂರ್ತಿ ಭಟ್ ಮತ್ತು ಸಂಗೀತ ಶಿಕ್ಷಕಿ ಚಂದ್ರಕಲಾ ಮೂರ್ತಿ ಅವರ ದ್ವಿತೀಯ ಪುತ್ರ ಅನ್ವಿತ್ ಕುಮಾರ್, ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಕರ್ನಾಟಕ ಶಾಸ್ತಿçÃಯ ಸಂಗೀತ ಸೀನಿಯರ್ ವಿಭಾಗದಲ್ಲಿ ಕೊಡಗಿಗೆ ಪ್ರಥಮ ಸ್ಥಾನ ಪಡೆದಿರುವ ಅನ್ವಿತ್, ಸಂಗೀತ ಜೂನಿಯರ್ ಮತ್ತು ಸೀನಿಯರ್ ವಿಭಾಗವನ್ನು ಸಂಗೀತ ವಿದೂಷಿ ಬಾಳೆಲೆಯ ವತ್ಸಲಾ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಅಭ್ಯಸಿಸಿದ್ದು, ಪ್ರಸ್ತುತ ಹಿಂದೂಸ್ಥಾನಿ ಸಂಗೀತವನ್ನು ಕಲಿಯುತ್ತಿದ್ದಾರೆ.