ಸೋಮವಾರಪೇಟೆ, ಅ. ೧೪: ಸಮೀಪದ ಯಡೂರು ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ, ಕಾಲೇಜಿನ ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

ನ್ಯಾಕ್ ಅಧ್ಯಕ್ಷ ಡಾ. ಮುರಳೀಧರ್ ಚಂದೇಕರ್, ಸದಸ್ಯರುಗಳಾದ ರಾಜ್‌ಕುಮಾರ್ ಕೊಥಾರಿ ಹಾಗೂ ಎಸ್. ಮರಿಯಾ ಜಾನ್ ನೇತೃತ್ವದ ತಂಡ ಕಾಲೇಜಿಗೆ ಭೇಟಿ ನೀಡಿ, ಕಳೆದ ಐದು ವರ್ಷಗಳಲ್ಲಿ ಆಗಿರುವ ಕಾಲೇಜಿನ ಪ್ರಗತಿಯನ್ನು ಪರಿಶೀಲಿಸಿತು.

ರಾಷ್ಟಿçÃಯ ಮೌಲ್ಯಾಂಕನ ಸಂಸ್ಥೆ(ನ್ಯಾಕ್) ತಂಡ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮಾಡಿ, ಪ್ರತಿಯೊಂದು ಸಂಸ್ಥೆಗೆ ಗ್ರೇಡ್ ನೀಡುವ ಅಧಿಕೃತ ಸಂಸ್ಥೆಯಾಗಿದೆ. ಐದು ವರ್ಷಗಳಿಗೊಮ್ಮೆ ಕಾಲೇಜನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಮೂವರು ಸದಸ್ಯರುಗಳನ್ನೊಳಗೊಂಡ ಈ ತಂಡವು ಕಾಲೇಜಿನ ಶೈಕ್ಷಣಿಕ ಪ್ರಗತಿ, ಮೂಲ ಸೌಕರ್ಯಗಳು, ಸಂಶೋಧನೆ ಮತ್ತು ಸಮುದಾಯದೊಂದಿಗಿನ ಸಹಭಾಗಿತ್ವ, ಮೌಲ್ಯಮಾಪನ ಪದ್ಧತಿ ಇತ್ಯಾದಿಗಳನ್ನೊಳಗೊಂಡAತೆ ಏಳು ವಿಷಯಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅಧ್ಯಕ್ಷ ಡಾ. ಮುರಳೀಧರ್ ತಿಳಿಸಿದರು.

ಈ ಸಂದರ್ಭ ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದು, ನ್ಯಾಕ್ ತಂಡವು ಹಳೆಯ ವಿದ್ಯಾರ್ಥಿಗಳು, ಪೋಷಕರು ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ವಿಶ್ವ ವಿದ್ಯಾನಿಲಯದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಕಾಲೇಜಿನ ಬಗೆಗಿನ ಪ್ರತಿಯೊಂದು ವಿಷಯಗಳ ಕುರಿತು ಕೂಲಂಕುಷ ಮಾಹಿತಿ ಪಡೆದುಕೊಂಡರು.

ಈ ಎಲ್ಲ ವಿಷಯಗಳ ಆಧಾರದ ಮೇಲೆ ಇನ್ನು ಕೆಲವೇ ದಿನಗಳಲ್ಲಿ ಕಾಲೇಜಿನ ಗ್ರೇಡ್‌ನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ಧನಲಕ್ಷಿö್ಮÃ, ನ್ಯಾಕ್ ಸಂಚಾಲಕ ಎಂ.ಎಸ್. ಶಿವಮೂರ್ತಿ, ಪ್ರಾಧ್ಯಾಪಕರುಗಳಾದ ಡಾ. ಕೆ.ಎನ್. ಕುಸುಮ, ಎಂ.ಎA. ಸುನೀತ, ಬೋಧಕೇತರ ಸಿಬ್ಬಂದಿಗಳಾದ ಶಿವ ನವೀನ್‌ಕುಮಾರ್, ಎಚ್.ಜೆ. ಜವರ ಇದ್ದರು.