ಸಿದ್ದಾಪುರ, ಅ. ೧೪: ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಾ. ೧೫ರಿಂದ ೨೪ರವರೆಗೆ ನವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ತಾ. ೧೫ರಂದು ಬೆಳಿಗ್ಗೆ ನಿತ್ಯ ಪೂಜೆ ೮ ಗಂಟೆಗೆ ಗಣಪತಿ ಹೋಮ, ಅಲಂಕಾರ ಪೂಜೆ, ಪ್ರಸಾದ ವಿತರಣೆ, ಸಂಜೆ ೬:೩೦ಕ್ಕೆ ಅಲಂಕಾರ, ದೀಪಾರಾಧನೆ, ಭಗವತಿ ಸೇವೆ, ಕುಮಾರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ತಾ. ೨೨ರಂದು ದುರ್ಗಾಷ್ಟಮಿಯ ಪ್ರಯುಕ್ತ ಸಂಜೆ ೫ ಗಂಟೆಗೆ ಪುಸ್ತಕ ಪೂಜೆಗೆ ಇಡುವುದು ತಾ. ೨೩ ರಂದು ಆಯುಧ ಪೂಜೆ ರಾತ್ರಿ ೮:೩೦ಕ್ಕೆ ಸಾಮೂಹಿಕ ವಾಹನ ಪೂಜೆ ನಡೆಯಲಿದೆ. ತಾ. ೨೪ರಂದು ವಿಜಯದಶಮಿಯ ಅಂಗವಾಗಿ ವಿದ್ಯಾರಂಭ ೯ ಗಂಟೆಯಿAದ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ನಡೆಯಲಿದೆ ಎಂದು ದೇವಾಲಯದ ಪ್ರಮುಖರಾದ ರಸಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಲ್ಲದೇ ತಾ. ೩೦ರಂದು ಶ್ರೀ ದುರ್ಗಾ ಭಗವತಿ ದೇವಾಲಯದ ನಾಲ್ಕನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಪೂಜಾ ಕೈಂಕರ್ಯಗಳು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧ರ ವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.