ಕುಲದೇವಿ ಶ್ರೀ ಕಾವೇರಿ ಮಾತೆಯ ಉಗಮಸ್ಥಾನ ಕೊಡಗಿನ ತಲಕಾವೇರಿಯ ತಪ್ಪಲಲ್ಲಿ ಜೀವನದಿ ಕಾವೇರಿ ಸಾವಿರಾರು ಭಕ್ತ ಸಮೂಹದ ಮಂಗಳಘೋಶಗಳ ನಡುವೆ ಅಕ್ಷಯ ತೀರ್ಥರೂಪಿಣಿಯಾಗಿ ಒಲಿದು ಬರುವ ಪವಿತ್ರ ದಿನದ ಸಾಂಪ್ರದಾಯಿಕ ಆಚರಣೆಯೇ ಕಾವೇರಿ ತುಲಾ ಸಂಕ್ರಮಣ ಹಾಗೂ ಕಾವೇರಿ ಚಂಗ್ರಾAದಿ.
ಕುಲದೇವಿ ಕಾವೇರಿಯ ಪೌರಾಣಿಕ ಹಿನ್ನೆಲೆ..
ಶ್ರೀ ಕಾವೇರಿ ಮಾತೆಯು ಮಹರ್ಷಿ ಅಗಸ್ತö್ಯರ ಪತ್ನಿ. ಕವೇರ ಮುನಿಯ ಸಾಕು ಮಗಳು, ಬಹ್ಮದೇವರ ಮಾನಸಪುತ್ರಿ ಲೋಪಾಮುದ್ರೆ ಎನ್ನುವುದು ಈಕೆಯ ಪೂರ್ವನಾಮ. ಮಕ್ಕಳಿಲ್ಲವೆಂಬ ಕೊರಗಿನಿಂದ ಸಂತಾನ ಪ್ರಾಪ್ತಿಗಾಗಿ ಕವೇರ ಮುನಿಯು ಎಸಗಿದ ತಪಸ್ಸಿಗೆ ಒಲಿದ ಬ್ರಹ್ಮನು ಪ್ರಾಚೀನ ಕರ್ಮ ಫಲದಂತೆ ಕವೇರ ಮುನಿಗೆ ಈ ಜನ್ಮದಲ್ಲಿ ಸಂತಾನ ಭಾಗ್ಯವಿಲ್ಲವೆಂದು ಹೇಳಿ ತನ್ನ ಮಾನಸ ಪುತ್ರಿಯಾದ ಲೋಪಾಮುದ್ರೆಯನ್ನು ದತ್ತು ಪುತ್ರಿಯಾಗಿ ಸ್ವೀಕರಿಸುವಂತೆ ಹೇಳಿ ಅನುಗ್ರಹಿಸಿದರಂತೆ. ಕವೇರ ಮುನಿಯು ಸಾಕು ಮಗಳಾದ ಲೋಪಾಮುದ್ರೆಯು ಶ್ರೀ ಕಾವೇರಿಮಾತೆ ಎಂಬ ಹೆಸರಿನಲ್ಲಿ ವಿಖ್ಯಾತಳಾದಳು.
ಉತ್ತರ ಭಾರತದಿಂದ ದಕ್ಷಿಣ ದೇಶಕ್ಕೆ ಆಗಮಿಸಿದ ಅಗಸ್ತö್ಯ ಮಹ ಋಷಿಗಳು ಕವೇರ ಮುನಿಗಳ ಬಂದಾಗ ದಿವ್ಯಾಂಶ ಸಂಭೂತೆಯಾದ ಕಾವೇರಿಯನ್ನು ನೋಡಿ ತ್ರಿಕಾಲ ಜ್ಞಾನಿಗಳಾದ ಅವರು ಕಾವೇರಿಯ ಜೀವನೋದ್ದೇಶವನ್ನು ಗ್ರಹಿಸಿಕೊಂಡರು. ಅದರಂತೆ ಅಗಸ್ತö್ಯ ಮಹರ್ಷಿಗಳು ಕಾವೇರಿಯನ್ನು ವಿವಾಹವಾಗಲು ಬಯಸಿದರಂತೆ. ಅವರ ಅಭಿಲಾಷೆಗೆ ಕಾವೇರಿಯು ಒಪ್ಪಿ ತನ್ನನ್ನು ಯಾವ ಕಾಲಕ್ಕೂ ಒಂದು ಕ್ಷಣವೂ ಬಿಟ್ಟು ಇರಕೂಡದು. ಒಂದುವೇಳೆ ಬಿಟ್ಟು ಹೋದದ್ದೇಯಾದರೆ ತತ್ಕ್ಷಣವೇ ತಾನು ನದಿಯಾಗಿ ರೂಪತಳೆದು ಸಮುದ್ರದ ಕಡೆ ಹೊರಟು ಹೋಗುತ್ತೆನೆಂದಳು. ಅದಕ್ಕೆ ಅಗಸ್ತö್ಯ ಮಹರ್ಷಿಗಳು ಒಪ್ಪಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ಶ್ರೀ ಅಗಸ್ತö್ಯ-ಕಾವೇರಿಯ ವಿವಾಹವು ಬಹಳ ವೈಭವದಿಂದ ನೆರವೇರಿತು.
ಹೀಗೆ ದಿನಕಳೆದಂತೆ ಒಂದು ದಿನ ಅಗಸ್ತö್ಯ ಮಹಋಷಿಗಳು ಬ್ರಾಹ್ಮೀ ಮುಹೂರ್ತದಲ್ಲಿ ಬಹ್ಮಗಿರಿಯ ತಪ್ಪಲಿನ ಕನಕಜೆಗೆ ಸ್ನಾನ ಸಂಧ್ಯಾ ವಂದನೆಗೆ ತೆರಳುವ ಮುನ್ನ ಕಾವೇರಿಯನ್ನು ಜಲರೂಪಿಯಾಗಿ ಪರಿವರ್ತಿಸಿ ತನ್ನ ಕಮಂಡಲುವಿನಲ್ಲಿ ಸೇರಿಸಿ, ಶಿಷ್ಯರಿಗೆ ಜಾಗ್ರತೆಯಿಂದ ಕಾಯ್ದುಕೊಳ್ಳಿ ಎಂದು ಹೇಳಿ ಕಮಂಡಲುವನ್ನು ಬ್ರಹ್ಮಕುಂಡಿಕೆಯಲ್ಲಿಟ್ಟು ತೆರಳಿದರು. ಆ ಸಮಯದಲ್ಲಿ ಜಲರೂಪಿಣಿಯಾಗಿದ್ದ ಕಾವೇರಿಯು ಮೇಲುಕ್ಕಿ ಬ್ರಹ್ಮಕುಂಡಿಕೆಗೆ ಹರಿದು ನದಿ ರೂಪಿಯಾಗಿ ಮುಂದೆ ಹರಿದಾಗ ಶಿಷ್ಯರು ತಡೆಯಲು ಮುಂದಾದಾಗ ಕಾವೇರಿಯು ಗುಪ್ತಗಾಮಿನಿಯಾಗಿ ಮುಂದೆ ಸಾಗಿದಳು. ಅತ್ತ ಅಗಸ್ತö್ಯ ಮಹರ್ಷಿಗಳಿಗೆ ತಮ್ಮ ದಿವ್ಯದೃಷ್ಠಿ ಮೂಲಕ ಈ ವಿಚಾರ ತಿಳಿದು ಧಾವಿಸಿ ಬಂದು ಕಾವೇರಿಯನ್ನು ನದಿಯಾಗಿ ಹೋಗುವುದು ಬೇಡವೆಂದು ಕೇಳಿಕೊಂಡರು. ಆಗ ಕಾವೇರಿಯು ತಾನು ತನ್ನ ಶರೀರದ ಒಂದAಶದಲ್ಲಿ ನದಿಯಾಗಿ ತೆರಳಿ ಲೋಕ ಕಲ್ಯಾಣಕ್ಕಾಗಿಯೂ, ಉಳಿದೊಂದAಶ ಪತ್ನಿಯಾಗಿ ಉಳಿಯುವೆನೆಂದು ಅಗಸ್ತö್ಯ ಮಹರ್ಷಿಗೆ ಸಮಾಧಾನ ಹೇಳಿ ತನ್ನ ದಿವ್ಯವತಾರ ಲೀಲಾ ಕಾರ್ಯವನ್ನು ಮುಂದುವರಿಸಿ ನದಿಯಾಗಿ ಹರಿದು ಪುಣ್ಯ ಕ್ಷೇತ್ರವಾದ ಭಾಗಮಂಡಲದ ಕನ್ನಿಕಾ ಸುಜ್ಯೋತಿ ನದಿಗಳು ಕಾವೇರಿಯೊಡನೆ ಸಂಗಮವಾಗಿ ಸಂಗಮ ಕ್ಷೇತ್ರವಾಗಿ ರೂಪುಗೊಂಡಿತು. ಎಲ್ಲಿಯ ತನಕ ನೀವು ನನ್ನನ್ನು ನಂಬಿ ಆರಾಧಿಸುತೀರೋ ಅಲ್ಲಿತನಕ ನಾಡಿಗೆಲ್ಲ ಮಾತೆಯಾಗಿ ಸಮಸ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆಂದು ಭಾಷೆ ನೀಡಿ ಶ್ರೀ ಕಾವೇರಿ ಮಾತೆಯು ನದಿಯಾಗಿ ಮುಂದೆ ಹರಿಯತೊಡಗಿದಳು.
ಇನ್ನೊಂದು ಪುರಾಣ ಕಥೆಯ ಪ್ರಕಾರ ವಿಷ್ಣುಮಾಯ ಎಂಬ ಬ್ರಹ್ಮನ ಮಗಳನ್ನು ಕವೇರಮುನಿ ಸಾಕಿಕೊಂಡಿದ್ದಳAತೆ. ವಿಷ್ಣುವಿನ ಆಜ್ಞೆಯಂತೆ ಈ ಕನ್ಯೆಯು ದೇಹರೂಪಿಯಾಗಿ ಲೋಪಾಮುದ್ರಾ ಎಂಬ ಹೆಸರಿನಿಂದ ಒಂದೆಡೆ ಅಗಸ್ತö್ಯ ಸತಿಯೂ ಇನ್ನೊಂದೆಡೆ ನದಿ ರೂಪಿಯಾಗಿ ಕಾವೇರಿಯಾದಳು. ದಕ್ಷಿಣದಲ್ಲಿ ಜಲಕ್ಷಾಮವಿದೆಯೆಂದು ಸುದ್ದಿತಿಳಿದ ಅಗಸ್ತö್ಯನು ತನ್ನ ಪತ್ನಿಯ ಜೊತೆ ಸಹ್ಯಾದ್ರಿಯ ತಪ್ಪಲ ಬ್ರಹ್ಮಗಿರಿಗೆ ಬಂದಾಗ ಜೋರಾದ ಗಾಳಿ ಬೀಸಿ ಕಮಂಡಲು ಉರುಳಿ ಅದರಲ್ಲಿ ಜಲರೂಪಿಯಾಗಿದ್ದ ಕಾವೇರಿಯು ನದಿಯಾಗಿ ಹರಿದಳೆಂದು ಹೇಳಿದರೆ ಮತ್ತೊಂದು ಕತೆಯಲ್ಲಿ ಶೂರಪದ್ಮನೆಂಬ ಅಸುರನು ತನ್ನ ವಿಶೇಷ ಶಕ್ತಿಯಿಂದ ಮಳೆ ಬೀಳುವುದನ್ನು ತಡೆದನಂತೆ. ಇದರಿಂದ ದಕ್ಷಿಣ ಭಾರತದಲ್ಲಿ ಹಾಹಾಕಾರವಾಗಲು ಇಂದ್ರನ ಪ್ರಾರ್ಥನೆಯಂತೆ ಗಣೇಶನು ಕಾಗೆಯ ರೂಪ ತಳೆದು ಕವೇರ ಋಷಿಯ ಕಮಂಡಲವನ್ನು ಕೆಡವಿ ಕಾವೇರಿಯ ಪ್ರವಾಹಕ್ಕೆ ಕಾರಣನಾದನೆಂದು ಹೇಳುತ್ತಾರೆ. ಕೊಡಗಿನ ಕಾವೇರಿ ಪುರಾಣದಲ್ಲಿನ ಕಾವೇರಿ ಮಾತೆ ಕಥೆಯನ್ನು ಕೊಡವ ಹಾಡಿನಲ್ಲಿ ಸವಿವರವಾಗಿ ರಚಿಸಲಾಗಿದೆ.
ಕೊಡವರ ಕುಲದೇವಿ
ಕೊಡವ ಜನಾಂಗದ ಪಾಲಿನ ಕುಲದೇವಿ ಕಾವೇರಿ ಮಾತೆಯು ಕೊಡಗಿನ ತಲಕಾವೇರಿ, ಭಾಗಮಂಡಲದಲ್ಲಿ ನದಿಯಾಗಿ ಹರಿದು ಬಲಮುರಿಗೆ ಬರುವಾಗ ಒಮ್ಮೆಲೇ ತನ್ನ ಪ್ರವಾಹದ ದಿಕ್ಕನ್ನು ಬದಲಾಯಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿದ್ದ ಕೊಡವ ಮಹಿಳೆಯರ ಸೀರೆಯ ಮುಂದೆ ಇದ್ದ ನೆರಿಗೆಯು ನೀರಿನ ರಭಸಕ್ಕೆ ಹಿಂದಕ್ಕೆ ತಿರುಗಿತಂತೆ. ಅಲ್ಲಿಂದ ಕೊಡವ ಮಹಿಳೆಯರು ಸೀರೆ ಉಡುವಾಗ ನೆರಿಗೆಯನ್ನು ಹಿಂದಕ್ಕೆ ಹಾಕುವ ಬಗ್ಗೆ ಪ್ರತೀತಿ ಇದೆಯೆನ್ನುತ್ತಾರೆ.
ವಿಸ್ಮಯ ಕುಂಡಿಕೆ...
ಅರ್ಚಕರು ಪುಣ್ಯ ಮುಹೂರ್ತದ ಮೊದಲು ಜಲರೂಪಿಣಿ ಕಾವೇರಿ ಮಾತೆಯ ಕುಂಡಿಕೆಗೆ ಆರತಿಯನ್ನು ಬೆಳಗಿ ಪುಣ್ಯ ತೀರ್ಥವನ್ನು ಕುಂಡಿಕೆಯಿAದ ತೆಗೆದು ನೆರೆದಿದ್ದ ಭಕ್ತ ಸಮೂಹದ ಮುಂದೆ ಎರಚುತ್ತಿದ್ದಂತೆ ಭಕ್ತ ಸಮೂಹ ಜೈ.. ಜೈ.. ಮಾತಾ.. ಕಾವೇರಿ.. ಎನ್ನುತ್ತಾ ತೀರ್ಥ ಕುಂಡಿಕೆಯಿAದ ಮೇಲುಕ್ಕಿ ಬರುವ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಕುಂಡಿಕೆಯಿAದ ಅದೆಷ್ಟು ತೀರ್ಥ ತೆಗೆದರೂ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಕಡಿಮೆಯಾಗುವುದೇ ಇಲ್ಲ. ತಲಕಾವೇರಿಯಲ್ಲಿ ತೀರ್ಥೋದ್ಭವ ಹಾಗೂ ಅಕ್ಷಯ ತೀರ್ಥ ಪ್ರತಿವರ್ಷ ಕಂಡುಬರುವ ದೈವಿಕ ಪವಾಡದ ವಿಸ್ಮಯಕಾರಿ ದೃಶ್ಯವೆಂದೇ ಹೇಳಲಾಗುತ್ತಿದೆ. ಇದರಲ್ಲಿ ಪ್ರಕೃತಿಯ ರಹಸ್ಯ ಅಡಗಿದೆ. ಸಾವಿರ ಕೊಡದಲ್ಲಿ ನೀರು ತೆಗೆದರೂ ಪುಟ್ಟ ಕುಂಡಿಕೆಯಲ್ಲಿ ತೀರ್ಥ ಬತ್ತುವುದೇ ಇಲ್ಲ.
ಕೆಲವು ವರ್ಷಗಳಿಂದ ಕೊಡವ ಜನಾಂಗದ ಹಾಡುಗಾರರು ದುಡಿಕೊಟ್ಟ್ ಹಾಡಿನೊಂದಿಗೆ ತಲಕಾವೇರಿಗೆ ಬಂದು ಕಾವೇರಿ ಮಾತೆಯ ಹಾಡನ್ನು ತೀರ್ಥೋದ್ಭವದವರೆಗೆ ಹಾಡಿದರೆ ಕೊಡವ ಯುವಕ-ಯುವತಿಯರ ತಂಡ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ದುಡಿಕೊಟ್ಟಿನ ಹಾಡಿನೊಂದಿಗೆ ಪಾದಯಾತ್ರೆಯ ಮೂಲಕ ತಲಕಾವೇರಿಗೆ ತಲುಪಿ ಪುಣ್ಯತೀರ್ಥವನ್ನು ವಿವಿಧೆಡೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಿದ್ದಾರೆ.
ಸೂರ್ಯನು ತುಲಾರಾಶಿಯ ಪ್ರವೇಶಿಸುವ ತೀರ್ಥೋದ್ಭವದ ಸಮಯದಲ್ಲಿ ತೀರ್ಥಸ್ನಾನ ಮಾಡುವುದರಿಂದ ಅಶ್ವಮೇಧಯಾಗ ಫಲವು ಹಾಗೂ ಕಾವೇರಿ ಜಲದಲ್ಲಿ ಒಂದು ತಿಂಗಳು ಎಡೆಬಿಡದೆ ಸ್ನಾನ ಪೂಜಾದಿ ಕೈಂಕರ್ಯವನ್ನು ಮಾಡುವುದರಿಂದಲೂ ಮಂಗಳಕರ ದಿವ್ಯಗತಿ ಹೊಂದುವರೆAಬ ಪುರಾತನ ಕಾಲದ ನಂಬಿಕೆಯೂ ಇಂದು ಕಾಣಬರುತ್ತಿದೆ. ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಹರಿಶ್ಚಂದ್ರ, ಬಲಮುರಿ ಹಾಗೂ ಗುಹ್ಯ ಮೊದಲಾದ ಸ್ಥಳಗಳಿಗೆ ಹೋಗಿ ಕಾವೇರಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುವರು.
ಬೊತ್ತ್ಕುತ್ತುವ ಸಂಪ್ರದಾಯ..
ಕಾವೇರಿ ಸಂಕ್ರಮಣದ ದಿನದ ಮುಂಚಿತವಾಗಿ ಬೊತ್ತ್ ಎಂಬ ಒಂದುತರಹದ ವಿಶಿಷ್ಟ ರೀತಿಯ (ಪೊಂಗ)ಮರದ ದಂಟನ್ನು ತರಲು ಕಾಡಿಗೆ ಹೋಗಿ ತಮಗೆ ಬೇಕಾದಷ್ಟು ಬೊತ್ತ್ ಹಾಗೂ ಅದಕ್ಕೆ ಸಂಬAಧಿಸಿದ ಬಳ್ಳಿಯನ್ನು ತರುತ್ತಾರೆ. ಅದನ್ನು ಸಿದ್ಧಪಡಿಸಿ ತಲಕಾವೇರಿಯಲ್ಲಿ ತೀಥೋದ್ಭವವಾಗುವದಕ್ಕೆ ಮುಂಚಿತ ದಿನ ತಮ್ಮ ತಮ್ಮ ಗದ್ದೆ, ಮನೆ, ಬಾವಿ, ದನದ ಕೊಟ್ಟಿಗೆ, ಹಟ್ಟಿ, ಕೆರೆಗಳಲೆಲ್ಲ ಒಂದೊAದು ಬೊತ್ತನ್ನು ಚುಚ್ಚಿ ಅದಕ್ಕೆ ತೆಕ್ಕೆಯಂತೆ ಮಾಡಿದ ಬಳ್ಳಿಯನ್ನು ತುದಿಗೆ ಸಿಲುಕಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ ಬಿದಿರನ್ನು ಒಡೆದ ಎರಡು ತುಂಡುಗಳನ್ನು ಕತ್ತರಿ ರೂಪದಲ್ಲಿ ನಿಲ್ಲಿಸಿ ಬಳ್ಳಿಗಳನ್ನು ಹಾಕಿದರೆ. ಕೆಲವೆಡೆ ಕಾಂಡಗಳನ್ನು ಚುಚ್ಚುವ ಕ್ರಮವಿದೆ ಹಾಗೂ ಮತ್ತೆ ಕೆಲವೆಡೆ ಬೊತ್ತನ್ನೆ ಚುಚ್ಚುವುದಿಲ್ಲ.
ಈ ಬೊತ್ತು ಚುಚ್ಚುವ ಬಗ್ಗೆ ಹಿರಿಯರು ಹೇಳುವ ಪ್ರಕಾರ ದ್ವಾಪರ ಯುಗದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಸಮಯದಲ್ಲಿ ಕಾವೇರಿ ಮಾತೆಗೆ ನೀಡಿದ ಜಾಗವನ್ನು ಕಾವೇರಿ ಸಂಕ್ರಮಣದ ಸಮಯದಲ್ಲಿ ಹಿಂದಿರುಗಿ ಬರುವಾಗ ವಾಪಾಸು ಕೇಳಿದರಂತೆ, ಆ ಸಮಯದಲ್ಲಿ ಕೊಡವರು ಜಾಗವನ್ನೆಲ್ಲ ಉಳುಮೆ ಮಾಡಿ ಬೊತ್ತು ಚುಚ್ಚಿ ಜಾಗವನ್ನು ತಮ್ಮದಾಗಿಸಿಕೊಂಡಿದ್ದರ ಫಲವಾಗಿ ಬೊತ್ತ್ ಚುಚ್ಚುವ ಸಂಪ್ರದಾಯ ವಿದೆಯೆನ್ನುವರು. ಮತ್ತೆ ಕೆಲವರ ಪ್ರಕಾರ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಗುರುತಿಗಾಗಿ ತಮ್ಮ ಕೈಗೆ ಸಿಕ್ಕ ಗಿಡಮರ ಬಳ್ಳಿಗಳನ್ನು ಚುಚ್ಚಿದರಂತೆ. ಅದೇ ಬೊತ್ತ್ ಎಂದೆನಿಸಿಕೊAಡಿತೆನ್ನುವರು. ಹಿಂದೊಮ್ಮೆ ಬೊತ್ತ್ ತರಲು ಹೋದ ಕೆಲಸದವನ್ನು ಹುಲಿ ಹಿಡಿದರಿಂದ ಆ ಊರಿನವರು ಬೊತ್ತಿನ ಬದಲಾಗಿ ಕಾಂಡವನ್ನು ಚುಚ್ಚುತ್ತಾರೆಂಬ ಪ್ರತೀತಿ ಇದೆ.
ಕಣಿಪೂಜೋ ಆಚರಣೆ..
ಉತ್ಸವದ ಮುಂಚಿತವಾಗಿ ಪತ್ತಾಯಕ್ಕೆ ಅಕ್ಕಿ ಹಾಕುವ ಸಂಪ್ರದಾಯ, ಆಜ್ಞಾ ಮುಹೂರ್ತ ನೆರವೇರಲಿದ್ದು, ಅಕ್ಷಯ ಪಾತ್ರೆ ಇರಿಸುವುದು, ಭಂಡಾರ ತರುವ ಸಂಪ್ರದಾಯವಿದೆ. ತೀರ್ಥೋದ್ಭವವಾದ ಮಾರನೆಯ ದಿನ ಕಣಿಪೂಜೊ ಎಂಬ ಸಾಂಪ್ರದಾಯಿಕ ಕೈಂಕರ್ಯವಿದೆ. ಬೆಳಿಗ್ಗೆ ಮನೆಯವರೆಲ್ಲ ಮನೆಯನ್ನು ಶುಭ್ರಗೊಳಿಸಿ ಸ್ನಾನ ಮಾಡಿ ಮನೆಯ ಮುತ್ತೆöÊದೆಯರು ನೆಲ್ಲಕ್ಕಿ ಬೊಳ್ಚ(ದೀಪ) ಬೆಳಗಿ ರೇಷ್ಮೆವಸ್ತçವನ್ನಿಟ್ಟು ಸೌತೆಕಾಯಿ ಅಥವಾ ತರಕಾರಿಯೊಂದಕ್ಕೆ ತಲೆ-ಕಾಲು ಮಾಡಿ ಹೂವಿನಿಂದ ಶೃಂಗರಿಸಿ ಅದಕ್ಕೆ ಆಭರಣವನ್ನು ತೊಡಿಸಿ ಕಾವೇರಿ ಮಾತೆಯ ಪ್ರತೀಕವನ್ನು ಮಾಡಿ ಅದಕ್ಕೆ ಮೂರು ಎಲೆ, ಮೂರು ಅಡಿಕೆಯನ್ನಿಟ್ಟು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟರೆ ಮತ್ತೆ ಕೆಲವರು ಮನೆಗಳಲ್ಲಿ ಕಾವೇರಿ ಮಾತೆಯ ಫೋಟೋಗೆ ಹೂವನಿಟ್ಟು ಶ್ರದ್ದಾಭಕ್ತಿಯಿಂದ ಪೂಜಿಸುತ್ತಾರೆ. ಅಂದು ಬೆಳಗಿನಜಾವ ಬೊತ್ತ್ಪುಟ್ಟ್ ಬೆಪ್ಪ ಪದ್ಧತಿಯಂತೆ ಮನೆಯ ಗಂಡಸರು ಕೊಡಿಬಾಳೆಲೆ(ಬಾಳೆಲೆಯ ತುದಿಭಾಗ)ಯಲ್ಲಿ ಮನೆಯಲ್ಲಿ ಮಾಡಿದ ದೋಸೆಹಿಟ್ಟನ್ನು ಗದ್ದೆಯಲ್ಲಿಟಂತ ಬೊತ್ತಿನ ಮೇಲೆ ಇಟ್ಟು ದೇವರನ್ನು ನೆನೆಯುವರು. ಆ ಸಮಯದಲ್ಲಿ ಕೆಲಸದವರು ಬಂದು ಇಟ್ಟಂತ ದೋಸೆಹಿಟ್ಟನ್ನು ಸೇವಿಸುವರು. ಕುಟುಂಬದವರು ಕೈಮಡಕ್ಕೆ ಹೋಗಿ ಅಕ್ಕಿ ಹಾಕಿ ನಮಸ್ಕರಿಸಿ ಮನೆಗೆ ಬಂದು ಪೂಜಿಸಲ್ಪಟ್ಟ ಕಾವೇರಿ ಮಾತೆಗೂ, ನೆಲ್ಲಕ್ಕಿ ದೀಪಕ್ಕೂ, ಮನೆಯ ಮುಂದಿನ ಕನಿಕಂಬಕ್ಕೆ ಅಕ್ಕಿ ಹಾಕಿ ನಮಿಸಿ, ಹಿರಿಯರ ಆರ್ಶೀವಾದ ಪಡೆಯುವ ಸಂಪ್ರದಾಯವಿದೆ. - ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ