ಮಡಿಕೇರಿ, ಅ. ೧೫: ಹಾಕಿ ಇಂಡಿಯಾ ವತಿಯಿಂದ ಚೆನ್ನೆöÊನಲ್ಲಿ ಏರ್ಪಡಿಸಲಾಗಿರುವ ಪ್ರಥಮ ಸಬ್ ಜೂನಿಯರ್ ಬಾಲಕ - ಬಾಲಕಿಯರ ದಕ್ಷಿಣ ವಲಯ ಹಾಕಿ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಹಾಕಿ ಕರ್ನಾಟಕ ತಂಡದಲ್ಲಿ ಜಿಲ್ಲೆಯ ೨೩ ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ. ಒಟ್ಟು ೩೬ ಮಂದಿ ಆಟಗಾರರ ಪೈಕಿ ೧೨ ಮಂದಿ ಬಾಲಕರು ಹಾಗೂ ೧೧ ಮಂದಿ ಬಾಲಕಿಯರು ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ೨೪ ಮಂದಿ ಬಾಲಕರು ಹಾಗೂ ೨೪ ಬಾಲಕಿಯರು ಆಯ್ಕೆಯಾಗಿದ್ದರು. ಒಂದು ವಾರಗಳ ಕಾಲ ತರಬೇತಿಯ ಬಳಿಕ ಇದೀಗ ತಂಡಕ್ಕೆ ಅಂತಿಮವಾಗಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ೧೮ ಮಂದಿ ಆಟಗಾರರನ್ನೊಳಗೊಂಡ ಬಾಲಕರ ತಂಡದಲ್ಲಿ ಜಿಲ್ಲೆಯ ನಿಶಾಂತ್ ಎಂ., ದೀಕ್ಷಿತ್ ಹೆಚ್. ಹೆಚ್., ಮಂಡೇಟಿರ ಸೋಹನ್ ಕಾರ್ಯಪ್ಪ, ಪೊಡನೊಳಂಡ ತನಿಶ್ ಮಾದಪ್ಪ, ಕುಡೆಕಲ್ ನಿಹಾಲ್, ಶಶಿತ್‌ಗೌಡ, ಅರಮಣಮಾಡ ನಮನ್ ಬೆಳ್ಯಪ್ಪ, ಮೇವಡ ಜಶನ್ ತಮ್ಮಯ್ಯ, ಚಿರಾಗ್ ಕೋಟ್ಯಾನ್, ಸಮರ್ಥ್ ನಾಯಕ್, ಧನುಶ್ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ತಂಡದ ನಾಯಕನಾಗಿ ಬೆಂಗಳೂರಿನ ಸುಪ್ರಿತ್ ಜೆ., ಗೋಲ್ ಕೀಪರ್‌ಗಳಾಗಿ ಹಾಸನದ ನಿಖಿಲ್‌ಗೌಡ, ಶಿವಮೊಗ್ಗದ ತೇಜಸ್ ರಾಜಶೇಖರ್ ಪವಾರ್, ಗದಗದ ಮಲ್ಲು ಸುನಗಾರ್, ಬಾಗಲಕೋಟೆಯ ರೋಹಿತ್ ಕಖಾಂಡಕಿ, ಧನುಶ್ ಜಿ, ವಿವಿನ್ ದೊಡ್ಮನೆ ಅವರುಗಳು ತಂಡದಲ್ಲಿದ್ದಾರೆ.

ತಂಡದ ತರಬೇತುದಾರರಾಗಿ ಹಾಕಿ ಕರ್ನಾಟಕದ ಎಂ. ಅರುಣ್, ವ್ಯವಸ್ಥಾಪಕರಾಗಿ ಕೃಷ್ಣರೆಡ್ಡಿ ಕಾರ್ಯನಿರ್ವಹಿಸಲಿದ್ದಾರೆ. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಬಾಲಕಿಯರ ತಂಡ

ಬಾಲಕಿಯರ ತಂಡದಲ್ಲಿ ಜಿಲ್ಲೆಯ ಆಟಗಾರ್ತಿಯರಾದ ಶಿವಚಾಳಿಯಂಡ ದೇಚಕ್ಕ, ಚಟ್ಟಂಡ ಲಿಪ್ಷಿಕಾ, ಕುಟ್ಟನ ಅಕ್ಷರ, ಚೆಯ್ಯಂಡ ತ್ವಿಶ ದೇಚಮ್ಮ, ಅಚ್ಚಪಂಡ ಪರ್ಲಿನ್ ಪೊನ್ನಮ್ಮ, ಕೀತಿಯಂಡ ಪೂರ್ವಿ ಪೂವಮ್ಮ, ಪಿ.ಕೆ. ನಿರೀಕ್ಷಾ, ಕೂಡಿಗೆ ವಿದ್ಯಾಶ್ರೀ ಟಿ.ಎಸ್, ಗಗನ ಎಂ.ಎಸ್, ಧನ್ಯ, ಪ್ರತೀಕ್ಷಾ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಹರ್ಪಣ ಲಕ್ಷಿö್ಮ, ಸಿಂಚನರಾಜ್, ಅಕ್ಷತಾ ಹೆಚ್.ಸಿ., ಪಣಿತ ಎಸ್., ದೀಪ್ತಿ ಕೆ.ಆರ್., ಭಾವನ ಹಾಗೂ ಬೆಂಗಳೂರಿನ ವೈಷ್ಣವಿ ತಂಡದಲ್ಲಿದ್ದಾರೆ.

ತಂಡದ ತರಬೇತುದಾರರಾಗಿ ಹರೀಶ್ ಕಾರ್ಯನಿರ್ವ ಹಿಸುತ್ತಿದ್ದಾರೆ.

ಪಂದ್ಯಾವಳಿಯು ತಾ. ೧೭ ರಿಂದ ಚೆನ್ನೆöÊನ ಎಗ್ಮೋರ್‌ನಲ್ಲಿರುವ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ನಡೆಯಲಿದೆ.