ಭಾಗಮಂಡಲ, ಅ. ೧೪: ತಲಕಾವೇರಿಯಲ್ಲಿ ವರ್ಷಂಪ್ರÀತಿ ನಡೆಯುವ ತೀರ್ಥೋದ್ಭವಕ್ಕೆ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ತಾ.೧೮ರಂದು ನಸುಕಿನಲ್ಲಿ ಜರುಗುವ ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜಾತ್ರೆಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ತಲಕಾವೇರಿಯ ಕುಂಡಿಕೆಯ ಸುತ್ತಲೂ ಬ್ಯಾರಿಕೇಡ್ಗಳನ್ನು ಅಳವಡಿಸಿ ಭಕ್ತರ ನೂಕು ನುಗ್ಗಲನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಮಾಧ್ಯಮದವರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು ಮಳೆಗಾಗಿ ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿದೆ.
ತಲಕಾವೇರಿಯ ಮುಖ್ಯ ದ್ವಾರದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು ಕುಂಡಿಕೆ ಸುತ್ತಲೂ ೭೦ಕ್ಕೂ ಅಧಿಕ ಹೈ ಮಾಸ್ಟ್ ಲ್ಯಾಂಪ್ಗಳ ಬಳಕೆ ಮಾಡಿ ಕೊಳ್ಳಲಾಗಿದೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಎಲ್ಲ ದೇವಾಲಯಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿದೆ.
ತಲಕಾವೇರಿಯಲ್ಲಿ ಗುರುರಾಜ ಆಚಾರ್ ಮತ್ತು ರವಿರಾಜ್ ನೇತೃತ್ವದಲ್ಲಿ ಏಳು ಜನರ ಅರ್ಚಕರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಲಿದೆ. ಅಕ್ಟೋಬರ್ ೧೭ರಂದು ಸಂಜೆ ತಲಕಾವೇರಿಯಲ್ಲಿ ಸಾರ್ವಜನಿಕ ಪೂಜಾ ಕಾರ್ಯ ಕ್ರಮವನ್ನು ೫.೩೦ಕ್ಕೆ ನಿಲ್ಲಿಸಲಾಗುವುದು. ೧೦.೩೦ ರ ನಂತರ ತೀರ್ಥ ಸ್ನಾನ ಮಂತ್ರ ಪಠಣಗಳು ಆರಂಭವಾಗಿ ತೀರ್ಥೋದ್ಭವದ ವರೆಗೆ ನಿರಂತರ ವಾಗಿ ನಡೆಯಲಿದೆ. ಅಕ್ಟೋಬರ್ ೧೮ರಂದು ಬೆಳಿಗ್ಗೆ ೬.೩೦ರಿಂದ ನಿತ್ಯ ಪೂಜೆ ಆರಂಭಗೊAಡು ೭:೩೦ರ ನಂತರ ಯಥಾಸ್ಥಿತಿಯಲ್ಲಿ ಪೂಜೆ ಕಾರ್ಯ ನಡೆಯಲಿದೆ. ತಾ.೧೮ ರಂದು ಸಂಜೆ ೪ ಗಂಟೆವರೆಗೆ ನಿರಂತರ ತೀರ್ಥ ವಿತರಣೆ ನಡೆಯಲಿದೆ. ತಲಕಾವೇರಿ ಯಲ್ಲಿ ಕುಂಡಿಕೆಯಿAದ ತೀರ್ಥ ತೆಗೆಯಲು ಇಪ್ಪತ್ತಕ್ಕೂ ಅಧಿಕ ತಾಮ್ರದ ಬಿಂದಿಗೆಗಳನ್ನು ಬಳಕೆ ಮಾಡಿ ಕೊಳ್ಳಲಾಗುತ್ತಿದೆ. ೧೫೦ಕ್ಕೂ ಅಧಿಕ ಸ್ವಯಂಸೇವಕರು ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅನ್ನ ಸಂತರ್ಪಣೆ: ಭಾಗಮಂಡಲದಲ್ಲಿ ದೇವಾಲಯದ ವತಿಯಿಂದ ತಾ.೧೭ ಮತ್ತು ೧೮ರಂದು ಯಥಾಸ್ಥಿತಿ ಅನ್ನದಾನ ನಡೆಯಲಿದೆ. ತಲಕಾವೇರಿಯಲ್ಲಿ ಹದಿನಾರರ ರಾತ್ರಿಯಿಂದ ಕೊಡಗು ಏಕೀಕರಣ ರಂಗದ ವತಿಯಿಂದ ೧೭ರ ಬೆಳಗಿನ ತಿಂಡಿಯೊAದಿಗೆ ನಿರಂತರ ಅನ್ನದಾನ ನಡೆದು ತೀರ್ಥೋದ್ಭವಕ್ಕೆ ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಲಾಗುವುದು. ಬಳಿಕ ೬.೩೦ ರ ವರೆಗೆ ಕಾಫಿ ಹಾಗೂ ಲಘು ಉಪಹಾರದ ವ್ಯವಸ್ಥೆ ಇರುತ್ತದೆ. ನಂತರ ಮುಂದಿನ ಕಿರುಸಂಕ್ರಮಣ ದವರೆಗೆ ಒಂದು ತಿಂಗಳು ನಿರಂತರ ವಾಗಿ ಅನ್ನದಾನ ನಡೆಯಲಿದೆ.