ಅಗ್ನಿ ಪುರಾಣದ ಪ್ರಕಾರ ರಾಜರ್ಷಿ ಕವೇರನು ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಅವನಿಂದ ಅವನ ಮಾನಸ ಪುತ್ರಿಯಾದ ವಿಷ್ಣು ಮಾಯೆಯನ್ನು ಪಡೆದನು. ಕವೇರನ ಸಾಕು ಮಗಳಾದುದ್ದರಿಂದ ಕಾವೇರಿ ಎಂದೆನ್ನಿಸಿದಳು.

ಲೋಕಕಲ್ಯಾಣಕ್ಕಾಗಿ ಈಕೆಯ ಒಂದAಶ ಜಲರೂಪದಲ್ಲಿರಬೇಕು ಎಂಬುದು ದೈವೇಚ್ಛೆಯಾಗಿತ್ತು. ಅವಳ ಒಂದAಶ ನದಿ ರೂಪ ಪಡೆಯಿತು. ಇನ್ನೊಂದು ಅಂಶ ಲೋಪಾಮುದ್ರೆಯಾಗಿ ಆಗಸ್ತö್ಯನನ್ನು ವರಿಸಿದಳು.

ಕಾವೇರಿ ತಲಕಾವೇರಿಯ ಬ್ರಹ್ಮ ಕುಂಡದಿAದ ಹೊರಡುತ್ತಾಳೆ. ಉಗಮಕ್ಕೆ ಆಕೆ ಆರಿಸಿಕೊಂಡ ಸ್ಥಳ ಸಪ್ತರ್ಷಿಗಳು ತಪಗೈದು ಪವಿತ್ರಗೊಳಿಸಿದ ಪ್ರದೇಶ ಕೊಡಗು. ಮುನಿ ಅಗಸ್ತö್ಯರು ನೆಲೆಸಿದ ಪುಣ್ಯ ಭೂಮಿ. ತ್ರಿಮೂರ್ತಿಗಳು ಕೊಡಗಿನ ಸಹ್ಯಾದ್ರಿಯಲ್ಲಿ ತಮ್ಮ ಸಾನಿಧ್ಯವನ್ನು ಭಕ್ತರಿಗೆ ಅನುಗ್ರಹಿಸಿದ್ದಾರೆ. ಬ್ರಹ್ಮದೇವನ ಪಾದಸ್ಪರ್ಶದಿಂದ ಪವಿತ್ರವಾದ ಶೈಲವೇ ಬ್ರಹ್ಮಗಿರಿ. ಈ ಬೆಡಗಿನ ಕೊಡಗಿನಲ್ಲಿ ‘ಮುಗಿಲಲಿ ಮಿಂಚಿನೋಲ್ ಹೊಳೆ ಹೊಳೆದು’ ಕಾವೇರಿ ಪ್ರತ್ಯಕ್ಷವಾಗುತ್ತಾಳೆ. ಸಮುದ್ರ ಮಟ್ಟದಿಂದ ೧೩೫೫ ಅಡಿ ಎತ್ತರದ ಬ್ರಹ್ಮಗಿರಿಯಲ್ಲಿ ಶಿಖರದ ತುದಿಯಿಂದ ನೂರು ಮೀಟರ್ ಆಳದಲ್ಲಿರುವ ಕುಂಡವೇ ಕಾವೇರಿ ಪುಷ್ಕರಣಿ. ಕಾವೇರಿಯನ್ನು ಕೊಡಗಿನ ಮಗಳು ಎಂದು ಕರೆಯುತ್ತಾರೆ. ಪ್ರತೀವರ್ಷ ಶ್ರಾವಣದಲ್ಲಿ ಕಾವೇರಿ ಉತ್ಸವ ನಡೆಯುತ್ತದೆ. ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ತಂದೆ-ತಾಯಿ, ಬಂಧುಗಳು ಒಡವೆ-ವಸ್ತುಗಳನ್ನು ಕೊಟ್ಟು ಪ್ರೀತಿ, ಸತ್ಕಾರಗಳನ್ನು ನೀಡಿ ಕಳುಹಿಸುವಂತೆ ಉತ್ಸವಕ್ಕೆ ಬಂದವರು ಕಾವೇರಿಯಲ್ಲಿ ಚಿನ್ನ, ಆಭರಣ ಮತ್ತು ಶ್ರದ್ಧಾ ನಿಧಿಯನ್ನು ಅರ್ಪಿಸಿ ಕಳುಹಿಸುತ್ತಾರೆ. ಮಗಳು ಒಬ್ಬಳೇ ಹೋಗಬಾರದಲ್ಲ! ಅದಕ್ಕಾಗಿ ಜೊತೆಯಲ್ಲಿ ಹೊರಡುವ ಗೆಳತಿಯಂತೆ ಭಾಗಮಂಡಲದ ಬಳಿ ಕನಾಕಾವತಿ-ಸುಜ್ಯೋತಿ ಸೇರುವರು.

ತಲಕಾವೇರಿಗೆ ಭಕ್ತರು ಆಗಮಿಸಿ ತೀರ್ಥೋದ್ಭವವನ್ನು ಭಕ್ತಿಯಿಂದ ವೀಕ್ಷಿಸಿ ಪಾವನರಾಗುತ್ತಾರೆ. ತಾಯಿ ಕಾವೇರಿ ಕೊಡಗಿನ ಜನರನ್ನು ಹರಸಲಿ.

- ಹರೀಶ್ ಸರಳಾಯ, ಮಡಿಕೇರಿ.