ಮಡಿಕೇರಿ, ಅ. ೧೫ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ತಾ. ೧೬ರಿಂದ (ಇಂದಿನಿAದ) ಪ್ರಾರಂಭವಾಗಲಿದೆ. ಆರಂಭಿಕ ದಿನವೇ ಸಂಗೀತ, ನೃತ್ಯ, ವಾದ್ಯಗಳ ಸಂಗಮದ ವೈವಿಧ್ಯತೆಗಳು ಮೂಡಿಬರಲಿವೆ.

ಸಂಜೆ ೭ ಗಂಟೆಯಿAದ ನಗ ರದ ಗಾಂಧಿ ಮೈದಾನದಲ್ಲಿನ ಕಲಾ ಸಂಭ್ರಮ ವೇದಿಕೆಯಲ್ಲಿ ಪ್ರಥಮ ದಿನದ ಆಕರ್ಷಣೆಯಾಗಿ ಅಂತರರಾಷ್ಟಿçÃಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾ ಅವರ ತಂಡ ದಿಂದ ವಾದ್ಯ ಮತ್ತು ಸಂಗೀತ ಕಾರ್ಯಕ್ರಮ ಇರುತ್ತದೆ. ವಿವಿಧ ಭಾಷೆ ಗಳ ೬೦೦ ಕ್ಕೂ ಅಧಿಕ ಸಿನಿಮಾಗಳಲ್ಲಿ ವಾದ್ಯ ಸಂಗೀತಕಾರನಾಗಿ ಕಾರ್ಯನಿರ್ವ ಹಿಸಿರುವ ಡ್ರಮ್ ದೇವ ವಿದೇಶ ಗಳಲ್ಲಿಯೂ ಕಾರ್ಯಕ್ರಮ ನೀಡಿ ದ್ದಾರೆ. ದೇವಾ ಅವರೊಂದಿಗೆ ಎದೆ ತುಂಬಿ ಹಾಡಿದೆನು ಖ್ಯಾತಿಯ ಗಾಯಕ ಪುರುಷೋತ್ತಮ, ಸರಿಗಮಪ ಖ್ಯಾತಿಯ ಹಂಸಿನಿ, ದಿವ್ಯಾ ಯಾದವ್, ಮನುಯಾದವ್ ಸೇರಿದಂತೆ ಅನೇಕ ಗಾಯಕರು, ಖ್ಯಾತ ವಾದ್ಯ ಸಂಗೀತಕಾರರಿAದ ಕಾರ್ಯಕ್ರಮ ಆಯೋಜಿತವಾಗಿದೆ.

ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿAದ ನೃತ್ಯ ವೈವಿಧ್ಯ, ಮಡಿ ಕೇರಿಯ ಕಲಾಕಾವ್ಯ ನಾಟ್ಯಶಾಲಾ ವಿದ್ಯಾರ್ಥಿಗಳಿಂದ ನೃತ್ಯವೈವಿಧ್ಯ, ಮದೆ ನಾಡಿನ ಶ್ರೀ ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ಶಿವಚರಿತಾಮೃತಂ ನೃತ್ಯರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮೊದಲ ದಿನದ ಆಕರ್ಷಣೆಯಾಗಿದೆ. ಇದರೊಂದಿಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಮೊದಲ ದಿನ ಆಯೋಜಿತವಾಗಿವೆ.