ಪೊನ್ನಂಪೇಟೆ, ಅ. ೧೩: ಭಾರತ ಸರ್ಕಾರದ ಜವಳಿ ಸಚಿವಾಲಯದ ಸಮರ್ಥ್ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಸಹಯೋಗದಲ್ಲಿ ಜವಳಿ ವಲಯದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಫ್ಯಾಷನ್ ಟೆಕ್ನಾಲಜಿ ಎಸ್.ಎಂ.ಓ. ಹೊಲಿಗೆ ತರಬೇತಿಯನ್ನು ಗೋಣಿಕೊಪ್ಪಲು ಅಮೃತ್ ಕ್ರಿಯೇಶನ್ಸ್ ಹೊಲಿಗೆ ತರಬೇತಿ ಕೇಂದ್ರದಲ್ಲಿ ನೀಡಲಾಗುತ್ತಿದ್ದು, ಹೊಲಿಗೆ ತರಬೇತಿ ಪಡೆದ ೨೫ ಜನರಿಗೆ ಸಮರ್ಥ್ ವತಿಯಿಂದ ಕೇಂದ್ರ ಸರ್ಕಾರದ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ಗೋಣಿಕೊಪ್ಪಲು ಅಮೃತ್ ಕ್ರಿಯೇಶನ್ಸ್ ಹೊಲಿಗೆ ತರಬೇತಿ ಕೇಂದ್ರದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಪಿ.ಕೆ. ದೇವಾನಂದ್, ಪ್ರತಿ ಎರಡು ತಿಂಗಳಿಗೊಮ್ಮೆ ಕೇವಲ ೩೦ ಅಭ್ಯರ್ಥಿಗಳಿಗೆ ಮಾತ್ರ ಉಚಿತ ತರಬೇತಿಗೆ ಅವಕಾಶವಿದ್ದು, ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುತ್ತದೆ. ಕೊಡಗಿನ ಆಸಕ್ತ ಯುವಕರು, ಯುವತಿಯರು ಈ ತರಬೇತಿಯ ಸೌಲಭ್ಯವನ್ನು ಪಡೆಯಬಹುದು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ತರಬೇತಿ ಪ್ರಮಾಣ ಪತ್ರ ಹೊಂದಿದವರಿಗೆ ಸುಸ್ಥಿರ ಹಾಗೂ ಸುಧಾರಿತ ಜೀವನಕ್ಕೆ ದಾರಿ ಮಾಡಿಕೊಡಲು ಸರಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು.
ಈ ಸಂದರ್ಭ ಸಂಸ್ಥೆಯ ತರಬೇತುದಾರರಾದ ಸುಮಿತ್ರ, ಸಹ ತರಬೇತುದಾರರಾದ ಶ್ರುತಿ, ಅಸ್ಮ ಮತ್ತು ತಾಂತ್ರಿಕ ಸಿಬ್ಬಂದಿ ಸೌಭಾಗ್ಯವತಿ ಹಾಜರಿದ್ದರು. ತರಬೇತಿ ಪಡೆದವರು ಸಂಸ್ಥೆಯ ಮುಖ್ಯಸ್ಥ ಪಿ.ಕೆ. ದೇವಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜವಳಿ ಉತ್ಪನ್ನಗಳಿಗೆ ಸಂಬAಧಿತ ಸಹಕಾರ ಸಂಘ ಹ್ಯಾಪ್ ವ್ಯಾಗ್ ಕೋ ಆಪ್ಸ್ ಲಿಮಿಟೆಡ್ನಲ್ಲಿ ಸದಸ್ಯತ್ವ ಪಡೆಯಬಹುದು. ಇದು ಕೊಡಗಿನ ಏಕೈಕ ಹಾಗೂ ಮೊಟ್ಟ ಮೊದಲ ಭಾರತ ಸರ್ಕಾರದ ಜವಳಿ ತರಬೇತಿ ಕೇಂದ್ರವಾಗಿದ್ದು, ಈ ಸಂಘದ ಸದಸ್ಯತ್ವ ಪಡೆದ ನಂತರ ಜವಳಿ ಇಲಾಖೆಯ ಇನ್ನಷ್ಟು ಉದ್ಯ ಮದ ಅವಕಾಶಗಳ ಲಾಭ ಪಡೆಯ ಬಹುದು. ಉತ್ಪನ್ನಗಳ ಮಾರುಕಟ್ಟೆ, ಸರಕಾರಗಳಿಂದ ಸಹಾಯಧನ, ಬ್ಯಾಂಕುಗಳಿAದ ಸಾಲ ಸೌಲಭ್ಯಗಳು ಹಾಗೂ ಇನ್ನಿತರ ನೆರವನ್ನು ಸುಲಭವಾಗಿ ಪಡೆಯ ಬಹುದು. ಮುಂದಿನ ಬ್ಯಾಚ್ನಲ್ಲಿ ತರಬೇತಿ ಪಡೆಯಲು ಸೇರ ಬಯಸುವವರು ಹೆಚ್ಚಿನ ಮಾಹಿತಿಗಾಗಿ ಗೋಣಿ ಕೊಪ್ಪಲು ಬೈಪಾಸ್ ರಸ್ತೆಯಲ್ಲಿರುವ ಅಮೃತ್ ಕ್ರಿಯೆಷನ್ ತರಬೇತಿ ಸಂಸ್ಥೆ ಕಚೇರಿ ಮೊ. ೯೭೪೧೪ ೨೬೭೫೩ ಮತ್ತು ೯೪೪೮೮ ೪೯೫೭೯ಗೆ ಸಂಪರ್ಕಿಸ ಬಹುದು. - ಚನ್ನನಾಯಕ