ಕೂಡಿಗೆ, ಅ. ೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗೋಸದನ, ಪಶುವೈದ್ಯ ಆಸ್ಪತ್ರೆ ಜಾಗ ಮತ್ತು ಸಾಮಾಜಿಕ ಅರಣ್ಯ ಇಲಾಖೆಗೆ ಸಂಬAಧಿಸಿದAತೆ ಇರುವ ಜಾಗದ ಸಮಸ್ಯೆಗಳು ವಿವಿಧ ಹಂತಗಳಲ್ಲಿ ಇಲಾಖೆಗೆ ಮೂಲಕ ಚರ್ಚೆಗಳು ನಡೆದರೂ ಇದುವರೆಗೂ ಬಗೆಹರಿಯದ ಪರಿಣಾಮವಾಗಿ ಮೂರು ಗ್ರಾಮಗಳ ಗ್ರಾಮಸ್ಥರ ಸಭೆಯಲ್ಲಿ ಗೋಸದನ ಜಾಗವನ್ನು ಗ್ರಾಮಕ್ಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಲೋಕಾಯುಕ್ತರಿಗೆ ಮನವಿಯನ್ನು ಸಲ್ಲಿಸುವಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಹುದುಗೂರು ಗ್ರಾಮದಲ್ಲಿರುವ ಗೋಸದನದ ಸಮೀಪದಲ್ಲಿರುವ ಬ್ರಿಟಿಷ್‌ನವರ ಕಾಲದ ಗೋಸದನ ಜಾಗವನ್ನು ಸಾಮಾಜಿಕ ಅರಣ್ಯ ಇಲಾಖೆಯವರು ೨೦೦೬ ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ಖಾತೆಯನ್ನು ಮಾಡಿಸಿ ಕೊಂಡಿರುತ್ತಾರೆ. ಆದರೆ ಆ ಜಾಗವು ಸಮೀಪದ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆಯ ಸಮೀಪದಲ್ಲಿದ್ದು, ಪಶುಪಾಲನಾ ಇಲಾಖೆಯ ಅನುಮತಿಯನ್ನು ಪಡೆಯದೆ ಖಾತೆಯನ್ನು ಸಾಮಾಜಿಕ ಅರಣ್ಯ ಇಲಾಖೆಯವರು ಮಾಡಿಸಿ ಕೊಂಡಿರುತ್ತಾರೆ. ಆದರೆ ಹುದುಗೂರು ಗ್ರಾಮದಲ್ಲಿರುವ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು, ವಸತಿ ಗೃಹಗಳ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ಎಲ್ಲಾ ಯೋಜನೆಗಳು ಕಾರ್ಯಗತವಾದರೂ ಸಹ ಜಾಗದ ಸಮಸ್ಯೆಯಿಂದಾಗಿ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯ ವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇದಕ್ಕೆ ಸಂಬAಧಿಸಿ ದಂತೆ ಗ್ರಾಮಸ್ಥರು ಕಳೆದ ನಾಲ್ಕು ವರ್ಷಗಳಿಂದಲೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮತ್ತು ರಾಜ್ಯಮಟ್ಟದ ಇಲಾಖೆಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದರೂ, ಪ್ರತಿ ಬಾರಿ ಕೆ.ಡಿ.ಪಿ. ಸಭೆಯಲ್ಲಿ ಮಾತ್ರ ಚರ್ಚೆಗಳು ನಡೆದರೂ ಸಹ ಇದುವರೆಗೂ ಯಾವುದೇ ಸಮರ್ಪಕವಾದ ಕ್ರಮಗಳನ್ನು ತಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಹುದುಗೂರು, ಮಾವಿನಹಳ್ಳ ಶಿರಹೊಳಲು ಗ್ರಾಮದ ಪ್ರಮುಖರು ಮತ್ತು ನೂರಾರು ಹಾಲು ಉತ್ಪಾದಕರು ಸಭೆ ಸೇರಿ ಮೂರು ಇಲಾಖೆಯವರು ಸಂಘಟಿತ ಮನೋಭಾವದಲ್ಲಿ ಸಭೆ ಸೇರಿ ಯಾವುದೇ ತೀರ್ಮಾನ ಕೈಗೊಳ್ಳಲಾಗದ ಹಿನ್ನೆಲೆಯಲ್ಲಿ ಮತ್ತು ಈ ಪಶು ಆಸ್ಪತ್ರೆ ಕೇಂದ್ರವು ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಕ್ಕೆ ಒಳಪಡುವುದರಿಂದಾಗಿ ಹಾಲಿ ಇರುವ ಗೋಸದನ ಜಾಗವನ್ನು ಬಿಟ್ಟು ಬೇರೆ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯಗಳನ್ನು ಬೆಳೆಸಲು ಮುಂದಾಗಬೇಕೆAದು ಗ್ರಾಮಸ್ಥರ ಪ್ರಮುಖ ಒತ್ತಾಯವಾಗಿದೆ. ಹುದುಗೂರು ಗ್ರಾಮದಲ್ಲಿ ಎರಡು ಎಕರೆ ಮತ್ತು ೩೦ ಸೆಂಟ್ ಜಾಗವಿದ್ದು, ಇದರಲ್ಲಿ ೭೫ ಸೆಂಟ್ ಜಾಗವನ್ನು ಪಶುಪಾಲನಾ ಇಲಾಖೆಗೆ ಬಿಟ್ಟುಕೊಂಡುವAತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬAಧಿಸಿದAತೆ ಕಳೆದ ಒಂದು ವರ್ಷಗಳ ಹಿಂದೆ ಕುಶಾಲ ನಗರ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾದರೂ ಇದುವರೆಗೂ ಬದಲಿ ಜಾಗ ಅಥವಾ ಅದಕ್ಕೆ ಸಂಬAಧಿಸಿದ ಮಾಹಿತಿಯನ್ನು ಸಾಮಾಜಿಕ ಅರಣ್ಯ ಇಲಾಖೆಯವರು ಒದಗಿಸಿಲ್ಲ ಎಂಬುದು ಹುದುಗೂರು ಗ್ರಾಮಸ್ಥರ ಹೇಳಿಕೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆ ಸಾಮಾಜಿಕ ಅರಣ್ಯ ಇಲಾಖೆಯ ಡಿ.ಎಫ್.ಓ. ಮತ್ತು ತಾಲೂಕು ಸಾಮಾಜಿಕ ಅರಣ್ಯ ವಲಯಾಧಿ ಕಾರಿಗಳು ಹುದುಗೂರು ಗ್ರಾಮದಲ್ಲಿ ರುವ ಗೋಸದನ ಜಾಗವನ್ನು ಪರಿಶೀಲನೆ ನಡೆಸಿರುತ್ತಾರೆ. ಇದರ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆ ನಡೆಸಿ ಲೋಕಾಯುಕ್ತರಿಗೆ ಪತ್ರ ವ್ಯವಹಾರ ನಡೆಸಿರುತ್ತಾರೆ. ಇದರ ಜೊತೆಯಲ್ಲಿ ರಾಜ್ಯ ಪಶು ಸಂಗೋಪನಾ ಸಚಿವರನ್ನು ಖುದ್ದಾಗಿ ಭೇಟಿ ನೀಡಿ ಪಶುಪಾಲನಾ ಇಲಾಖೆಗೆ ಜಾಗವನ್ನು ನೀಡುವಂತೆ ಮನವಿಯನ್ನು ಮಾಡಿರುತ್ತಾರೆ. ಹುದುಗೂರು ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆಗೆ ಐಗೂರು ಗ್ರಾ.ಪಂ. ವ್ಯಾಪ್ತಿಯ ಹಾಲು ಉತ್ಪಾದಕರ ಸಂಘ, ಹುದುಗೂರು ಹಾಲು ಉತ್ಪಾದಕರ ಮಹಿಳಾ ಸಂಘ, ಮದಲಾಪುರ ಹಾಲು ಉತ್ಪಾದಕ ಸಂಘ, ಕೂಡಿಗೆ, ಸೀಗೆಹೊಸೂರು, ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, ಈ ಭಾಗದಲ್ಲಿ ಲಕ್ಷಗಟ್ಟಲೆ ಹಣವನ್ನು ನೀಡಿ ಬೇರೆ ರಾಜ್ಯದಿಂದ ಹಸುಗಳನ್ನು ರೈತರು ಖರೀದಿಸಿ ತಂದು ಸಾಕುತ್ತಾರೆ. ಇವುಗಳ ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಅಲೆದಾಡುವ ಪ್ರಸಂಗಗಳು ನಡೆದಿದೆ.

ಇದರಿಂದಾಗಿ ಬ್ರಿಟಿಷ್ ಕಾಲದ ಗೋಸದನದ ಆ ಜಾಗವನ್ನು ಉಳಿಸಿ ಹೈನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸಹಕಾರ ವಾಗುವಂತೆ ಮತ್ತು ಹುದುಗೂರು ಪಶು ಆಸ್ಪತ್ರೆ ಯನ್ನು ಮೇಲ್ದರ್ಜೆಗೆ ಏರಿಸಲು ಬೇಕಾಗುವ ಜಾಗದ ವ್ಯವಸ್ಥೆಯನ್ನು ಸಂಬAಧಿಸಿದವರು ಸರಿಪಡಿಸು ವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್. ಗಣೇಶ್, ರೈತ ಜನಜಾಗೃತಿ ಸಮಿತಿಯ ಅಧ್ಯಕ್ಷ ಚಿಣ್ಣಪ್ಪ, ಉಮಾ ಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕೂಡಿಗೆ ಗ್ರಾ.ಪಂ. ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ, ಎನ್.ಎಸ್. ಮುತ್ತಪ್ಪ, ಶಿವಪ್ಪ, ನಾಗರಾಜ್, ಮಲ್ಲಪ್ಪ ಸೇರಿದಂತೆ ವಿವಿಧ ಯುವ ಸಂಘಟನೆಯ ಪ್ರಮುಖರು, ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರು, ಯುವಕ ಸಂಘದ ಪದಾಧಿಕಾರಿಗಳು ಸೇರಿದಂತೆ ರೈತರು ಭಾಗವಹಿಸಿದ್ದರು.

- ಕೆ.ಕೆ. ನಾಗರಾಜಶೆಟ್ಟಿ.