ಮಡಿಕೇರಿ, ಅ. ೧೩: ನಿಷೇಧಿತ ಮಾದಕವಸ್ತು ಎಂ.ಡಿ.ಎA.ಎ. ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಸೆನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪಿರಿಯಾಪಟ್ಟಣ ನಿವಾಸಿ ಮಹಮ್ಮದ್ ಆಲಿಶಾ (೨೯) ಬಂಧಿತ ಆರೋಪಿ. ಆತನಿಂದ ೩.೨೦ ಗ್ರಾಂ ತೂಕದ ಎಂಡಿಎAಎ ವಶಪಡಿಸಿಕೊಳ್ಳಲಾಗಿದೆ. ನಗರದ ಹೊರವಲಯದ ಸಂಪಿಗೆಕಟ್ಟೆ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಸೆನ್ ಪೊಲೀಸರು ಮಾಲುಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಮಾರ್ಗದರ್ಶನ, ಸೆನ್ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಸಿ.ಕೆ. ರಾಘವೇಂದ್ರ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.