ಸೋಮವಾರಪೇಟೆ, ಅ.೧೩ : ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಬೇಟೆಗೆ ತೆರಳಿದ್ದ ಬೇಟೆಗಾರರು-ಅರಣ್ಯ ಇಲಾಖಾಧಿಕಾರಿಗಳ ಮೇಲೆ ಗುಂಡಿನ ದಾಳಿ ಮಾಡಿದ ಘಟನೆಗೆ ಸಂಬAಧಿಸಿದAತೆ ತಲೆಮರೆಸಿಕೊಂಡಿರುವ ಈರ್ವರು ಆರೋಪಿಗಳ ಬಂಧನಕ್ಕೆ ಶನಿವಾರಸಂತೆ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ತಾ. ೧೧ರಂದು ರಾತ್ರಿ ನಡೆದ ಘಟನೆಗೆ ಸಂಬAಧಿಸಿದAತೆ ಅರಣ್ಯ ಇಲಾಖೆಯ ಬಾಣಾವರ ಶಾಖೆಯ ಗಸ್ತು ವನಪಾಲಕ ಬಿ.ಜಿ. ಪ್ರಕಾಶ್ ಅವರು ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ವರ ವಿರುದ್ದ ಮೊಕದ್ದಮೆ ದಾಖಲಾಗಿದೆ. ಈ ಪೈಕಿ ಆರೋಪಿಗಳಾದ ಚೌಡ್ಲು ಗ್ರಾಮದ ರಾಜಶೇಖರ್, ಕೆಂಚಮ್ಮನಬಾಣೆಯ ಧನು ಅವರುಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಳೆದ ತಾ. ೧೧ರಂದು ರಾತ್ರಿ ೧೧ ಗಂಟೆ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ಬಾಣಾವರ ಶಾಖೆಯ ಗಸ್ತು ವನಪಾಲಕ ಬಿ.ಜಿ. ಪ್ರಕಾಶ್, ಅರಣ್ಯ ವೀಕ್ಷಕ ಎ.ಆರ್. ಚಿಟ್ಟಿಯಪ್ಪ, ಹಂಗಾಮಿ ಅರಣ್ಯ ವೀಕ್ಷಕ ಆರ್.ಎ. ವಿಕಾಸ್, ವಾಹನ ಚಾಲಕ ಸಂತೋಷ್ ಅವರುಗಳಿದ್ದ ಇಲಾಖಾ ವಾಹನದ ಮೇಲೆ, ಕಣಗಾಲು-ಮಾಲಂಬಿ-ಗಣಗೂರು ಟ್ರೆöÊ ಜಂಕ್ಷನ್ನಲ್ಲಿ ಬೇಟೆಗಾರರು ಗುಂಡು ಹಾರಿಸಿದ್ದರು.
ಘಟನೆಯಿಂದ ಗಸ್ತು ವನಪಾಲಕ ಪ್ರಕಾಶ್ ಹಾಗೂ ಹಂಗಾಮಿ ಅರಣ್ಯ ವೀಕ್ಷಕ ವಿಕಾಸ್ ಅವರುಗಳ ಕೈಗೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲಾಖೆಯ ವಾಹನಕ್ಕೆ ಗುಂಡೇಟು ತಗುಲಿದ್ದರಿಂದ ಬಾನೆಟ್, ರೇಡಿಯೇಟರ್, ಗಾಜಿಗೆ ಹಾನಿಯಾಗಿದೆ. ಘಟನೆಯ ನಂತರ ಈರ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳೇ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ವಿಚಾರಣೆ ಸಂದರ್ಭ ಇತರ ಈರ್ವರು ಆರೋಪಿಗಳ ಪೈಕಿ ಕಾಗಡಿಕಟ್ಟೆಯ ಶರತ್ ಎಂಬಾತನೇ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದ್ದು, ಆತನ ಜೊತೆಗಿದ್ದ ಮತ್ತೋರ್ವ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಶನಿವಾರಸಂತೆ ಪೊಲೀಸರು ಪ್ರಮುಖ ಆರೋಪಿ ಶರತ್ ಹಾಗೂ ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಎಎಸ್ಪಿ-ಡಿವೈಎಸ್ಪಿ ಭೇಟಿ: ಅರಣ್ಯಾಧಿಕಾರಿಗಳಿದ್ದ ಜೀಪಿನ ಮೇಲೆ ಗುಂಡಿನ ಧಾಳಿ ನಡೆದ ಘಟನೆಗೆ ಸಂಬAಧಿಸಿದAತೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್ ಹಾಗೂ ಡಿವೈಎಸ್ಪಿ ಗಂಗಾಧರಪ್ಪ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ತನಿಖಾಧಿಕಾರಿಯಾಗಿರುವ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಸೇರಿದಂತೆ ಅಪರಾಧ ವಿಭಾಗದ ಸಿಬ್ಬಂದಿಗಳಿAದ ಮಾಹಿತಿ ಪಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮವಹಿಸುವಂತೆ ನಿರ್ದೇಶನ ನೀಡಿದ್ದಾರೆ.