ಸಿದ್ದಾಪುರ, ಅ. ೧೩ : ನಿರಂತರ ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದ ಕೃಷಿ ಫಸಲು ನಾಶ ದೊಂದಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗ ದಂತಹ ಸ್ಥಿತಿ ಎದು ರಾಗಿರುವ ಸಂದರ್ಭ ದಲ್ಲೇ ಇದೀಗ ಹುಲಿಯೊಂದು ಗ್ರಾಮದ ಕಾಫಿ ತೋಟಗಳಲ್ಲಿ ಪ್ರತ್ಯಕ್ಷಗೊಂಡಿದ್ದು ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕರಡಿಗೋಡು ಗ್ರಾಮ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಬೆಳಿಗ್ಗೆ ಕಾಫಿ ತೋಟಕ್ಕೆ ತೆರಳಿದ ಕಾರ್ಮಿಕರಿಗೆ ಹುಲಿಯ ಹೆಜ್ಜೆ ಗುರುತು ಕಂಡುಬAದಿದ್ದು ಕಾರ್ಮಿಕರು ಭಯಭೀತರಾಗಿ ಹಿಂತಿರುಗಿದ್ದಾರೆ.
ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಕರಡಿಗೋಡು ಗ್ರಾಮದ ಮೂರು ಬೆಳೆಗಾರರ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಸಮೀಪದ ಕಾಫಿ ತೋಟಗಳಲ್ಲಿರುವ ಬಗ್ಗೆ ಕೆಲ ಕಾರ್ಮಿಕರು ಮಾಹಿತಿ ನೀಡಿದ ಹಿನ್ನೆಲೆ ದಿನವಿಡಿ ಕೂಂಬಿAಗ್ ಕಾರ್ಯಾಚರಣೆ ನಡೆಸಿದರೂ ಹುಲಿ ಕಂಡುಬAದಿಲ್ಲ. ಹೆಜ್ಜೆ ಗುರುತು ಜಾಡು ಹಿಡಿದು ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಮೀಪದ ದುಬಾರೆ ಅರಣ್ಯದಂಚಿನವರೆಗೂ ಹೆಜ್ಜೆ ಗುರುತು ಕಂಡು ಬಂದಿದೆ.
ಕಾಡು ದನಗಳ ಬೇಟೆಯಾಡಲು ಬಂದ ಹುಲಿ ಸಮೀಪದ ಕಾಫಿ ತೋಟಗಳಲ್ಲಿ ಸಂಚರಿಸಿ ನಂತರ ಅರಣ್ಯಕ್ಕೆ ತೆರಳಿದೆ ಎಂದು ವಲಯ ಅರಣ್ಯಾಧಿಕಾರಿ ಕಳ್ಳಿರ ಎಂ. ದೇವಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ. ವೀರಾಜಪೇಟೆ ಡಿಎಫ್ಓ ಶರಣಬಸಪ್ಪ ‘ಶಕ್ತಿ’ಯೊಂದಿಗೆ ಮಾತನಾಡಿ,
(ಮೊದಲ ಪುಟದಿಂದ) ಕರಡಿಗೋಡು ಗ್ರಾಮದಲ್ಲಿ ಪ್ರತ್ಯಕ್ಷಗೊಂಡ ಹುಲಿಯ ಚಲನವಲನ ಪತ್ತೆ ಹಚ್ಚಲು ಕ್ಯಾಮರಾ ಅಳವಡಿಸಲಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮ ವಹಿಸಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕ್ಯಾಮರಾದಲ್ಲಿ ಸೆರೆಯಾದ ನಂತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ಎಸಿಎಫ್ ನೆಹರು ಮಾರ್ಗ ದರ್ಶನದಲ್ಲಿ ಡಿ.ಆರ್.ಎಫ್.ಓ. ಸಂಜೀವ ಸೋಮಯ್ಯ, ಮೋನಿಷ್, ಅರಣ್ಯ ರಕ್ಷಕ ಅರುಣ, ಆರ್.ಆರ್.ಟಿ. ಸಿಬ್ಬಂದಿಗಳಾದ ವಿನೋದ್, ಸಚಿನ್, ವಿನೋತ್, ಮುರುಗ, ಮಂಜು, ಅಚ್ಚಯ್ಯ ಇನ್ನಿತರರು ಇದ್ದರು.
-ಮುಬಾರಕ್