ಮಡಿಕೇರಿ, ಅ. ೧೩: ಜಿಲ್ಲೆಯ ಕಾಫಿ ಬೆಳೆಗಾರರು ಬಳಸುವ ೧೦ ಹೆಚ್.ಪಿ. ತನಕದ ಪಂಪ್ಸೆಟ್ನ ವಿದ್ಯುತ್ ಶುಲ್ಕವನ್ನು ವಸೂಲಾತಿ ಮಾಡಲು ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ಮತ್ತು ಪಾಲನ ವಲಯದ ಮುಖ್ಯ ಅಭಿಯಂತರ ಆದೇಶಿಸಿದ್ದಾರೆ.
ಹಲವು ವರ್ಷಗಳಿಂದ ಜಿಲ್ಲೆಯ ರೈತರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾರಿ ಇರುವ ರೀತಿಯಲ್ಲಿ ೧೦ ಹೆಚ್.ಪಿ. ನೀರಾವರಿ ಪಂಪ್ಸೆಟ್ಗೆ ಕಾಫಿ ಬೆಳೆಗಾರರಿಗೂ ಅನ್ವಯಿಸುವಂತೆ ಉಚಿತ ವಿದ್ಯುತ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ಗಮನ ಸೆಳೆದಿದ್ದರು. ಅಲ್ಲದೆ, ಅಂದಿನ ಶಾಸಕರುಗಳು ಇದನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಪರಿಣಾಮ ದಿನಾಂಕ ೨೦-೭-೨೦೨೨ರಂದು ಸರಕಾರದ ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರು ಬಳಸುವ ೧೦ ಹೆಚ್.ಪಿ. ತನಕದ ಪಂಪ್ಸೆಟ್ಗಳಿಗೆ ಮೊದಲು ರೈತರು ಮಾಸಿಕ ಶುಲ್ಕ ಪಾವತಿಸಿ ಅನಂತರ ಖಾತೆಗೆ ನೇರ ವರ್ಗಾವಣೆ (ಡಿಬಿಟಿ) ಮೂಲಕ ಹಣವನ್ನು ಮರುಸಂದಾಯ ಮಾಡಲಾಗುತ್ತದೆ ಎಂದು ಆದೇಶಿಸಿದ್ದರು.
ಆದರೆ, ಈ ಕ್ರಮವನ್ನು ರೈತ ಸಂಘಟನೆಗಳು ವಿರೋಧಿಸಿದ್ದವು. ಈ ನೀತಿ ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
(ಮೊದಲ ಪುಟದಿಂದ) ಇದುವರೆಗೂ ಯಾವ ರೈತರು ಶುಲ್ಕ ಪಾವತಿಸದ ಹಿನ್ನೆಲೆ ರೈತರ ಮನವೊಲಿಸಿ ಶುಲ್ಕ ವಸೂಲಾತಿಗೆ ಮುಂದಾಗಲು ನಿಗಮ ಆದೇಶಿಸಿದೆ.
ಆದೇಶದಲ್ಲಿ ಏನಿದೆ?
ಸರ್ಕಾರದ ಆದೇಶದ ಮೇರೆಗೆ ಯೋಜನೆಯ ಸೌಲಭ್ಯವನ್ನು ಪಡೆಯಲು ದಾಖಲಾತಿ ನೀಡಿರುವ ಗ್ರಾಹಕರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್ಪಿವರೆಗಿನ ವಿದ್ಯುತ್ ಪಂಪ್ಸೆಟ್ಗಳ ಮಾಸಿಕ ವಿದ್ಯುತ್ ಶುಲ್ಕವನ್ನು ಡಿಬಿಟಿ ಮೂಲಕ ಗ್ರಾಹಕರಿಗೆ ಸರ್ಕಾರದಿಂದ ಮರುಪಾವತಿಸಲು ಇ-ಆಡಳಿತ ಇಲಾಖೆಯಿಂದ ತಂತ್ರಾAಶವನ್ನು ಸಿದ್ಧಪಡಿಸಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಅನುಷ್ಠಾನಗೊಳಿಸಲು ಕೋರಲಾಗಿದ್ದರೂ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಜಾರಿಗೊಳಿಸಿರುವುದು ತಿಳಿದು ಬಂದಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್ಪಿವರೆಗಿನ ವಿದ್ಯುತ್ ಪಂಪ್ಸೆಟ್ಗಳ ಗ್ರಾಹಕರು ಮಾಸಿಕ ವಿದ್ಯುತ್ ಶುಲ್ಕವನ್ನು ಪಾವತಿಸಿದ ನಂತರ ಡಿಬಿಟಿ ಮೂಲಕ ಗ್ರಾಹಕರಿಗೆ ಸರ್ಕಾರದಿಂದ ಮರುಪಾವತಿಸಲು ತಿಳಿಸಿರುವುದರಿಂದ ಗ್ರಾಹಕರು ಮಾಸಿಕ ವಿದ್ಯುತ್ ಶುಲ್ಕವನ್ನು ನಿಗದಿತ ಅವಧಿಯಲ್ಲಿ ಪಾವತಿಸಿ ಸರ್ಕಾರವು ನಿಗಮಕ್ಕೆ ಸಹಾಯಧನ ಬಿಡುಗಡೆಗೊಳಿಸಿ ಡಿಬಿಟಿ ತಂತ್ರಾAಶವನ್ನು ನೀಡಿದ ಮೇಲೆ ವಿದ್ಯುತ್ ಶುಲ್ಕವನ್ನು ಮರುಪಾವತಿಸಲು ಕ್ರಮವಹಿಸಲಾಗುವುದು ಎಂದು ಗ್ರಾಹಕರಿಗೆ ಮನವರಿಕೆ ಮಾಡಿ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡಲು ಕ್ರಮವಹಿಸುವಂತೆ ತಿಳಿಸಲಾಗಿದೆ.