ಕುಶಾಲನಗರ, ಅ. ೧೨: ಕುಶಾಲನಗರ ಬದ್ರುನಿಸಾ ಬಡಾವಣೆಯಲ್ಲಿ ಅಕ್ರಮವಾಗಿ ಬೃಹತ್ ಮರವೊಂದನ್ನು ಕಡಿದು ಹಾಕಿದ ಬಗ್ಗೆ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಬಡಾವಣೆಯ ನಿವಾಸಿಗಳಾದ ಜಮೀಲ್ ಮತ್ತು ಮೈನುದ್ದೀನ್ ಎಂಬವರು ದೂರು ನೀಡಿದ್ದು, ಕುಶಾಲನಗರದ ನಿವಾಸಿ ಚರಣ್ ಎಂಬವರು ಕೆಲವರೊಂದಿಗೆ ಸೇರಿ ಬೃಹತ್ ಗಾತ್ರದ ಮಾವಿನ ಮರವನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಶಿವರಾಂ, ಉಪ ವಲಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮಹಜರು ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.