ಕಣಿವೆ, ಅ. ೧೨: ಕಳೆದ ಎರಡು-ಮೂರು ದಿನಗಳಿಂದ ಬರುತ್ತಿರುವ ಅಕಾಲಿಕ ಮಳೆ ಯಿಂದಾಗಿ ಭತ್ತದ ಕೃಷಿಗೆ ಪೂರಕ ವಾಗಿದ್ದರೆ, ಈಗಾಗಲೇ ಕಟಾವುಗೊಂಡಿರುವ ಜೋಳದ ಫಸಲಿಗೆ ಮಾರಕವಾಗಿ ಪರಿಣಮಿಸಿದೆ. ಅಂದರೆ ಇದೇ ಮಳೆ ಕಳೆದ ಒಂದು ತಿಂಗಳ ಹಿಂದೆ ಒಂದು ವಾರದ ಅಂತರದಲ್ಲಿ ಎರಡೇ ಎರಡು ಬಾರಿ ಸುರಿದಿದ್ದರೂ ಕೂಡ ಮಳೆಯನ್ನೇ ನಂಬಿ ಕಣಿವೆ, ಅ. ೧೨: ಕಳೆದ ಎರಡು-ಮೂರು ದಿನಗಳಿಂದ ಬರುತ್ತಿರುವ ಅಕಾಲಿಕ ಮಳೆ ಯಿಂದಾಗಿ ಭತ್ತದ ಕೃಷಿಗೆ ಪೂರಕ ವಾಗಿದ್ದರೆ, ಈಗಾಗಲೇ ಕಟಾವುಗೊಂಡಿರುವ ಜೋಳದ ಫಸಲಿಗೆ ಮಾರಕವಾಗಿ ಪರಿಣಮಿಸಿದೆ. ಅಂದರೆ ಇದೇ ಮಳೆ ಕಳೆದ ಒಂದು ತಿಂಗಳ ಹಿಂದೆ ಒಂದು ವಾರದ ಅಂತರದಲ್ಲಿ ಎರಡೇ ಎರಡು ಬಾರಿ ಸುರಿದಿದ್ದರೂ ಕೂಡ ಮಳೆಯನ್ನೇ ನಂಬಿ ಸುರಿಯುವ ಮಳೆ ತಿಂಗಳ ಹಿಂದಷ್ಟೇ ನಾಟಿ ಮಾಡಿರುವ ಭತ್ತದ ಫಸಲಿಗೆ ಬಿಟ್ಟರೆ ಮತ್ಯಾವ ಫಸಲಿಗೂ ಪ್ರಯೋಜನವಿಲ್ಲ ಎನ್ನುತ್ತಾರೆ ಅಳುವಾರದ ಕೃಷಿಕ ರಮೇಶ್ ಹಾಗೂ ಟಿ.ಆರ್. ಚಂದ್ರಶೇಖರ್. ಕಟಾವು ಮಾಡಿ ರಾಶಿ ಹಾಕಿರುವ ಮತ್ತು ಇನ್ನಷ್ಟೇ ಕಟಾವು ಮಾಡಬೇಕಿರುವ ಜೋಳಕ್ಕೆ ಈ ಮಳೆ ಮಾರಕವೇ ಹೊರತು ಪೂರಕವಲ್ಲ ಎನ್ನುತ್ತಾರೆ ಈ ಕೃಷಿಕರು.