ಚೆಟ್ಟಳ್ಳಿ, ಅ. ೧೨: ಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೫ನೇ ಬಾರಿಗೆ ಅಧ್ಯಕ್ಷರಾಗಿ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಪೇರಿಯನ ಪೂಣಚ್ಚ ಆಯ್ಕೆಯಾಗಿದ್ದಾರೆ. ತಾ. ೧ ರಂದು ನಡೆದಿದ್ದ ಚುನಾವಣೆಯಲ್ಲಿ ಮಣಿ ಉತ್ತಪ್ಪ ನೇತೃತ್ವದ ಬಣ ಸ್ಪಷ್ಟ ಗೆಲುವು ಸಾಧಿಸಿತ್ತು. ೫ನೇ ಬಾರಿಗೆ ಮಣಿ ಉತ್ತಪ್ಪ ಅಧ್ಯಕ್ಷರಾದರೆ, ಹಿರಿಯ ನಿರ್ದೇಶಕರಾದ ಪೇರಿಯನ ಪೂಣಚ್ಚ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಸಹಕಾರ ಸಂಘದ ಚುನಾವಣೆ ನಡೆಯಬಾರದೆಂದು ಹೈಕೋರ್ಟ್ನಲ್ಲಿ ಧಾವೆ ಹೂಡಿದ್ದರೂ ಫಲಕಾರಿಯಾಗಲಿಲ್ಲ. ಸಂಘದ ಅಭಿವೃದ್ಧಿಗೆ ೨೬ ವರ್ಷಗಳ ಕಾಲ ಹಗಲಿರುಳು ದುಡಿದಿದ್ದೇನೆ. ಸಂಘವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಮಣಿ ಉತ್ತಪ್ಪ ಹೇಳಿದರು.

ಈ ಸಂದರ್ಭದಲ್ಲಿ ಹಾಲಿ ನಿರ್ದೇಶಕರುಗಳಾದ ಕೊಂಗೆಟ್ಟಿರ ವಾಣಿ ಕಾಳಪ್ಪ, ಮುಳ್ಳಂಡ ಮಾಯಮ್ಮ, ಪಿ.ಟಿ. ಗಣೇಶ್, ಜೆ.ಆರ್. ರವಿ, ಬಿ.ಎಂ. ಕಾಶಿ, ಮರದಾಳು ಚೇತನ್, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ವೇಣುಗೋಪಾಲ್, ಅಕ್ಕಾರಿ ದಯಾನಂದ್, ಕರ್ಣಯ್ಯನ ಪ್ರಜ್ವಲ್, ಮಾಜಿ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಹೆಚ್.ಎಸ್. ತಿಮ್ಮಪ್ಪಯ್ಯ, ಮಾಜಿ ನಿರ್ದೇಶಕರು ಗಳಾದ ನೂಜಿಬೈಲು ನಾಣಯ್ಯ, ಪುತ್ತರಿರ ಸೀತಮ್ಮ ಮೊಣ್ಣಪ್ಪ, ಮರದಾಳು ಉಲ್ಲಾಸ್, ಧನಂಜಯ, ಬಟ್ಟೀರ ಅಪ್ಪಣ್ಣ, ಶಾಂತಪ್ಪ, ಅಡಿಕೇರ ಜಯಮುತ್ತಪ್ಪ, ಚೆಟ್ಟಳ್ಳಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಬಲ್ಲಾರಂಡ ಕಂಠಿ ಕಾರ್ಯಪ್ಪ ಸಹಪ್ರಮುಖ್ ರವಿ ಎನ್.ಎಸ್. ಸಹಕಾರ ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಕೆ.ಎಸ್. ನಂದಿನಿ ಹಾಜರಿದ್ದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಚುನಾವಣಾಧಿಕಾರಿ ಯಾಗಿ ಹಾಗೂ ಉಪ ಚುನಾವಣಾಧಿಕಾರಿಯಾಗಿ ಚೆಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್.ಎಸ್. ಅಶೋಕ್ ಕಾರ್ಯನಿರ್ವಹಿಸಿದರು.