ಮಡಿಕೇರಿ, ಅ. ೧೨ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ೩ನೇ ಹಂತದ ಪಾದಯಾತ್ರೆ ಪೊನ್ನಂ ಪೇಟೆಯಲ್ಲಿ ಮುಕ್ತಾಯಗೊಂಡಿತು. ನಾಲ್ಕನೇ ಹಂತದ ಪಾದಯಾತ್ರೆ ತಾ.೨೦ ರಿಂದ ಪೊನ್ನಂಪೇಟೆ ತಾಲೂ ಕಿನ ಕುಂದದಿAದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಪೊನ್ನಂಪೇಟೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ನಂತರ ಬಸ್ ನಿಲ್ದಾಣದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಕೊಡವ ಲ್ಯಾಂಡ್‌ಗಾಗಿ ಹಕ್ಕೊತ್ತಾಯ ಮಂಡಿಸಲಾಯಿತು. ಎನ್.ಯು. ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮ ಆರಂಭಿಸಿ ಹಕ್ಕೊತ್ತಾಯಗಳ ಕುರಿತು ವಿವರಿಸಿದರು.

ಸಿಎನ್‌ಸಿಯ ೯ ಬೇಡಿಕೆಗಳ ಕುರಿತು ಪಾದಯಾತ್ರೆ ಸಂದರ್ಭ ಜನಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.

೪ನೇ ಹಂತದ ಪಾದಯಾತ್ರೆ

ಮುಂದಿನ ಪಾದಯಾತ್ರೆಯು ಪೊನ್ನಂಪೇಟೆ ತಾಲೂಕಿನ ಕುಂದ ದಿಂದ ತಾ.೨೦ ರಿಂದ ಆರಂಭ ಗೊಂಡು ಬೆಳಿಗ್ಗೆ ೧೦ ಗಂಟೆಗೆ ಬೊಟ್ಟಿಯತ್ ನಾಡ್, ಕುತ್ತ್ನಾಡ್ ಮತ್ತು ಬೆರಳಿನಾಡ್‌ಗಳ ಮೂಂದ್ ನಾಡ್ ಕೈಮುಡಿಕೆ ಮಂದ್‌ನಲ್ಲಿ ಸಮಾವೇಶಗೊಳ್ಳಲಿದೆ.

ಅ.೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಪೊರೆನಾಲ್‌ನಾಡ್ (ಬುಟ್ಟಂಗಾಲ-ನಾAಗಲ) ಪಟ್ಟಿಬಾಣೆ ನಾಡ್ ಮಂದ್, ಮಧ್ಯಾಹ್ನ ೨.೩೦ಕ್ಕೆ ಬೊಟೋಳಿನಾಡ್ ನಾಡ್ ಮಂದ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಂಜಿಗೇರಿ ನಾಡ್ -ಮಡಕೋಡ್ ನಾಡ್ ಮಂದ್

ಹುದಿಕೇರಿ ಪಟ್ಟಣ, ಅಂಜಿಗೇರಿ ನಾಡ್ -ಮಡಕೋಡ್ ನಾಡ್ ಮಂದ್‌ನಲ್ಲಿ ಕೊಡವ ಲ್ಯಾಂಡ್ ಪಾದಯಾತ್ರೆ ನಡೆಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಕುರಿತು ವಿವರಿಸಿದರು.