ಕೂಡಿಗೆ, ಅ. ೧೨: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಉಪ ಗ್ರಾಮಗಳ ಸರಕಾರಿ ಕೆರೆ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಿ ಕೆರೆಯ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಹಸ್ತಾಂತರಿಸಲಾಯಿತು.
ಹೆಬ್ಬಾಲೆ ಗ್ರಾಮದ ಹುಲುಸೆ ಗ್ರಾಮದ ಸರ್ವೆ ನಂಬರ್ ೨ರಲ್ಲಿ ೩೮ ಸೆಂಟು, ೬ನೇ ಹೊಸಕೋಟೆಯ ಸರ್ವೆ ನಂಬರ್ ೩೯ ರಲ್ಲಿ ೨.೦೨ ಎಕರೆ, ಹಳೆಗೋಟೆ ಗ್ರಾಮದ ಸರ್ವೆ ನಂಬರ್ ೫೯ ರಲ್ಲಿ ೧.೬೬ ಎಕರೆ ಜಾಗಗಳ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕುಶಾಲನಗರ ಕಂದಾಯ ಇಲಾಖೆಯ ಪರಿ ವಿಕ್ರಮ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಪೀರ್ ಮಹಮ್ಮದ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.