*ಗೋಣಿಕೊಪ್ಪ, ಅ. ೧೨: ದಸರಾ ಪ್ರಯುಕ್ತ ತಾ.೨೩ ರಂದು ಗೋಣಿಕೊಪ್ಪ ದಲ್ಲಿ ಆಯುಧ ಪೂಜಾ ಮತ್ತು ಸಾರ್ವಜನಿಕರಿಗೆ ಗ್ರೀಸ್ ಹಚ್ಚಿದ ಕಂಬ ಹತ್ತುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ ತಿಳಿಸಿದ್ದಾರೆ.

ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ೧೨ನೇ ವರ್ಷದ ಸ್ಪರ್ಧೆಯಾಗಿದ್ದು, ಗೋಣಿಕೊಪ್ಪ ಬಸ್ ನಿಲ್ದಾಣದದಲ್ಲಿ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಯಿAದ ಸಂಜೆವರೆಗೆ ನಡೆಯಲಿದೆ. ನಗದು ಮತ್ತು ಬಹುಮಾನ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ ೭ ಗಂಟೆಗೆ ಸಂಘದ ಕಚೇರಿಯಲ್ಲಿ ಗಣಪತಿ ಹೋಮ, ಆಟೋ ನಿಲ್ದಾಣದಲ್ಲಿ ಬೆ. ೮ ಗಂಟೆಗೆ ಚಾಮುಂಡೇಶ್ವರಿ ಪೂಜೆ ನಡೆಯಲಿದೆ. ಆಟೋ ಚಾಲಕರು ಅಟೋವನ್ನು ಹೂವಿನಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಾರೆ ಎಂದು ತಿಳಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೭ ಗಂಟೆಗೆ ಬಸ್ ನಿಲ್ದಾಣದಲ್ಲಿ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಉಪಾಧ್ಯಕ್ಷ ಜಾನಿ, ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ರಾಜ ಇದ್ದರು.