ಗೋಣಿಕೊಪ್ಪಲು, ಅ. ೧೩: ಸುಮಾರು ೧೦ ಅಡಿ ಉದ್ದದ ಗಾಯಗೊಂಡ ನಾಗರ ಹಾವಿಗೆ ಚಿಕಿತ್ಸೆ ನೀಡುವ ಮೂಲಕ ಅದನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ಸ್ಥಳೀಯ ಕೆಇಬಿ ಕಚೇರಿ ಬಳಿ ನಾಗರ ಹಾವೊಂದು ಮಧ್ಯಾಹ್ನದ ವೇಳೆ ಅಡ್ಡಾಡುತ್ತಿರುವುದನ್ನು ಗಮನಿಸಿದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ವಿಜಯ್ ಕುಮಾರ್ ಹಾವನ್ನು ಸ್ನೇಹಿತರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಹಾವು ಮುಂದೆ ಚಲಿಸಲು ಕಷ್ಟಪಡುತ್ತಿರುವುದನ್ನು ಗಮನಿಸಿದ ಇವರು ಅದನ್ನು ಸ್ನೇಕ್ ಸುಗಂಧರವರ ಸಹಾಯದಿಂದ ಪೊನ್ನಂಪೇಟೆ ಪಶು ವೈದ್ಯ ಇಲಾಖೆಗೆ ತರುವ ಮೂಲಕ ಅಲ್ಲಿಯ ವೈದ್ಯರಾದ ಡಾ.ಶಾಂತೇಶ್ರವರಿAದ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವಿನ ವಿವಿಧ ಭಾಗದಲ್ಲಿ ಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ನೀಡಿದ್ದಾರೆ.
(ಮೊದಲ ಪುಟದಿಂದ) ನಂತರ ನಾಗರ ಹಾವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ್ ಕುಮಾರ್ರವರ ಸಾಮಾಜಿಕ ಕಳಕಳಿಯನ್ನು ಸ್ಥಳೀಯ ನಾಗರಿಕರು ಪ್ರಶಂಸಿಸಿದ್ದಾರೆ.
ಸೂಕ್ತ ಚಿಕಿತ್ಸೆ : ರಸ್ತೆ ಬದಿಯಲ್ಲಿ ನೋವಿನಿಂದ ಕಷ್ಟ ಅನುಭವಿಸುತ್ತಿದ್ದ ನಾಗರ ಹಾವನ್ನು ರಕ್ಷಿಸಿದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಅದನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಂದಿದ್ದರು. ಹಾವು ಪೊರೆ ಕಳಚಿ ವಾರ ಕಳೆದಿದೆ. ತನ್ನ ಮೈಮೇಲೆ ಕಚ್ಚಿಕೊಂಡು ಗಾಯಮಾಡಿಕೊಂಡಿರುವುದು ಕಂಡು ಬಂದಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಹಾವು ಚೇತರಿಸಿಕೊಂಡಿದೆ. ಚಿಕಿತ್ಸೆ ನಂತರ ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಹಾವನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಪರೂಪ ಸಂದರ್ಭದಲ್ಲಿ ಹಾವು ತನ್ನನ್ನೆ ಕಚ್ಚಿಕೊಳ್ಳುವ ಸಂಭವವಿರುತ್ತದೆ ಎಂದು ಡಾ. ಶಾಂತೇಶ್ ತಿಳಿಸಿದರು.
-ಹೆಚ್.ಕೆ. ಜಗದೀಶ್