ಕುಶಾಲನಗರ, ಅ.೧೨ : ರಾಜ್ಯದ ಎಲ್ಲೆಡೆ ಹಾನಿಕಾರಕ ಪಟಾಕಿಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡುತ್ತಿರುವ ಬಗ್ಗೆ ಸರಕಾರದಿಂದ ಆದೇಶ ಹೊರ ಬಿದ್ದಿದ್ದು ಕೊಡಗು ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರು ಕುಶಾಲನಗರಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಅದೇಶದನ್ವಯ ಜಿಲ್ಲೆಯಲ್ಲಿ ಪಟಾಕಿ ಮಾರಾಟಗಾರ ಅಂಗಡಿ, ಗೋದಾಮುಗಳ ಪರಿಶೀಲನೆ ನಿರಂತರವಾಗಿ ನಡೆಯುತ್ತಿದೆ. ವಸತಿ ಪ್ರದೇಶದಲ್ಲಿ ಹಾನಿಕಾರಕ ಪಟಾಕಿ ಮಾರಾಟ ಕಾನೂನುಬಾಹಿರವಾಗಿದ್ದು ಯಾವುದೇ ಭಾಗದಲ್ಲಿ ಮಾರಾಟ ಹಾಗೂ ದಾಸ್ತಾನು ಇಟ್ಟಿರುವುದು ಗಮನಕ್ಕೆ ಬಂದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.
ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಕ್ಷಣ ಕಂದಾಯ ಇಲಾಖೆಗೆ ವಿಷಯ ತಿಳಿಸುವಂತೆ ಅವರು ಕೋರಿದ್ದಾರೆ. ಕುಶಾಲನಗರದ ಬೈಪಾಸ್ ರಸ್ತೆಯ ಪಟಾಕಿ ಮಾರಾಟಗಾರರ ಗೋದಾಮು ಗುರುವಾರ ಪರಿಶೀಲನೆ ಸ್ಥಳೀಯ ಅಧಿಕಾರಿ ಗಳೊಂದಿಗೆ ಜಿಲ್ಲಾಧಿಕಾರಿ ಗಳು ನಡೆಸಿದರು.
ಅನಧಿಕೃತವಾಗಿ ಪಟಾಕಿ ಮಾರಾಟ ಅಥವಾ ಗೋದಾಮಿನಲ್ಲಿ ಸಂಗ್ರಹ ಮಾಡುವುದು ನಿಯಮ ಭಾಹಿರವಾಗಿದ್ದು ಸಂಬAಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಪಟಾಕಿ ಮಾರಾಟಕ್ಕೆ ಸಂಬAಧಿಸಿದ ಎಲ್ಲ ಇಲಾಖೆಗಳಿಂದ ಪರವಾನಗಿ ಪಡೆದ ನಂತರ ಜಿಲ್ಲಾಡಳಿತದಿಂದ ಅಧಿಕೃತ ಪರವಾನಗಿ ಪಡೆಯಬೇಕು. ಜಿಲ್ಲೆಯ ತಹಶೀಲ್ದಾರ್ ನೇತೃತ್ವದಲ್ಲಿ ನಿಗಾವಹಿಸಲು ಸೂಚಿಸಿದ್ದೇನೆ.
ಈ ಸಾಲಿನ ವ್ಯಾಪಾರಕ್ಕಾಗಿ ಇದುವರೆಗೂ ಯಾರು ಕೂಡ ಪರವಾನಗಿ ಪಡೆದಿಲ್ಲ. ಜಿಲ್ಲೆಯಲ್ಲಿ ಸಂಬAಧಿಸಿದ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದು ಅನಧಿಕೃತ ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ತಹಶೀಲ್ದಾರ್ ಕಿರಣ್ ಗೌರಯ್ಯ , ಕಂದಾಯ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಿಗ ಗೌತಮ್, ಕುಶಾಲನಗರದ ಪಟಾಕಿ ಉದ್ಯಮಿ ಗಳಾದ ರಾಮಚಂದ್ರ, ಮುರಳಿ,. ರಾಘವೇಂದ್ರ ಇತರರು ಸ್ಥಳದಲ್ಲಿದ್ದರು.