ಕುಶಾಲನಗರ, ಅ.೧೨ : ಮಾಜಿ ಸೈನಿಕರ ಸಂಘಗಳ ನೂತನ ಒಕ್ಕೂಟಕ್ಕೆ ಸೇರ್ಪಡೆಯಾಗಲು ಕುಶಾಲನಗರದ ಮಾಜಿ ಸೈನಿಕರ ಸಂಘ ಇಚ್ಚಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ನಿವೃತ್ತ ಕ್ಯಾ. ಡಿ.ಕೆ. ಚಿಣ್ಣಪ್ಪ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಜಿಲ್ಲೆಯ ಮಾಜಿ ಸೈನಿಕರ ಸಂಘಗಳೊAದಿಗೆ ಚರ್ಚಿಸಿ ಮಾಜಿ ಸೈನಿಕರ ಸಂಘಗಳ ಒಕ್ಕೂಟ ರಚನೆ ಬಗ್ಗೆ ನಡೆದ ಸಭೆಯಲ್ಲಿ ಎಲ್ಲಾ ಸಂಘಗಳು ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದು ವರದಿಗಳು ಕಂಡುಬAದಿವೆ.

ಕುಶಾಲನಗರ ಮಾಜಿ ಸೈನಿಕರ ಸಂಘ ಸ್ವತಂತ್ರ ಸಂಘವಾಗಿದ್ದು ಒಕ್ಕೂಟಕ್ಕೆ ಸೇರ್ಪಡೆಯಾಗಲು ಯಾವುದೇ ರೀತಿಯ ಸಮ್ಮತಿ ಸೂಚಿಸಿಲ್ಲ, ಇದು ಅವರ ಏಕ ಪಕ್ಷಿಯ ನಿರ್ಧಾರವಾಗಿದ್ದು ಒಕ್ಕೂಟಕ್ಕೆ ಸೇರ್ಪಡೆಯಾಗುವ ಆಶಯ ಇಲ್ಲ ಎಂದು ಸ್ಪಷ್ಟಪಡಿಸಿದರು .

ಇತ್ತೀಚೆಗಷ್ಟೇ ಕುಶಾಲನಗರ ಮಾಜಿ ಸೈನಿಕರ ಸಂಘ ತನ್ನ ಬೆಳ್ಳಿಹಬ್ಬ ಆಚರಿಸಿದೆ. ಸಂಘದ ಮೂಲಕ ಮಾಜಿ ಸೈನಿಕರ ಸಮಸ್ಯೆಗಳಿಗೆ ಹೋರಾಡಲು ಸಂಘ ಸದಾ ಸಿದ್ದವಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಮನು ನಂಜುAಡ ಮಾತನಾಡಿ, ನಮ್ಮ ಜೊತೆ ಚರ್ಚಿಸದೆ ಒಕ್ಕೂಟ ರಚನೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕೂಡ ಮಾಜಿ ಸೈನಿಕರ ಸಂಘವಿದೆ. ಅವರ ಸಹಕಾರ ಕೂಡ ನಮ್ಮ ಸಂಘಕ್ಕಿದೆ. ಮಾಜಿ ಸೈನಿಕರ ಕುಟುಂಬಗಳ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಹೋರಾಡುವುದು ಮೂಲ ಉದ್ದೇಶವಾಗಿದ್ದು ಇದಕ್ಕೆ ಪ್ರತ್ಯೇಕವಾಗಿ ಒಕ್ಕೂಟ ಅವಶ್ಯಕತೆ ಇಲ್ಲ ಎಂದರು.

ಮಾಜಿ ಸೈನಿಕರ ಪರವಾಗಿ ಸಂಘ ಸದಾ ಇರುತ್ತದೆಯೇ ಹೊರತು ಒಕ್ಕೂಟಕ್ಕೆ ನಮ್ಮ ಸಹಮತ ಇಲ್ಲ ಎಂದು ತಿಳಿಸಿದರು. ಈ ಸಂದರ್ಭ ಕುಶಾಲನಗರ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಎಸ್.ಆರ್.ಮಾದಪ್ಪ, ಖಜಾಂಚಿ ನರೇಶ್ ಕುಮಾರ್ ಇದ್ದರು.