ಶನಿವಾರಸಂತೆ, ಅ. ೧೧: ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ಶಿಕ್ಷಕರಿಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಯನ್ನು ಏರ್ಪಡಿಸಲಾಗಿತ್ತು.

ಪಂದ್ಯಾವಳಿಯಲ್ಲಿ ತಾಲೂಕಿನ ೧೦ ತಂಡಗಳು ಭಾಗವಹಿಸಿದ್ದು ಶನಿವಾರಸಂತೆಯ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕರ ತಂಡ ಅಂತಿಮ ಪಂದ್ಯಾಟದಲ್ಲಿ ಗೆಲುವು ಸಾಧಿಸಿತು.

ಶನಿವಾರಸಂತೆಯ ಶಿಕ್ಷಕರ ತಂಡ ಮೊದಲಿಗೆ ಕೂಡಿಗೆ ಹಾಗೂ ಕುಶಾಲನಗರ ಕ್ಲಸ್ಟರ್ ತಂಡಗಳನ್ನು ಸೋಲಿಸಿ, ಸೆಮಿಫೈನಲ್‌ನಲ್ಲಿ ಗೋಣಿಮರೂರು ಕ್ಲಸ್ಟರ್ ತಂಡವನ್ನು ಮಣಿಸಿ, ಫೈನಲ್‌ನಲ್ಲಿ ಮಾದಾಪುರ ಕ್ಲಸ್ಟರ್ ತಂಡವನ್ನು ಸೋಲಿಸಿ ಗೆಲುವಿನ ನಗೆಬೀರಿತು.

ಪಂದ್ಯಾವಳಿಯಲ್ಲಿ ಶನಿವಾರಸಂತೆ ಕ್ಲಸ್ಟರ್ ತಂಡದ ನಾಯಕ ಸಂದೇಶ್ರವರ ಬಿರುಸಿನ ಬ್ಯಾಟಿಂಗ್, ಸಮರ್ಥ ಬೌಲರ್ ಮತ್ತು ತಂಡವನ್ನು ಮುನ್ನಡೆಸಿದ ಕಾರಣಕ್ಕೆ ಸರಣಿ ಪುರುಷೋತ್ತಮ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ತಂಡದಲ್ಲಿ ಶಿಕ್ಷಕರಾದ ಸರ್ಫ್ರಾಜ್ ಅಹಮದ್, ತಿಲಕ್, ಆದಿತ್ಯ, ಅಶೋಕ್, ಮೊಹಮ್ಮದ್ ಝಹೀರ್, ತೀರ್ಥಾನಂದ್, ಪವನ್, ಶರತ್, ಅಶ್ವಥ್, ಪುಟ್ಟರಾಜ್, ಜಯಕುಮಾರ್, ಶಿವಪ್ರಕಾಶ್, ಷಣ್ಮುಖಯ್ಯ, ರಂಗಸ್ವಾಮಿ, ರಾಜೇಶ್, ಲಾಂಛನ್ ಪಾಲ್ಗೊಂಡಿದ್ದು ಉತ್ತಮ ಪ್ರದರ್ಶನ ನೀಡಿದರು. ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ತಂಡದ ವ್ಯವಸ್ಥಾಪಕರಾಗಿ ಹಾಗೂ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದರು.