ವೀರಾಜಪೇಟೆ, ಅ. ೧೧: ಧಾರ್ಮಿಕ ಕಾರ್ಯ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸುವ ಮನಸುಗಳು ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವುದರಿAದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ-ಸAಸ್ಥೆಗಳಿಗೆ ಸಹಕಾರಿಯಾಗುತ್ತಿದೆ ಎಂದು ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಪಾಂಡAಡ ರಚನ್ ಮೇದಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಬಾಲಾಂಜನೇಯ ದೇವಾಲಯದ ಸಭಾಂಗಣದಲ್ಲಿ ನಡೆದ ಬಾಲಾಂಜನೇಯ ಗಣೇಶೋತ್ಸವ ಸೇವಾ ಸಮಿತಿಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರ್ಮಿಕ ಆಚರಣೆಗಳನ್ನು ಸಂಘ-ಸAಸ್ಥೆಗಳ ಮೂಲಕ ಆಚರಿಸುವುದರಿಂದ ಸಮಾಜದಲ್ಲಿ ಒಗ್ಗಟ್ಟು ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ. ಗಣೇಶೋತ್ಸವದ ಸಂದರ್ಭ ಸಾಕಷ್ಟು ಮಂದಿ ಸಮಿತಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ವಿಧದಲ್ಲಿ ನೆರವು ನೀಡಿದ್ದು, ಉತ್ಸವ ಆಚರಣೆಗೆ ಮೆರಗು ನೀಡಿದ್ದಾರೆ. ಬಾಲಾಂಜನೇಯ ದೇವಾಲಯ ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕಾಗಿರುವುದರಿಂದ ದಾನಿಗಳು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.

ಸಮಿತಿಯ ಉಪಾಧ್ಯಕ್ಷ ಅಂಜಪರವAಡ ಅನಿಲ್ ಮಂದಣ್ಣ ಮಾತನಾಡಿ, ಉತ್ಸವಕ್ಕೆ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ದೇವಾಲಯದ ಧರ್ಮದರ್ಶಿ ಬಾಬ ಶಂಕರ್ ಹಾಗೂ ಸಮಿತಿಯ ಚೇತನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಮಿತಿಯ ಕಾರ್ಯದರ್ಶಿ ಶಶಿ ಕುಮಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಮಿತಿಯ ಪದಾಧಿಕಾರಿಗಳಾದ ಶಾನ್ ಚಂಗಪ್ಪ, ಬೊಳ್ಳಂಡ ರಾಜ ತಿಮ್ಮಯ್ಯ, ಹೇಮಂತ್, ಮಾಳೇಟಿರ ಸುಕಿನ್, ಸಂದೀಪ್, ಲಕ್ಷಿö್ಮÃಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.