ಮಡಿಕೇರಿ, ಅ ೧೧ : ಮಡಿಕೇರಿ ದಸರಾ ಅಂಗವಾಗಿನ ಸಾಂಸ್ಕೃತಿಕ ಕಾರ್ಯಕ್ರಮಗಳು ತಾ. ೧೬ ರಿಂದ ೨೪ ರವರೆಗೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜರುಗಲಿದ್ದು, ಈ ವರ್ಷ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸ್ಥಳೀಯ ಮತ್ತು ಹೊರಜಿಲ್ಲೆಯ ಕಲಾವಿದರಿಂದ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಪ್ರತಿ ನಿತ್ಯ ಸಂಜೆ ೬.೩೦ ಗಂಟೆಯಿAದ ಸಾಂಸ್ಕೃತಿಕ ವೈವಿಧ್ಯತೆಯ ಕಾರ್ಯಕ್ರಮಗಳು ಪ್ರದರ್ಶಿತಗೊಳ್ಳಲಿದೆ.
ತಾ. ೧೬ ರಂದು ಅಂತರರಾಷ್ಟಿçÃಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾ ಅವರ ತಂಡದಿAದ ವಾದ್ಯ ಮತ್ತು ಸಂಗೀತ ಕಾರ್ಯಕ್ರಮ ಇರುತ್ತದೆ. ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿAದ ನೃತ್ಯ ವೈವಿಧ್ಯ, ಮಡಿಕೇರಿಯ ಕಲಾಕಾವ್ಯ ನೃತ್ಯ ಶಾಲೆಯಿಂದ ನೃತ್ಯವೈವಿಧ್ಯ, ಮದೆನಾಡಿನ ಶ್ರೀ ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ಶಿವಚರಿತಾಮೃತಂ ನೃತ್ಯ ರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮೊದಲ ದಿನದ ಆಕರ್ಷಣೆಯಾಗಿದೆ.
ತಾ. ೧೭ ರಂದು ಮಂಗಳವಾರ ಮಡಿಕೇರಿಯ ನಾಟ್ಯ ನಿಕೇತನ ನೃತ್ಯ ಶಾಲಾ ತಂಡದಿAದ ನೃತ್ಯ ವೈವಿಧ್ಯ, ಕುಶಾಲನಗರದ ಕುಂದನ ನಾಟ್ಯಾಲಯ ತಂಡದಿAದ, ಶ್ರೀ ಮಂಜುನಾಥ ಮಹಿಮೆ ನೃತ್ಯ ರೂಪಕ, ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿAದ ಭಾರತೀಯ ಶಾಸ್ತಿçÃಯ ನೃತ್ಯ, ಕುಶಾಲನಗರದ ಟೀಮ್ ಆ್ಯಟಿಟ್ಯೂಡ್ ತಂಡದಿAದ ನೃತ್ಯ ವೈವಿಧ್ಯ ಹಾಗೂ ಮಡಿಕೇರಿಯ ಮುತ್ತಿನ ಹಾರ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜಿತವಾಗಿದೆ.
ತಾ. ೧೮ ರಂದು ಚಿಕ್ಕಮಗಳೂರಿನ ಹೆಸರಾಂತ ಗಾಯಕ ಸಾಯಿ ಸತೀಶ್ ಅವರಿಂದ ಭಕ್ತಿಸುಧೆ, ಮೂರ್ನಾಡುವಿನ ಸ್ಟೇಪ್ ಅಪ್ ಶೇಡ್ಸ್ ತಂಡದಿAದ ನೃತ್ಯ ವೈವಿಧ್ಯ, ಮೇಕೇರಿಯ ಶ್ರೀಗೌರಿಶಂಕರ ಕಲಾಟ್ರಸ್ಟ್ನಿಂದ ಶ್ರೀರಾಮಚರಿತ ನೃತ್ಯರೂಪಕ, ಪುತ್ತೂರಿನ ಶ್ರೀದೇವಿ ನೃತ್ಯಾರಾಧನ ಕೇಂದ್ರದಿAದ ನೃತ್ಯ ಪ್ರೇರಣ ಹಾಗೂ ಮಡಿಕೇರಿಯ ಸ್ವರಶಾರದಾ ತಂಡದಿAದ ಗಾನವೈಭವ ಕಾರ್ಯಕ್ರಮ ಆಯೋಜಿತವಾಗಿದೆ.
ತಾ. ೧೯ ರಂದು ಕುಶಾಲನಗದ ಶಾರದಾ ಕಲಾತಂಡದಿAದ ಜಾನಪದ ವೈವಿಧ್ಯ, ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ತಂಡದಿAದ
(ಮೊದಲ ಪುಟದಿಂದ) ನೃತ್ಯ ವೈವಿಧ್ಯ, ವೀರಾಜಪೇಟೆಯ ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆಯಿAದ ನೃತ್ಯ ವೈವಿಧ್ಯ, ಮಡಿಕೇರಿಯ ಪೊಮ್ಮಕ್ಕಡ ಕೂಟದಿಂದ ನೃತ್ಯ, ಕೆ.ಪಿ.ಎಸ್. ಬೀಟ್ಸ್ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ತಂಡದಿAದ ಸಂಗೀತ ರಸಮಂಜರಿ ಆಯೋಜಿಸಲ್ಪಟ್ಟಿದೆ.
ತಾ. ೨೦ ರಂದು ಮಕ್ಕಳ ದಸರಾ ಅಂಗವಾಗಿ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳಿಂದಲೇ ಸಂತೆ, ಅಂಗಡಿ, ಮಂಟಪ ಸ್ಪರ್ಧೆಗಳು ಜರುಗಲಿದ್ದು, ಇವುಗಳೊಂದಿಗೆ ಕ್ಲೇಮಾಡೆಲಿಂಗ್, ಛದ್ಮವೇಶ ಸ್ಪರ್ಧೆಗಳು ಆಯೋಜಿತವಾಗಿದೆ.
ಅಂದು ಸಂಜೆ ೬.೩೦ ಗಂಟೆಯಿAದ ಮಕ್ಕಳ ತಂಡಗಳಿAದ ಆಕರ್ಷಕ ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು ಸರಿಗಮಪದ ಲಿಟಲ್ ಛಾಂಪ್ ವಿಜೇತೆ ಕುಶಾಲನಗರದ ಪ್ರಗತಿ ಬಡಿಗೇರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಡಿಕೇರಿಯ ಗುರುಕುಲ ಕಲಾ ಮಂಡಳಿ ತಂಡದಿAದ ನೃತ್ಯ, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದಿAದ ನೃತ್ಯ ವೈವಿಧ್ಯ, ಬೆಂಗಳೂರಿನ ಪ್ರತಿಭೆಗಳಾದ ಭೂಮಿಕ, ದೀಪಿಕ ಅವರಿಂದ ಗಾನವೈಭವ, ಅಂತರರಾಷ್ಟಿçÃಯ ಖ್ಯಾತಿಯ ಅಶೋಕ ಪೊಳಲಿ ಮತ್ತು ತಂಡದಿAದ ವೈವಿಧ್ಯಮಯ ನೃತ್ಯ ಪ್ರದರ್ಶನ ಮಕ್ಕಳೊಂದಿಗೆ ಹಿರಿಯರ ಮನಸೂರೆಗೊಳ್ಳಲಿದೆ.
ತಾ. ೨೧ ರಂದು ಯುವದಸರಾ ಅಂಗವಾಗಿ ವಿವಿಧ ಆಕರ್ಷಕ ಕಾರ್ಯಕ್ರಮಗಳು ಜರುಗಲಿದೆ.
ತಾ. ೨೨ ರಂದು ೮ನೇ ವರ್ಷದ ಮಹಿಳಾ ದಸರಾ ಆಯೋಜಿತವಾಗಿದ್ದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ಮಡಿಕೇರಿ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಸಂಜೆ ೬ ಗಂಟೆಗೆ ಶಾಸಕ ಡಾ. ಮಂಥರ್ ಗೌಡ ಅವರ ಸಹಕಾರದಲ್ಲಿ ದೇಶದ ಹೆಸರಾಂತ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿAದ ಮಹಿಳಾ ದಸರಾದ ವಿಶೇಷ ಆಕರ್ಷಣೆಯಾಗಿ ಸಂಗೀತ ವೈಭವ ಕಾರ್ಯಕ್ರಮ ಆಯೋಜಿಸಲ್ಪಟ್ಟಿದೆ.
ತಾ. ೨೩. ರಂದು ಆಯುಧಪೂಜೆ ಕಾರ್ಯಕ್ರಮ ಇರುತ್ತದೆ. ಶ್ರೀ ಕಾಮಾಕ್ಷಿ ಮಹಿಳಾ ಸಂಘದಿAದ ಕಥಕ್ಕಳಿ, ಯುವ ಜಾನಪದ ಬಳಗ ವತಿಯಿಂದ ಜಾನಪದ ನೃತ್ಯ, ಮಂಗಳೂರಿನ ತಾಂಡವA ಡಾನ್ಸ್ ಅಕಾಡೆಮಿಯಿಂದ ನೃತ್ಯರಂಗ್, ಚಕ್ಕೇರ ಪಂಚಮ್ ತ್ಯಾಗರಾಜ್ ಮತ್ತು ತಂಡದಿAದ ಗಾನಸುಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತಾ. ೨೪ ರಂದು ವಿಜಯದಶಮಿ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುದ್ರ ಸ್ಕೂಲ್ ಆಫ್ ಡಾನ್ಸ್ ತಂಡದಿAದ ನೃತ್ಯ ವೈವಿಧ್ಯ, ಉಡುಪಿಯ ಭಾರ್ಗವಿ ಡಾನ್ಸ್ ಟೀಮ್ ನಿಂದ ಗ್ರಾವಿಟಿ ಡಾನ್ಸ್ ಸೇರಿದಂತೆ ಕಾರ್ಯಕ್ರಮ ವೈವಿಧ್ಯಗಳಿರುತ್ತದೆ. ರಾತ್ರಿ ೧೦ ಗಂಟೆಯಿAದ ಬೆಳಗ್ಗಿನ ಜಾವ ೫ ಗಂಟೆಯವರೆಗೆ ರಾಜ್ಯದ ಹೆಸರಾಂತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.