ಕೂಡಿಗೆ, ಅ. ೧೧: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಶಾಲಾ ಮಕ್ಕಳ ರಾಜ್ಯಮಟ್ಟದ ಹಾಕಿ ಪಂದ್ಯಾಟ ಮುಕ್ತಾಯಗೊಂಡಿದೆ.

ಬೆಳಿಗ್ಗೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಹಾಕಿಯ ತವರಾದ ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಕ್ರೀಡಾ ಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹ ಅನನ್ಯವಾದುದು ಎಂದರು. ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಜಿಲ್ಲೆ ಯಲ್ಲಿ ನಡೆಯಲಿರುವ ರಾಷ್ಟಿçÃಯ ೧೭ ವಯೋಮಾನದ ಬಾಲಕಿಯರ ಹಾಕಿ ಟೂರ್ನಿಯ ಯಶಸ್ಸಿಗೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕ ಬಿ.ಟಿ. ದೇವಕುಮಾರ್ ಮಾತನಾಡಿ, ಕ್ರೀಡೆ ಯಲ್ಲಿ ಸೋಲು- ಗೆಲುವು ಮುಖ್ಯ ವಲ್ಲ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಸ್ಪೂರ್ತಿ ಬೆಳೆಸಿ ಕೊಳ್ಳುವುದು ಮುಖ್ಯ ಎಂದರು.

ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿ ವಿತರಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಕ್ರೀಡಾಪಟುಗಳಿಗೆ ಶುಭ ಹಾರಿಸಿದರು.

ಕ್ರೀಡಾಳುಗಳಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಟಿ. ಪೂರ್ಣೇಶ್ ಹಾಗೂ ಕೂಡುಮಂಗ ಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಪದಕಗಳನ್ನು ವಿತರಿಸಿದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್. ಸುಕುಮಾರಿ, ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಎನ್.ಎಲ್. ಸುರೇಶ್ ಕುಮಾರ್ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.

ಕ್ರೀಡಾಶಾಲೆಯ ತರಬೇತುದಾರ ಎ.ಸಿ. ದಿನಮಣಿ, ಟೂರ್ನಿಯ ತಾಂತ್ರಿಕ ವಿಭಾಗದ ಅಧಿಕಾರಿಗಳಾದ ಕೆ.ಎಚ್. ಗಣೇಶ್ ಕುಮಾರ್, ಪಿ.ಇ. ನಂದ, ಎನ್.ಎಲ್. ಸುರೇಶ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಲ್. ಸಂದೇಶ್, ಎನ್.ಡಿ. ಸೋಮಶೇಖರ್, ಎಚ್.ಎನ್. ರತೀಶ್, ಗಾನದ ಗಣಪತಿ, ನಾಗೇಶ್ ಈಶ್ವರ್, ದೇವಾನಂದ್, ಕಲಾವಿದ ಬರ್ಮಣ್ಣ ಬೆಟ್ಟಗೇರಿ, ಕೆ.ಎಚ್. ಗಾಯಿತ್ರಿ, ಶ್ರೀಕಲಾ, ಕೆ. ವಿಜಯಲಕ್ಷಿö್ಮ, ಜಿ.ಎಸ್. ಶೈಲಾ, ಎನ್. ಆಶಾ, ಸಿ.ಕೆ. ಭಾರತಿ ಇತರರು ಇದ್ದರು. ಬೆಂಗಳೂರಿನ ಕ್ರೀಡಾಪ್ರೇಮಿ ಕೆ.ಎಸ್.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್. ಸುಕುಮಾರಿ, ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಎನ್.ಎಲ್. ಸುರೇಶ್ ಕುಮಾರ್ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.

ಕ್ರೀಡಾಶಾಲೆಯ ತರಬೇತುದಾರ ಎ.ಸಿ. ದಿನಮಣಿ, ಟೂರ್ನಿಯ ತಾಂತ್ರಿಕ ವಿಭಾಗದ ಅಧಿಕಾರಿಗಳಾದ ಕೆ.ಎಚ್. ಗಣೇಶ್ ಕುಮಾರ್, ಪಿ.ಇ. ನಂದ, ಎನ್.ಎಲ್. ಸುರೇಶ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಲ್. ಸಂದೇಶ್, ಎನ್.ಡಿ. ಸೋಮಶೇಖರ್, ಎಚ್.ಎನ್. ರತೀಶ್, ಗಾನದ ಗಣಪತಿ, ನಾಗೇಶ್ ಈಶ್ವರ್, ದೇವಾನಂದ್, ಕಲಾವಿದ ಬರ್ಮಣ್ಣ ಬೆಟ್ಟಗೇರಿ, ಕೆ.ಎಚ್. ಗಾಯಿತ್ರಿ, ಶ್ರೀಕಲಾ, ಕೆ. ವಿಜಯಲಕ್ಷಿö್ಮ, ಜಿ.ಎಸ್. ಶೈಲಾ, ಎನ್. ಆಶಾ, ಸಿ.ಕೆ. ಭಾರತಿ ಇತರರು ಇದ್ದರು. ಬೆಂಗಳೂರಿನ ಕ್ರೀಡಾಪ್ರೇಮಿ ಕೆ.ಎಸ್. ಹರೀಶ್ ಪ್ರಾರ್ಥಿಸಿದರು. ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

ಮೂರು ದಿನಗಳ ಕಾಲ ನಡೆದ ಹಾಕಿ ಪಂದ್ಯಾಟದ ಅಂತಿಮ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಕಿರಿಯ ಬಾಲಕರು ಮತ್ತು ಹಿರಿಯ ಬಾಲಕಿಯರ ವಿಭಾಗದ ಎರಡು ತಂಡಗಳು ರಾಷ್ಟಿçÃಯ ಹಾಕಿ ಟೂರ್ನಿಗೆ ಆಯ್ಕೆಯಾಗಿವೆ.

೧೪ ವಯೋಮಾನದ ಬಾಲಕರ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದಿಂದ ಗೋಣಿಕೊಪ್ಪ ಲಯನ್ಸ್ ಶಾಲಾ ತಂಡದ ಬಾಲಕರು ಹಾಗೂ ೧೭ ವಯೋಮಾನದ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದಿಂದ ಮಡಿಕೇರಿ ನಗರದ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲಾ ಬಾಲಕಿಯರ ತಂಡವು ರಾಷ್ಟಿçÃಯ ಹಾಕಿ ಟೂರ್ನಿಗೆ ಆಯ್ಕೆಯಾಗಿದೆ.