ವೀರಾಜಪೇಟೆ, ಅ. ೧೧: ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ಇವರ ವತಿಯಿಂದ ೧೬ನೇ ವರ್ಷದ ಅದ್ಧೂರಿ ಆಯುಧ ಪೂಜಾ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ತಾ.೨೩ ರಂದು ನಡೆಯಲಿದೆ ಎಂದು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಕುಂಬೆಯAಡ ಸುರೇಶ್ ದೇವಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೨೩ ರಂದು ಬೆಳಿಗ್ಗೆ ೯ಕ್ಕೆ ಸಂಘದ ಕಚೇರಿಯಲ್ಲಿ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದೆ. ೧೦-೩೦ ಗಂಟೆಗೆ ಸ್ಥಳಿಯ ಕಲಾ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ವೀರಾಜಪೇಟೆ ಕೊಡಗು ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಬಿ.ಆರ್. ಗಣೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭವನ್ನು ಏಕಲವ್ಯ ಮಾದರಿ ವಸತಿ ಶಾಲಾ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕಾವೇರಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ, ಕಾಫಿ ಬೆಳೆಗಾರರಾದ ಕಂಜಿತAಡ ವಿಕ್ರಾಂತ್, ನೆಲ್ಲಮಕ್ಕಡ ಶಿವಪ್ಪ, ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಚೇನಂಡ ಗಿರೀಶ್ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ ಸಾರ್ವಜನಿಕರಿಗೆ ಅನ್ನದಾನ ನಡೆಯಲಿದೆ.

ಅಪರಾಹ್ನ ೩ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಖಾಸಗಿ ಬಸ್ ಮಾಲೀಕರ ಸಂಘ ವೀರಾಜಪೇಟೆ ಇದರ ಉಪಾಧ್ಯಕ್ಷ ಪಿ.ಎಂ. ಕಾವೇರಪ್ಪ, ಪ್ರಗತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಮಾದಂಡ ತಿಮ್ಮಯ್ಯ, ನಿವೃತ್ತ ಉಪತಹಶೀಲ್ದಾರ್ ಸಿ.ಕೆ ಪೊನ್ನಪ್ಪ, ಹ್ಯಾಪಿ ಶಾಪಿಂಗ್ ಮಾಲೀಕ ಕೆ.ಎ ಶಾಲಿ, ದಿ ಡ್ಯಾನ್ಸ್ ರಿವಲ್ಯೂಷನ್ ಸ್ಥಾಪಕರಾದ ಚೇತನ್ ಶಿವಪ್ಪ, ಮಂಜುನಾಥ ಹೊಟೇಲ್ ಮಾಲೀಕ ಜಗನಾಥ್ ಭಾಗವಹಿಸಲಿದ್ದಾರೆ. ಸಂಜೆ ೫ ಗಂಟೆಗೆ ಕೊಡಗು ಮೈಸೂರಿನ ಬೈಕ್ ಸಾಹಸಿ ಕಲಾವಿದರಿಂದ ಸಾಹಸ ಪ್ರದರ್ಶನ ನಡೆಯಲಿದೆ.

ಸಂಜೆ ೬ ಗಂಟೆಗೆ ಸಮಾರೋಪ ಸಮಾರಂಭ ಸಂಘದ ಅಧ್ಯಕ್ಷ ಕುಂಬೆಯAಡ ಸುರೇಶ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್ ಪೊನ್ನಣ್ಣ, ವೀರಾಜಪೇಟೆ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ವಾಟೇರಿರ ಬೋಪಣ್ಣ, ಆಗ್ಲೋನೇಮ ರೆಸಾರ್ಟ್ ಮತ್ತು ಹೊಟೇಲ್ ನಿರ್ದೇಶಕ ವಿಷ್ಣು ಪರಮಶಿವ, ಗುತ್ತಿಗೆದಾರ ಮತ್ತು ಕಾಫಿ ಬೆಳೆಗಾರ ಕೋಡಿರ ವಿವೇಕ್, ವಿನಾಯಕ ಟ್ರಾವೆಲ್ಸ್ ಮಾಲೀಕ ಬಿ.ವಿ ಹೇಮಂತ್, ಚಾಮಿ ಗ್ರೂಪ್ ಆಫ್ ಕನ್‌ಸ್ಟçಕ್ಷನ್‌ನ ಟಿ.ಸಿ ಸುರೇಶ್, ಜಿಲ್ಲಾ ಬಿಜೆಪಿ ಪ್ರಮುಖ ತೇಲಪಂಡ ಶಿವಕುಮಾರ್, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ವೀರಾಜಪೇಟೆ ಮಹಾಲಕ್ಷಿö್ಮÃ ಜುವೆಲ್ರ‍್ಸ್ ಮಾಲೀಕ ರಾಹುಲ್, ಚಿಲಿಗೇರಿ ಬಸ್ ಮಾಲೀಕರಾದ ತೀತಿರ ದರ್ಶನ್ ಉಪಸ್ಥಿತರಿರುತ್ತಾರೆ. ರಾತ್ರಿ ೮ ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸ್ಥಳೀಯ ಪ್ರತಿಭೆಗಳಿಗೆ ಹಾಗೂ ವೀರಾಜಪೇಟೆಯ ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇದ್ದು ಇದರಲ್ಲಿ ಭಾಗವಹಿಸಲು ಇಚ್ಚೆ ಉಳ್ಳವರು ತಾ.೧೮ ರ ಒಳಗೆ ಹೆಸರು ನೊಂದಾಯಿಸಿಕೊಳ್ಳ ಬಹುದಾಗಿದೆ. ಹೆಚ್ಚಿನ ವಿವರಗಳಿಗೆ ೯೮೪೫೫೮೫೩೫, ೮೭೬೨೨೭೯೩೯೭ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವAತೆ ಸುರೇಶ್ ದೇವಯ್ಯ ಕೋರಿದ್ದಾರೆ. ಗೋಷ್ಠಿಯಲ್ಲಿ ಕಾರ್ಯದರ್ಶಿ ಜೂಡಿವಾಸ್, ಖಜಾಂಚಿ ವಕ್ಕಲಿಗರ ದಿನೇಶ್ ಮತ್ತು ನಿರ್ದೇಶಕ ವಿನಂತ್ ಉಪಸ್ಥಿತರಿದ್ದರು.