ಮಡಿಕೇರಿ, ಅ. ೧೧ : ಭಾರತದ ಅತ್ಯಂತ ಹಳೆಯ ಕೃಷಿಕರ ಸಂಘಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ೧೪೪ ವರ್ಷಗಳ ಸುದೀರ್ಘ ಇತಿಹಾಸ ಇರುವ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಇದೀಗ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಎಂದು ಹೆಸರು ಬದಲಿಸಿಕೊಳ್ಳುತ್ತಿದೆ.

ನಗರದಲ್ಲಿ ಜರುಗಿದ ಅಸೋಸಿಯೇಷನ್‌ನ ೧೪೪ ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೊಡಗು ಎಂಬುದಕ್ಕಿAತ ಕೂರ್ಗ್ ಎಂಬ ಹೆಸರೇ ಹೆಚ್ಚು ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಎಂಬುದೇ ಸೂಕ್ತ ಎಂಬ ತೀರ್ಮಾನಕ್ಕೆ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಹಳೇ ದಾಖಲೆಯನ್ನು ಉಲ್ಲೇಖಿಸುವುದಾದಲ್ಲಿ, ೧೯೮೦ ಕ್ಕೂ ಮುನ್ನ ಕೂರ್ಗ್

(ಮೊದಲ ಪುಟದಿಂದ) ಪ್ಲಾಂಟರ್ಸ್ ಅಸೋಸಿಯೇಷನ್ ಎಂಬ ಹೆಸರೇ ಈ ಸಂಸ್ಥೆಗಿತ್ತು ೧೯೭೯ ರ ಮೇ ೨೨ ರಂದು ನಡೆದ ಅಸೋಸಿಯೇಷನ್ ಮಹಾಸಭೆಯಲ್ಲಿ ಮೇಜರ್ ಪೊನ್ನಪ್ಪ ಅವರು ಸಲಹೆ ನೀಡಿ, ಅಂದಿನ ಕರ್ನಾಟಕದ ರಾಜ್ಯಪಾಲರು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ತನ್ನ ಹೆಸರನ್ನು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಎಂದು ಬದಲಿಸಿಕೊಳ್ಳಲು ಸಲಹೆ ನೀಡಿದ ಬಗ್ಗೆ ಪ್ರಸ್ತಾಪಿಸಿದ್ದರು. ಈ ನಿಟ್ಟಿನಲ್ಲಿ ಸಮಿತಿಯೊಂದು ರಚಿತವಾಗಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಎಂದು ಹೆಸರು ಬದಲಿಸಲಾಗಿತ್ತು.

ಇದೀಗ ೪೩ ವರ್ಷಗಳ ಬಳಿಕ ಮತ್ತೆ ಹೆಸರು ಬದಲಾಗುತ್ತಿದ್ದು ಪೂರ್ವ ಹೆಸರಾಗಿದ್ದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಆಗುತ್ತಿದೆ. ಕೂರ್ಗ್ ಕಿತ್ತಳೆ, ಕೂರ್ಗ್ ಅರೇಬಿಕಾ ಎಂದೆಲ್ಲಾ ಹೆಸರುಗಳು ಬ್ರಾö್ಯಂಡ್ ಆಗಿರಬೇಕಾದರೆ ತಾವು ಕೂಡ ಸಂಸ್ಥೆಯ ಹೆಸರನ್ನು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಎಂದು ಬದಲಿಸಿಕೊಳ್ಳಬೇಕಾಗಿದೆ ಎಂದು ಸಂಘದ ಹಿರಿಯ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಾವಣೆ ಪ್ರಕ್ರಿಯೆ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿ.ಕೆ. ಬೆಳ್ಯಿಯಪ್ಪ ತಿಳಿಸಿದರು.

ಪ್ಲಾಂಟರ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಎ. ನಂದಾ ಬೆಳ್ಯಪ್ಪ ಮತ್ತು ಕಾರ್ಯದರ್ಶಿಯಾಗಿ ಎ.ಎ. ಚಂಗಪ್ಪ ಒಂದು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯ ಆಯ್ಕೆಯನ್ನೂ ೧೪೪ ನೇ ವಾರ್ಷಿಕ ಮಹಾಸಭೆಯಲ್ಲಿ ನಡೆಸಲಾಯಿತು.