ಮಡಿಕೇರಿ, ಅ. ೧೧: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೦೨ ರ ನವೆಂಬರ್ ೪ ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊAಡ ‘ಸಾಂತ್ವನ ಮಹಿಳಾ ಸಹಾಯವಾಣಿ’ ಕೊಡಗಿನಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ ೪೯೨೮ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, ೪೯೪೭ ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. ೨೦೨೩-೨೪ನೇ ಆರ್ಥಿಕ ಸಾಲಿನಲ್ಲಿ ಏಪ್ರಿಲ್ ತಿಂಗಳಿAದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ೧೪೩ ಪ್ರಕರಣಗಳು ದಾಖಲಾಗಿ ೧೨೮ ಪ್ರಕರಣಗಳು ಇತ್ಯರ್ಥಗೊಂಡು ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು ಸೇರಿ ಉಳಿದ ೧೫ ಪ್ರಕರಣಗಳು ಇತ್ಯರ್ಥದ ಹಂತದಲ್ಲಿರುತ್ತದೆ. ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬAಧಿಸಿದAತೆ ಒಟ್ಟು ರೂ. ೫ ಲಕ್ಷಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಫಲಾನುಭವಿಗಳಿಗೆ ೨೦೨೩-೨೪ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ. ಮಹಿಳಾ ಸಹಾಯವಾಣಿಯ ಪ್ರಯೋಜನ ಪಡೆದುಕೊಳ್ಳುವಂತೆ ಸಾಂತ್ವನ ಕೇಂದ್ರದ ಅಧ್ಯಕ್ಷರಾದ ಕೆ.ಎಸ್. ಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಆರ್. ನಮಿತ ರೈ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ. ೯೮೮೦೯೮೫೯೩೯ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.