ಮಡಿಕೇರಿ, ಅ. ೧೦: ಇಲ್ಲಿನ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಇನ್ಸೆöÊಯರ್ -೨೦೨೩ ಸಮಾರಂಭದಲ್ಲಿ ವಿಜ್ಞಾನ ವಿಭಾಗದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜಯ ಸಾಧಿಸುವಲ್ಲಿ ಇನ್ಸೆöÊರ್ ಕೋಚಿಂಗ್‌ನ ಪ್ರಾಮುಖ್ಯತೆಯ ಕುರಿತು ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ರೋಜಾ ವಿವರಿಸಿ ತಿಳಿಸಿದರು.

ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮಕ್ಕಳಿಗೆ ಅಇಖಿ ಹಾಗೂ ಓಇಇಖಿ ತರಗತಿಗಳು ನಡೆಯುತ್ತಿದ್ದು, ಅವರಿಗೆ ಕಲಿಕೆಯಲ್ಲಿ ಉತ್ಸಾಹ ತುಂಬುವ ಸಲುವಾಗಿ ಸ್ಫೂರ್ತಿದಾಯಕ ಕಾರ್ಯಕ್ರಮವನ್ನು ಮಂಗಳೂರಿನ ಇಸ್ಸೆöÊಯರ್ ಕೋಚಿಂಗ್ ಸೆಂಟರ್ ಆಯೋಜಿಸಿತ್ತು. ಸೆಂಟರ್‌ನ ಮುಖ್ಯಸ್ಥ ಮಹಮ್ಮದ್ ಇಸ್ತಿಕಾರ್ ನೇತೃತ್ವದಲ್ಲಿ ೨೦೨೩ ರ ಓಇಇಖಿ, ಅಇಖಿ ಮತ್ತು ಎಇಇ ಪರೀಕ್ಷೆಗಳ ಕಲಿಕಾ ಕೈಪಿಡಿಯನ್ನು ಅನಾವರಣಗೊಳಿಸಲಾಯಿತು.

ಇಲ್ಲಿ ತರಬೇತಿ ಪಡೆಯುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಕೋಚಿಂಗ್ ಸೆಂಟರ್ ಆಯೋಜಿಸಿತ್ತಲ್ಲದೆ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಲೂರ್ದ್ ಮೇರಿ ಹಾಗೂ ಸಿಸ್ಟರ್ ಫಿಲೋಮಿನಾ, ಇನ್ಸೆöÊಯರ್ ಕೋಚಿಂಗ್ ಸೆಂಟರ್‌ನ ನಿರ್ದೇಶಕÀ ಡಾ. ಶಾಂತಿ ವಿಜಯ್, ಆಡಳಿತಾಧಿಕಾರಿ ಮೊಹಮ್ಮದ್ ಫಾರೂಕ್, ಜೀವಶಾಸ್ತç ವಿಭಾಗದ ಮುಖ್ಯಸ್ಥ ಮುರಳಿ ಪಿ. ಜೆ., ಉಪನ್ಯಾಸಕರು ಪಾಲ್ಗೊಂಡಿದ್ದರು. ಇನ್ಸೆöÊಯರ್ ಕೋಚಿಂಗ್ ಸೆಂಟರ್‌ನ ಪ್ರಾಚಾರ್ಯ ಸುಜಯ ಸ್ವಾಗತಿಸಿ, ವಿದ್ಯಾರ್ಥಿನಿ ರಿದಾ ಎಂ. ಎ. ವಂದಿಸಿದರು. ಚಲನ ಹಾಗೂ ದಿಶಾ ಕಾರ್ಯಕ್ರಮ ನಿರೂಪಿಸಿದರು.