ಮಡಿಕೇರಿ, ಅ. ೧೦: ಬರಹ ಗಾರರು ಸ್ವಂತಿಕೆಯನ್ನು ಬೆಳೆಸಿಕೊಳ್ಳ ಬೇಕೆಂದು ಹಿರಿಯ ಸಾಹಿತಿ ಭಾರಧ್ವಜ ಕೆ. ಆನಂದ ತೀರ್ಥ ಸಲಹೆ ನೀಡಿದರು.

ಬೆಂಗಳೂರಿನ ವೀರಲೋಕ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬರಹಗಾರರು ಎನಿಸಿ ಕೊಂಡವರು ಮತ್ತೊಬ್ಬ ಬರಹಗಾರರ ಬರವ ಣಿಗೆಯ ಶೈಲಿಯನ್ನು ಅನುಕರಿ ಸುವುದು ಸರಿಯಿಲ್ಲ. ಸ್ವಂತಿಕೆ ಎಂಬುದನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಬರಹಗಾರರಾಗಿ ಹೊರ ಹೊಮ್ಮಲು ಸಾಧ್ಯ. ಓದುವ ಹವ್ಯಾಸವನ್ನು ರೂಢಿಸಿಕೊಂಡವರು ಮಾತ್ರ ಬರವಣಿಗೆಯಲ್ಲಿ ಯಶಸ್ಸು ಕಾಣಬಹುದಾಗಿದೆ ಎಂದು ನುಡಿದರು.

ಕಥಾ ಕಮ್ಮಟದಲ್ಲಿ ತರಬೇತು ದಾರರಾಗಿದ್ದ ಪ್ರಭಾಕರ ಶಿಶಿಲ ಅವರು ಮಾತನಾಡಿ ಜೀವನದ ಬಗ್ಗೆ ಪ್ರೀತಿ ಬೆಳೆಸಿಕೊಂಡರೆ ಮಾತ್ರ ಕಥೆ ಬರೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿನ ಅಸಮಾನತೆಯನ್ನು ಬರವಣಿಗೆಯ ಮೂಲಕ ಹೋಗಲಾಡಿಸಲು ಬರಹಗಾರರು ಪ್ರಯತ್ನಿಸಬೇಕು. ಬೇರೆ ಬೇರೆ ಪುಸ್ತಕಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು.

ವೀರಲೋಕ ಪ್ರಕಾಶನದ ಕೊಡಗು ಜಿಲ್ಲಾ ಯೋಜನಾ ಸಂಘಟಕ ಬಿ.ಜಿ. ಅನಂತಶಯನ ಅವರು ಮಾತನಾಡಿ, ಕಥೆಗಾರನಲ್ಲಿ ಅಂತರ್‌ದೃಷ್ಟಿ ಇದ್ದಾಗ ಮಾತ್ರ ಉತ್ತಮ ಕಥೆಗಳು ಹೊರ ಹೊಮ್ಮಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಥಾ ಕಮ್ಮಟ ಸಂಚಾಲಕ ಸಂಪತ್‌ಕುಮಾರ್, ಜಾನಪದ ಪರಿಷತ್ ಉಪಾಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ವೀರಾಜಪೇಟೆ ಘಟಕದ ಅಧ್ಯಕ್ಷ ಟೋಮಿ ಥೋಮಸ್, ಜಿಲ್ಲಾ ಕಾರ್ಯದರ್ಶಿ ಉಜ್ವಲ್ ರಂಜಿತ್ ಉಪಸ್ಥಿತರಿದ್ದರು. ಬರಹಗಾರರಾದ ಹರಿಣಿ ವಿಜಯ್, ಕೃಪಾ ದೇವರಾಜ್, ಫ್ಯಾನ್ಸಿ ಮುತ್ತಣ್ಣ, ಡಾ. ಸೂರ್ಯಕುಮಾರ್ ಕಥೆಯ ಹುಟ್ಟಿನ ಹಿನ್ನೆಲೆ ಹಾಗೂ ಬರಹದ ಯಶಸ್ಸಿನ ಬಗ್ಗೆ ಮಾತನಾಡಿದರು.

ಕಮ್ಮಟದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ಮೇಘ, ಅಫ್ರಿ, ಸಚಿನ್‌ಕುಮಾರ್, ತುಳಸಿ ಇವರುಗಳು ತಮ್ಮ ಅನುಭವಗಳನ್ನು ಹಂಚಿಕೊAಡರು. ಕಮ್ಮಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

‘ಅಲಿಮಳ ಆಡು’ ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ಹರಿಣಿ ವಿಜಯ, ಹೇಮಂತ್ ಪಾರೆರ, ಕೌಸರ್ ಬಹುಮಾನ ಪಡೆದುಕೊಂಡರು.

ಕಥೆ ಬರೆಯುವ ಸ್ಪರ್ಧೆಯಲ್ಲಿ ಎಸ್. ಮೇಘ ಪ್ರಥಮ, ಪಿ.ಆರ್. ಶ್ವೇತ ದ್ವಿತೀಯ, ಹೇಮಂತ್ ತೃತೀಯ ಸ್ಥಾನ ಪಡೆದರು.

ಈ ಸಂದರ್ಭ ಭಾರಧ್ವಜ ಕೆ.ಆನಂದ ತೀರ್ಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಗಿತ ಪ್ರಾರ್ಥಿಸಿ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ನಿರೂಪಿಸಿದರು. ಸದಸ್ಯೆ ವೀಣಾಕ್ಷಿ ಸ್ವಾಗತಿಸಿ ಸಂಪತ್‌ಕುಮಾರ್ ವಂದಿಸಿದರು.