ಮಡಿಕೇರಿ, ಅ. ೧೧: ನಗರದ ಸೆಂಟ್ ಜೋಸೆಫ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಎಂ.ಜಿ. ನಿಶ್ಮಾ ಶೆಟ್ಟಿ ಅವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮಾದಾಪುರ ಮಾರ್ಕೆಟ್ ರಸ್ತೆ ನಿವಾಸಿ, ಮಡಿಕೇರಿ ಸಂಚಾರಿ ಪೊಲೀಸ್ ಠಾಣಾ ಹೆಡ್‌ಕಾನ್ಸ್ಟೇಬಲ್ ಎಂ.ಬಿ. ಗಣೇಶ್ ಶೆಟ್ಟಿ ಮತ್ತು ಜಿ. ವಿನೋದ ಶೆಟ್ಟಿ ದಂಪತಿ ಪುತ್ರಿ.