ಕೂಡಿಗೆ, ಅ. ೧೦: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲದ ರಾಜ್ಯಮಟ್ಟದ ಬಾಲಕರು ಮತ್ತು ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾವಳಿಯು ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲಾ ಹಾಕಿ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದು, ರಾಜ್ಯಮಟ್ಟದ ೧೪ ವಯೋಮಾನದ ಹಾಕಿ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ ಪ್ರಥಮ ಹಾಗೂ ಕಲ್ಬುರ್ಗಿ ತಂಡ ದ್ವಿತೀಯ ಸ್ಥಾನ ಗಳಿಸಿತು.
ಬೆಳಗಾವಿ ತಂಡವು ೧೧ ಗೋಲು ಗಳಿಸಿ ರಾಷ್ಟಿçÃಯ ಟೂರ್ನಿಗೆ ಆಯ್ಕೆಯಾಯಿತು. ಕಲ್ಬುರ್ಗಿ ತಂಡವು ೧೦ ಗೋಲು ಗಳಿಸಿತು. ರಾಜ್ಯ ಮಟ್ಟದ ೧೭ ವಯೋಮಾನದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದ ತಂಡವು ಪ್ರಥಮ ಹಾಗೂ ಕೂಡಿಗೆ ಸರ್ಕಾರಿ ಕ್ರೀಡಾಶಾಲಾ ತಂಡವು ದ್ವಿತೀಯ ಸ್ಥಾನ ಗಳಿಸಿತು.
ಮೈಸೂರು ವಿಭಾಗದಿಂದ ಕೊಡಗಿನ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ರಾಷ್ಟಿçÃಯ ಕ್ರೀಡೆಗೆ ಆಯ್ಕೆಯಾಯಿತು. ಮೈಸೂರು ತಂಡದ ಸಿ.ಎಂ. ತ್ವಿಶ ದೇಚಮ್ಮ ಉತ್ತಮ ಗೋಲ್ ಕೀಪರ್ ಆಗಿ ಹೊರಹೊಮ್ಮಿದರು.
ಅಂತಿಮ ಟೂರ್ನಿಯಲ್ಲಿ ತೀವ್ರ ಸೆಣಸಾಟ ನಡೆಸಿದ ಉಭಯ ತಂಡಗಳು ಸಮಬಲ ಪ್ರದರ್ಶಿಸಿದವು. ಟೂರ್ನಿಯಲ್ಲಿ ಹೆಚ್ಚು ಗೋಲು ಗಳಿಸಿದ ಮೈಸೂರು ವಿಭಾಗದ ತಂಡವು ಪ್ರಥಮ ಸ್ಥಾನ ಗಳಿಸಿ ರಾಷ್ಟಿçÃಯ ಟೂರ್ನಿಗೆ ಆಯ್ಕೆಗೊಂಡಿತು. ಕೂಡಿಗೆ ಕ್ರೀಡಾಶಾಲಾ ತಂಡವು ದ್ವಿತೀಯ ಸ್ಥಾನಗಳಿಸಿತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂಥರ್ ಗೌಡ ರಾಷ್ಟಿçÃಯ ಟೂರ್ನಿಗೆ ಆಯ್ಕೆಗೊಂಡ ತಂಡಗಳಿಗೆ ಟ್ರೋಫಿ ವಿತರಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ಕ್ರೀಡಾಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ದೇವಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಟಿ.ಪೂರ್ಣೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ ಇತರರು ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಇ.ನಂದ, ಸುರೇಶ್ ಕುಮಾರ್, ಡ್ಯಾನಿ ಈರಪ್ಪ, ಡ್ಯಾನಿ ನಾಣಯ್ಯ, ಗಣೇಶ್ ಕುಮಾರ್, ತಮ್ಮಯ್ಯ, ರಮಾನಂದ, ಅರುಣ್ ಕುಮಾರ್ , ಬೋಪಣ್ಣ ಕಕ್ಕಬ್ಬೆ, ರತೀಶ್, ಮಹೇಂದ್ರ, ಬೋಪಣ್ಣ ಶೆಟ್ಟಿಗೇರಿ ಇತರರು ರೆಫರಿಯಾಗಿ ಕಾರ್ಯ ನಿರ್ವಹಿಸಿದರು. ಟೂರ್ನಿಯಲ್ಲಿ ನಾಲ್ಕು ವಿಭಾಗಗಳಾದ ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗಗಳ ತಂಡಗಳು ಪಾಲ್ಗೊಂಡಿದ್ದವು.