ವೀರಾಜಪೇಟೆ, ಅ. ೯: ಮಲಯಾಳಿ ಸಮುದಾಯದವರು ತಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಓಣಂ ಹಬ್ಬವನ್ನು ಒಗ್ಗಟ್ಟಿನಿಂದ ಅಚರಿಸಿಕೊಂಡು ಬರುತ್ತಿದ್ದು ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ವೀರಾಜಪೇಟೆ ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ಅಮ್ಮತ್ತಿ ಒಂಟಿಯAಗಡಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ಒಂಟಿಯAಗಡಿ ಕಣ್ಣಂಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಐದನೇ ವರ್ಷದ ಓಣಂ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಎಲ್ಲಾ ಜನಾಂಗ ಬಾಂಧವರು ಅವರವರ ಪದ್ಧತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರೀಡೆಗಳು, ಉತ್ಸವ ಮತ್ತು ಹಬ್ಬಗಳನ್ನು ಜಾತಿ ಬೇಧಗಳಿಲ್ಲದೆ ಮಾನವ ಜಾತಿ ಒಂದೇ ಎಂಬAತೆ ಶಾಂತಿಯುತವಾಗಿ ಒಗ್ಗಟ್ಟಿನಿಂದ ಆಚರಿಸುವುದು ಶ್ಲಾಘನಿಯ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೂ ಮಲಯಾಳಿ ಸಮಾಜದವರು ಹಿಂದಿನಿAದಲೂ ಇಲ್ಲೇ ಹುಟ್ಟಿ ಬೆಳೆದವರು. ಅವರ ಸಂಪ್ರದಾಯದAತೆ ಉಡುಗೆ ತೊಡುಗೆಗಳನ್ನು ಧರಿಸುವ ಮೂಲಕ ಓಣಂ ಹಬ್ಬವನ್ನು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಚರಿಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಹೋಬಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಓಣಂ ಆಚರಿಸುವ ಮೂಲಕ ಅನೇಕತೆಯಲ್ಲಿ ಏಕತೆಯನ್ನು ಕಾಣುತ್ತ ಸಾಂಸ್ಕೃತಿಕ ಹಿನ್ನೆಲೆ ಹೂವಿನ ರಂಗೋಲಿ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ತೋರುತ್ತಿದ್ದಾರೆ. ಕ್ರೀಡೆಯ ತವರೂರು ಕೊಡಗು; ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡುವಂತಾಗಬೇಕು. ಮಕ್ಕಳು ಅವಕಾಶಗಳಿಂದ ವಂಚಿತರಾಗದAತೆ ಪೋಷಕರು ಎಚ್ಚರ ವಹಿಸಬೇಕೆಂದು ಬೋಪಯ್ಯ ಹೇಳಿದರು.
ಮಲಯಾಳಿ ಸಮಾಜದ ಜಿಲ್ಲಾ ಅಧ್ಯಕ್ಷ ವಿ.ಎಂ. ವಿಜಯನ್ ಮಾತ ನಾಡಿ ಕೂಲಿ ಕೆಲಸ ಮಾಡುವುದು ಕೀಳರಿಮೆಯಲ್ಲ; ಅದು ನಮ್ಮ ಕರ್ತವ್ಯ. ಮಲಯಾಳಿ ಬಾಂಧವರು ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ಮಾರ್ಗದಲ್ಲಿ ಸಾಗುವಂತೆ ಪೋಷಕರು ಹೇಳಿಕೊಡಬೇಕು ಎಂದರು. ಜಿಲ್ಲಾ ಮಲಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ. ಸುದೀರ್ ಮಾತನಾಡಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಉತ್ತಮರಾಗಲಿ ಎಂದು ಬಯಸುತ್ತಾರೆ. ವಿದ್ಯಾರ್ಥಿ ಜೀವನ ಮಹತ್ವವಾದದ್ದು ಮಕ್ಕಳು ಹಾದಿ ತಪ್ಪದಂತೆ ಪೋಷಕರು ಎಚ್ಚರ ವಹಿಸಬೇಕು ಎಂದರು.
ಪ್ರಾಥಮಿಕ ಶಾಲಾ ಮುಖ್ಯೋ ಪಾಧ್ಯಾಯಿನಿ ಮಿನ್ನಮ್ಮ ಮಾತನಾಡಿ, ಶಾಲೆಗಳು ಉಳಿಯಲು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಹಿಂದೆ ಸರಕಾರಿ ಶಾಲೆಯಲ್ಲಿ ಕಲಿತ ಮಹನೀಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದರು. ಅಮ್ಮತ್ತಿ ಒಂಟಿಯAಗಡಿ ಮಲೆಯಾಳಿ ಸಂಘದ ಅಧ್ಯಕ್ಷ ಸಿ.ಕೆ. ನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಷ್ಮಾ ರಂಜಿತ್, ಉಪಾಧ್ಯಕ್ಷರಾದ ರಜನಿ ಕುಟ್ಟಪ್ಪ, ಮಲಯಾಳಿ ಸಮಾಜದ ಗೌರವ ಅಧ್ಯಕ್ಷ ಕೆ.ಪಿ.ಪುಷ್ಕರನ್, ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ಕೆ.ಬಾಬು, ಹಿರಿಯ ಸದಸ್ಯರಾದ ಪಿ.ಕೆ. ಭಾಸ್ಕರನ್, ಪಿ.ಎನ್. ಶಶಿ, ಎಸ್.ಎನ್.ಡಿ.ಪಿ. ಘಟಕದ ವಿ.ಕೆ. ಲೋಕೇಶ್, ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಎನ್. ಅಚ್ಚುತನ್, ಉದ್ಯಮಿ ಸಿ.ಕೆ.ಶಿಜು ಮತ್ತಿತರರು ಉಪಸ್ಥಿತರಿದ್ದರು. ಸಂಘದ ಎಂ.ಎA.ಶಶಿಧರನ್ ಸ್ವಾಗತಿಸಿದರೆ, ಕೆ.ಕೆ.ಸನಿಲ್ ವಂದಿಸಿದರು.
ಇದಕ್ಕೂ ಮೊದಲು ಚಾಮುಂಡಿ ಪೈಸಾರಿಯ ಶ್ರೀ ಅಯ್ಯಪ್ಪ ದೇವಸ್ಥಾನ ದಿಂದ ಚಂಡೆ ಮೇಳದೊಂದಿಗೆ ಮಹಾಬಲಿಯ [ಮಾವೇಲಿ] ಮೆರ ವಣಿಗೆ ಕಲಾ ತಂಡಗಳೊAದಿಗೆ ಶಾಲಾ ಮೈದಾನದವರೆಗೂ ನಡೆಯಿತು. ಮಹಿಳಾ ಘಟಕದ ಪ್ರೇಮಾ ಕೃಷ್ಣನ್ ಪೂಕಳಂ ಸ್ಪರ್ಧೆಯನ್ನು ಉದ್ಘಾಟಿಸಿ ದರು. ಸಂಘದ ಉಪಾಧ್ಯಕ್ಷ ಟಿ.ಎನ್. ಶ್ರೀನಿವಾಸ್ ಕ್ರೀಡಾ ಸ್ಪರ್ಧೆ ಉದ್ಘಾಟಿಸಿ ದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಓಣಂ ಸದ್ಯ, ಬಳಿಕ ಪುರುಷರಿಗೆ ಹಾಗೂ ಮಹಿಳೆ ಯರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ, ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆದವು.