ಮಡಿಕೇರಿ, ಅ. ೯: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಮಡಿ ಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ವತಿಯಿಂದ ವಿವಿಧ ಕ್ರೀಡಾಕೂಟ ಗಳನ್ನು ಹಮ್ಮಿಕೊಳ್ಳಲಾಗಿದ್ದು, ತಾ.೧೫ರಿಂದ ೨೨ರವರೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ರೀಡಾಕೂಟ ಸಮಿತಿ ಪ್ರಧಾನ ಕಾರ್ಯದರ್ಶಿ ದುಗ್ಗಳ ಕಪಿಲ್ ಕುಮಾರ್; ತಾ.೧೫ರಿಂದ ಕ್ರೀಡಾಕೂಟ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ ೬.೩೦ ಗಂಟೆಗೆ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ಪುರುಷರಿಗೆ ಜ. ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್‌ವರೆಗೆ, ಮಹಿಳೆಯರಿಗೆ ನೀರುಕೊಲ್ಲಿವರೆಗೆ ನಡೆಯಲಿದೆ. ಇದ ರೊಂದಿಗೆ ಮಕ್ಕಳಿಗೆ ರಸ್ತೆ ಓಟ ಸ್ಪರ್ಧೆ ಇರಲಿದ್ದು, ೧ರಿಂದ ನಾಲ್ಕನೇ ತರಗತಿ ವರೆಗಿನ ಮಕ್ಕಳಿಗೆ ಜ.ತಿಮ್ಮಯ್ಯ ರಸ್ತೆ ಯಿಂದ ಆಸ್ಪತ್ರೆ ಗೇಟ್‌ವರೆಗೆ, ೫ರಿಂದ ೭ನೇ ತರಗತಿ ಮಕ್ಕಳಿಗೆ ಈಸ್ಟ್ ಎಂಡ್ ಹೊಟೇಲ್‌ವರೆಗೆ, ೮ರಿಂದ ೧೦ನೇ ತರ ಗತಿ ಮಕ್ಕಳಿಗೆ ಬಸ್ ಡಿಪೋವರೆಗೆ, ಪಿಯುಸಿ ವಿದ್ಯಾರ್ಥಿಗಳಿಗೆ ಸುದ ರ್ಶನ್ ವೃತ್ತದವರೆಗೆ ನಡೆಯಲಿದೆ ಎಂದು ತಿಳಿಸಿದರು.

ಕ್ರೀಡಾಕೂಟ

ತಾ.೧೮ರಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ೧೦೦ಮೀ ಓಟ, ೪೦೦ಮೀ ರಿಲೇ, ಸಾರ್ವಜನಿಕರು ಹಾಗೂ ದಸರಾ ಸಮಿತಿಯವರಿಗೆ ಭಾರದ ಗುಂಡು ಎಸೆತ, ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವದು ಹಾಗೂ ಕಪ್ಪೆ ಜಿಗಿತ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಥ್ರೋಬಾಲ್, ವಾಲಿಬಾಲ್ ಪಂದ್ಯಾಟ, ಪುರುಷರಿಗೆ ನಿಧಾನ ದ್ವಿಚಕ್ರ ವಾಹನ ಚಾಲನೆ, ಮಹಿಳೆಯರಿಗೆ ವಿಷದ ಚೆಂಡು ಹಾಗೂ ೨೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ನಿಂಬೆ ಚಮಚ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮ್ಯಾಟ್ ಕಬಡ್ಡಿ

ತಾ.೨೨ರಂದು ಗಾಂಧಿ ಮೈದಾ ನದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪಂದ್ಯಾ ಟದಲ್ಲಿ ವಿಜೇತರಾಗುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವದೆಂದು ಕಪಿಲ್ ತಿಳಿಸಿದರು.

ಪಂದ್ಯಾವಳಿಗಳು

ಆಟೋಟಗಳೊAದಿಗೆ ಕೆಲ ವೊಂದು ಪಂದ್ಯಾವಳಿಗಳನ್ನು ಕೂಡ ಏರ್ಪಡಿಸಿರುವದಾಗಿ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರಾ ಹೇಳಿದರು. ತಾ.೧೫ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗೆ ಬಾಸ್ಕೆಟ್ ಬಾಲ್ ಹಾಗೂ ಸಾರ್ವಜನಿಕರಿಗೆ ಫುಟ್‌ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ತಾ. ೧ರಂದು ಹೊಟೇಲ್ ರಾಜ್‌ದರ್ಶನ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೇರಂ ಹಾಗೂ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ತಾ.೧೯ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದ್ದು, ದಸರಾ ಕ್ರೀಡಾ ಸಮಿತಿ, ದಸರಾ ಸಮಿತಿ, ಪತ್ರಕರ್ತರ ತಂಡ, ದೃಶ್ಯ ಮಾಧ್ಯಮ ತಂಡ, ಪೊಲೀಸ್ ಇಲಾಖೆ, ಶಿಕ್ಷಕರು, ವಕೀಲರು, ವೈದ್ಯರು, ಜಿಲ್ಲಾ ಪಂಚಾಯತ್, ಕಾರಾಗೃಹ ಸಿಬ್ಬಂದಿ ಗಳ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಕ್ರೀಡಾಕೂಟದಲ್ಲಿ ಭಾಗವ ಹಿಸಲಿಚ್ಚಿಸುವವರು ಪ್ರದೀಪ್ (೭೩೩೮೫೪೭೮೯೭), ಕಪಿಲ್ (೯೭೩೧ ೦೦೯೮೪೯), ನಯನ(೯೭೪೦೧೩೧೮೯೯) ಇವರುಗಳನ್ನು ಸಂಪರ್ಕಿ ಸಬಹುದಾಗಿದೆ.

ಗೋಷ್ಠಿಯಲ್ಲಿ ಸಮಿತಿ ಗೌರವ ಸಲಹೆಗಾರ ರವಿ, ಉಪಾಧ್ಯಕ್ಷ ಕ್ರಿಸ್ಟೋಫರ್, ಸದಸ್ಯರುಗಳಾದ ಪೀಟರ್, ನಯನ ಇದ್ದರು.