ಮಡಿಕೇರಿ, ಅ. ೯: ಅಂಗಡಿ ಮುಂದೆ ೧೫ ದಿನಗಳ ಹಿಂದೆ ಶೇಖರಿಸಿಟ್ಟ ಕಸದ ಬ್ಯಾಗ್‌ಗಳನ್ನು ಗೋಣಿಕೊಪ್ಪಲು ಪಂಚಾಯಿತಿ ವಿಲೇವಾರಿ ಮಾಡಿಲ್ಲವೆಂದು ವರ್ತಕರು ದೂರಿದ್ದಾರೆ.

ಸ್ಟೇಟ್ ಬ್ಯಾಂಕ್ ಎದುರಿನ ಅಂಗಡಿಗಳ ಮಾಲೀಕರು ಕಸ ಶೇಖರಿಸಿಟ್ಟು ೧೫ ದಿನಗಳಿಂದಲೂ ಕಸ ವಿಲೇವಾರಿ ಮಾಡುವವರ ಗಮನಕ್ಕೆ ತಂದರೂ ಇದುವರೆಗೂ ಅದನ್ನು ಸ್ಥಳಾಂತರಿಸಿಲ್ಲ ಹಾಗೂ ಈ ಬಗ್ಗೆ ಅಧ್ಯಕ್ಷರು ಮತ್ತು ಆ ವಿಭಾಗದ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೆAದು ವ್ಯಾಪಾರಿ ಎನ್.ಪಿ. ಸೋಮಯ್ಯ ದೂರಿದ್ದಾರೆ.