ಗೋಣಿಕೊಪ್ಪ ವರದಿ, ಅ. ೮ : ಕ್ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ನಡೆದ ಗ್ರಾಮ ಪಂಚಾಯಿತಿ ತಂಡಗಳ ನಡುವಿನ ಸೆವೆನ್ಸೈಡ್ ಹಾಕಿ ಟೂರ್ನಿಯಲ್ಲಿ ಕಕ್ಕಬ್ಬೆ ಮಲ್ಮ (ಬಿ) ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಾಕೋಟ್ ಗ್ರೀನ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ೩ ನೇ ತಂಡವಾಗಿ ಇವೈಟಿ ಬೇಗೂರು, ೪ ನೇ ತಂಡವಾಗಿ ಪಾರಣೆ ಸೆವೆನ್ಸ್ ಹೊರಹೊಮ್ಮಿದೆ.
ಕಕ್ಕಬ್ಬೆ ಮಲ್ಮ (ಬಿ) ತಂಡವು ಶೂಟೌಟ್ ಮೂಲಕ ೫-೩ ಗೋಲುಗಳಿಂದ ಜಯಿಸಿತು. ನಿಗದಿತ ಸಮಯದಲ್ಲಿ ೨-೨ ಸಮಬಲ ಸಾಧಿಸಿದವು. ಶೂಟೌಟ್ನಲ್ಲಿ ಮಲ್ಮ ಆಟಗಾರರು ೩ ಗೋಲು ಹೊಡೆದರು. ೧ ಗೋಲು ಬಾರಿಸಿದ ಕಾಕೋಟ್ ಗ್ರೀನ್ ಸೋಲಿಗೆ ಶರಣಾಯಿತು. ಮಂಡೇಟಿರ ಧನುಶ್ ಕಾಕೋಟ್ ತಂಡಕ್ಕೆ ೨ ಗೋಲುಗಳ ಕಾಣಿಕೆ ನೀಡಿದರು. ಮಲ್ಮ ತಂಡದ ಆಟಗಾರರಾದ ಪರದಂಡ ಮೊಣ್ಣಪ್ಪ, ಅನ್ನಾಡಿಯಂಡ ಪೊನ್ನಣ್ಣ ತಲಾ ಒಂದೊAದು ಗೋಲು ಬಾರಿಸಿದರು.
ಫಲಿತಾಂಶ : ಮೊದಲ ಸೆಮಿಫೈನಲ್ನಲ್ಲಿ ಕಕ್ಕಬ್ಬೆ ಮಲ್ಮ (ಬಿ) ತಂಡವು ಪಾರಣೆ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ಮಲ್ಮ ಪರ ಯಶ್ವಂತ್ ೧ ಗೋಲು ಹೊಡೆದು ಗೆಲುವಿನ ರೂವಾರಿಯಾದರು. ಮತ್ತೊಂದು ಸೆಮಿ ಫೈನಲ್ನಲ್ಲಿ ಕಾಕೋಟ್ ಗ್ರೀನ್ ತಂಡವು ಇವೈಟಿ ಬೇಗೂರು ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಕಾಕೋಟ್ ಆಟಗಾರ ಧನುಷ್ ೩, ಕೆ. ಸಿ. ಬೋಪಣ್ಣ, ಬೇಗೂರು ತಂಡದ ದೀಪಕ್ ೧ ಗೋಲು ಹೊಡೆದರು. ಕ್ವಾರ್ಟರ್ ಫೈನಲ್ನಲ್ಲಿ ಪಾರಣೆ ಸೆವೆನ್ಸ್ ತಂಡವು ಕಕ್ಕಬ್ಬೆ ಮಲ್ಮ (ಎ) ತಂಡದ ವಿರುದ್ದ ೩-೧ ಗೋಲುಗಳಿಂದ ಜಯಿಸಿತು. ಪಾರಣೆ ಪರ ನಿರನ್ ೨, ಭೀಮಯ್ಯ ೧, ಮಲ್ಮ ಆಟಗಾರ ನಾಚಪ್ಪ ೧ ಗೋಲು ಹೊಡೆದರು. ಕಕ್ಕಬ್ಬೆ ಮಲ್ಮ (ಬಿ) ತಂಡವು ಬಲ್ಯಮುಂಡೂರು ತಲಭಲೇಶ್ವರ ವಿರುದ್ದ ೫-೧ ಗೋಲುಗಳ ಜಯ ಸಾಧಿಸಿತು. ಮಲ್ಮ ಆಟಗಾರ ಪ್ರಜ್ವಲ್, ಯಶ್ವತ್ ತಲಾ ೨, ರಾಯ್, ಬಲ್ಯಮುಂಡೂರು ಆಟಗಾರ ಎಂ. ಬಿ. ಗಣಪತಿ ತಲಾ ಒಂದೊAದು ಗೋಲು ಬಾರಿಸಿದರು.
ಮೈದಾನ ದುರಸ್ತಿಗೆ ಒತ್ತು : ಟರ್ಫ್ ಮೈದಾನ ದುರಸ್ತಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಶಾಸಕ ಎ. ಎಸ್. ಪೊನ್ನಣ್ಣ ಭರವಸೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಟರ್ಫ್ ಮೈದಾನದಲ್ಲಿರುವ ತ್ಯಾಜ್ಯವನ್ನು ತೆಗೆಯಲು ಬೇಕಾದ ಯಂತ್ರೋಪಕರಣಗಳನ್ನು ತರಲು ಪ್ರಯತ್ನಿಸಲಾಗುವುದು. ಮುಂದಿನ ಹಾಕಿ ಪಂದ್ಯಕ್ಕೆ ಸೂಕ್ತ ಮೈದಾನ ದೊರೆಯುವಂತೆ ಮಾಡಲಾಗುವುದು ಎಂದರು.
ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ ಮಾತನಾಡಿ, ಎಲ್ಲರೂ ಒಟ್ಟಾಗಿ ಮುನ್ನಡೆಯಲು ಕ್ರೀಡೆ ಸಹಕಾರಿಯಾಗುತ್ತದೆ ಎಂದರು. ಹಾಕಿ ಪ್ರತಿಭೆ ಮೈಸೂರು ಡಿವೈಇಎಸ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಧಿರಾ ಅವರನ್ನು ಸನ್ಮಾನಿಸಲಾಯಿತು.
ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್, ಕೆಡಿಸಿಸಿ ಅಧ್ಯಕ್ಷ ಬಾಂಡ್ ಗಣಪತಿ, ಗೋಣಿಕೊಪ್ಪ ಕಾವೇರಿ ಕಾಲೇಜು ಉಪ ಪ್ರಾಂಶುಪಾಲರಾದ ಡಾ. ಎ. ಎಸ್. ಪೂವಮ್ಮ, ಒಲಿಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ, ದಾನಿ ಬಯವಂಡ ಮಹಾಬಲ, ಕ್ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಅಧ್ಯಕ್ಷ ಚಿರಿಯಪಂಡ ಪವನ್ ಇದ್ದರು. ಪಂದ್ಯಾವಳಿ ನಿರ್ದೇಶಕರಾಗಿ ಸುಳ್ಳಿಮಾಡ ಸುಬ್ಬಯ್ಯ ಕಾರ್ಯನಿರ್ವಹಿಸಿದರು. ಚೆಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.