ಕೂಡಿಗೆ, ಅ. ೮: ವಯೋವೃದ್ಧರೋರ್ವರು ಬಸ್ ತಂಗುದಾಣದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೂಡಿಗೆಯಲ್ಲಿ ನಡೆದಿದೆ.

ಮೂಲತಃ ಮಡಿಕೇರಿಯ ನಿವಾಸಿ ಮುಳ್ಳುಸೋಗೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಮರಿಯದಾಸ್ (೭೪) ಆತ್ಮಹತ್ಯೆಗೆ ಶರಣಾದವರು.

ಕೂಡಿಗೆ-ಸೋಮವಾರಪೇಟೆ ಮಾರ್ಗದ ಬಸ್ ತಂಗುದಾಣದಲ್ಲಿ ಪಂಚೆಯಿAದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು.