ಗೋಣಿಕೊಪ್ಪಲು, ಅ. ೮: ಶರವೇಗದಲ್ಲಿ ಮುನ್ನುಗುತ್ತಾ ಧೂಳೆಬ್ಬಿಸಿದ ಕಾರುಗಳು, ಗೆಲುವಿಗಾಗಿ ಪೈಪೋಟಿ, ಮೈನವಿರೇಳಿಸಿದ ಆಟೋ ಕ್ರಾಸ್, ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಪಟ್ಟಣದ ಹರಿಶ್ಚಂದ್ರಪುರ ಮನೆಯ ಪಂಡ ಯಾರ್ಡ್ನಲ್ಲಿ ಆಯೋಜಿಸಿದ್ದ ಆಟೋಕ್ರಾಸ್ ರ್ಯಾಲಿ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ವಿವಿಧ ವಿಭಾಗಗಳಲ್ಲಿ ನಡೆದ ಆಟೋಕ್ರಾಸ್ ರೋಚಕತೆ ಸೃಷ್ಟಿ ಮಾಡಿತು. ಡರ್ಟ್ ಟ್ರ್ಯಾಕ್ನಲ್ಲಿ ಗೆಲುವಿಗಾಗಿ ಚಾಲಕರು ಹರಸಾಹಸ ಪಟ್ಟರು. ಮಾಡಿಫೈಡ್ ಕಾರ್ಗಳು ಶಬ್ದ ಮಾಡುತ್ತ್ತಾ ಮಿಂಚಿನ ವೇಗದಲ್ಲಿ ತೆರಳುತ್ತಿದ್ದ ದೃಶ್ಯಗಳು ರೋಮಾಂಚನ ಮೂಡಿಸಿತು.
ದೇಶದ ವಿವಿಧ ಭಾಗಗಳಿಂದ ಅಂತರರಾಷ್ಟಿçÃಯ ಮಟ್ಟದ ರ್ಯಾಲಿಪಟು ಗಳು ಈ ಬಾರಿ ಭಾಗವಹಿಸಿದ್ದರು. ನವೀಕೃತ ವಾಹನಗಳು ಜನರನ್ನು ಸೆಳೆಯುತ್ತಿದ್ದವು. ಅವುಗಳ ಮುಂದೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.
ಮಧ್ಯಾಹ್ನ ವೇಳೆಯಲ್ಲಿ ದಿಢೀರ್ ಸುರಿದ ಮಳೆಯಿಂದ ರ್ಯಾಲಿಗೆ ತೊಡಕುಂಟಾಗಿತ್ತು. ಮಳೆ ನಿಂತ ನಂತರ ನಿರಾತಂಕವಾಗಿ ರ್ಯಾಲಿ ನಡೆಯಿತು.
ವಿಜೇತರು : ೧೪೦೦ ಸಿಸಿ ವಿಭಾಗದಲ್ಲಿ ಜೆನ್ ಜಾನ್ಸನ್ (ಪ್ರಥಮ), ರುತ್ವಿಕ್ ಗೌಡ (ದ್ವಿತೀಯ), ಸೂರಜ್ ಮಂದಣ್ಣ (ತೃತೀಯ), ೧೬೦೦ ಸಿಸಿ ವಿಭಾಗದಲ್ಲಿ ಚೇತನ್ ಶಿವರಾಂ (ಪ್ರ), ಯೂನಸ್ (ದ್ವಿ), ಸಹಿಲ್ ಖನ್ನ (ತೃ), ೪ವೀಲ್ ವಿಭಾಗದಲ್ಲಿ ಪಿಲಿಪೋಸ್ ಮ್ಯಾಥ್ಯು (ಪ್ರ), ಚೇತನ್ ಶಿವರಾಂ (ದ್ವಿ), ಯೂನಸ್ (ತೃ), ಅನ್ ರಿಸ್ಟಿçಕೆಟ್ಡೆಡ್ ಕ್ಲಾಸ್ ವಿಭಾಗದಲ್ಲಿ ಚೇತನ್ ಶಿವರಾಂ (ಪ್ರ), ಪಿಲಿಪೋಸ್ ಮ್ಯಾಥ್ಯು (ದ್ವಿ), ಯೂನಿಸ್ (ತೃ) ವಿಜೇತರಾದರು. ಸ್ಪರ್ಧೆಯ ಅತೀ ವೇಗದ ಚಾಲಕನಾಗಿ ಹೊರಹೊಮ್ಮಿದ ಚೇತನ್ ಶಿವರಾಂ ಅವರಿಗೆ ರೂ. ೧ ಲಕ್ಷ ನಗದು ಬಹುಮಾನ ನೀಡಲಾಯಿತು.