ಕುಶಾಲನಗರ, ಅ. ೮: ನಿರ್ಗ ತಿಕರಿಗೆ ಮತ್ತು ಅನಾಥರಿಗೆ ಆಶ್ರಯರಾಗಿದ್ದ ವಿಕಾಸ್ ಜನಸೇವಾ ಟ್ರಸ್ಟ್ನ ರಮೇಶ್ (೫೫) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೈಸೂರಿನಲ್ಲಿ ಮೃತಪಟ್ಟಿದ್ದಾರೆ.
ಮಡಿಕೇರಿ ಅಂಬೇಡ್ಕರ್ ಬಡಾವಣೆಯ ತಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಮತ್ತು ಅವರ ಪತ್ನಿ ರೂಪ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ರಮೇಶ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ರೂಪ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಅನಾಥ ಆಶ್ರಮವನ್ನು ನಡೆಸುತ್ತಿದ್ದು, ಪ್ರಸಕ್ತ ೭ನೇ ಹೊಸಕೋಟೆ ಬಳಿ ತೊಂಡೂರು ಗ್ರಾಮದಲ್ಲಿ ೩೨ ಅನಾಥ ಜೀವಗಳೊಂದಿಗೆ ರಮೇಶ್ ದಂಪತಿ ಸೇವೆ ಸಲ್ಲಿಸುತ್ತಿದ್ದರು. ಸೇವಾ ಕಾರ್ಯಗಳಿಗೆ ಗುರುತಿಸಿಕೊಂಡು ಜಿಲ್ಲೆ ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾದ ರಮೇಶ್ ಜಿಲ್ಲೆಯ ಮತ್ತು ನೆರೆ ಜಿಲ್ಲೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
೨೦೧೬ರಲ್ಲಿ ‘ಶಕಿ’್ತಯಲ್ಲಿ ಪ್ರಕಟಗೊಂಡಿದ್ದ ‘ಅನಾಥ ಕಣ್ಣು ಕಾಣದ ಅಜ್ಜಿ ಹಾಗೂ ಶಾಲೆಯಿಂದ ವಂಚಿತವಾಗಿದ್ದ ಮೊಮ್ಮಗ’ ವಿಶೇಷ ವರದಿಯನ್ನು ಗಮನಿಸಿದ ವಿಕಾಸ್ ಜನ ಸೇವಾ ಟ್ರಸ್ಟ್ನ ರಮೇಶ್ ‘ಶಕ್ತಿ’ಯ ಸಹಕಾರದೊಂದಿಗೆ ಅಜ್ಜಿಗೆ ದೃಷ್ಟಿ ಬರುವಂತೆ ಮಾಡುವಲ್ಲಿ ಮತ್ತು ಬಾಲಕನನ್ನು ಶಾಲೆಗೆ ಸೇರಿಸುವ ಕಾಯಕದಲ್ಲಿ ಯಶಸ್ವಿ ಯಾಗಿದ್ದರು. ಇದೀಗ ಬಾಲಕ ಮಡಿಕೇರಿಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿ ದ್ದಾನೆ. ಅಜ್ಜಿ ಲೋಕ ನೋಡುವ ಅವಕಾಶ ದೊಂದಿಗೆ ಸಮೀಪದ ಕೊಪ್ಪದಲ್ಲಿ ಜೀವನ ಕಾಣುತ್ತಿದ್ದಾರೆ. ಮೃತ ರಮೇಶ್ ಪೋಷಕರು, ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಸೇರಿದಂತೆ ತಮ್ಮ ಆಶ್ರಯದಲ್ಲಿದ್ದ ಹಲವಾರು ಅನಾಥರನ್ನು ಅಗಲಿದ್ದಾರೆ. ೩ಏಳನೇ ಪುಟಕ್ಕೆ
ದ್ದಾನೆ. ಅಜ್ಜಿ ಲೋಕ ನೋಡುವ ಅವಕಾಶ ದೊಂದಿಗೆ ಸಮೀಪದ ಕೊಪ್ಪದಲ್ಲಿ ಜೀವನ ಕಾಣುತ್ತಿದ್ದಾರೆ. ಮೃತ ರಮೇಶ್ ಪೋಷಕರು, ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಸೇರಿದಂತೆ ತಮ್ಮ ಆಶ್ರಯದಲ್ಲಿದ್ದ ಹಲವಾರು ಅನಾಥರನ್ನು ಅಗಲಿದ್ದಾರೆ. ೩ಏಳನೇ ಪುಟಕ್ಕೆ
ಸಹಾಯ ಹಸ್ತ ನೀಡಲು ಪ್ರಯತ್ನಿಸಲಾಗುವುದು ಎಂದರು.
ಶಾಸಕ ಡಾ ಮಂತರ್ ಗೌಡ ಅವರು ಶನಿವಾರ ಸಂಜೆ ಮೈಸೂರು ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ದಂಪತಿಗಳ ಆರೋಗ್ಯ ವಿಚಾರಿಸಿ ಸಹಾಯ ಹಸ್ತ ನೀಡಿದ್ದರು. ರಮೇಶ್ ಅವರ ಮೃತದೇಹದ ಅಂತಿಮ ದರ್ಶನಕ್ಕೆ ತೊಂಡೂರಿನಲ್ಲಿ ಹಾಗೂ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಮಡಿಕೇರಿ ತರಲಾಯಿತು. ರಮೇಶ್ ಅವರ ಅಂತ್ಯಕ್ರಿಯೆ ತಾ. ೯ ರಂದು (ಇಂದು) ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.