ಸೋಮವಾರಪೇಟೆ, ಅ. ೮: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಸಂಘದ ನೂತನ ಭವನ ನಿರ್ಮಾಣ ಮಾಡಲು ಈಗಾಗಲೇ ಚಾಲನೆ ನೀಡಲಾಗಿದ್ದು, ಸದಸ್ಯರು ಹೆಚ್ಚಿನ ಧನ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸಂತೋಷಕೂಟವನ್ನು ಆಯೋಜಿಸಲಾಗುವುದು. ಸಂಘದ ಕಾರ್ಯಚಟುವಟಿಕೆಗಳಿಗೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕೆಂದರು.

ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ರಾಜ್ಯಮಟ್ಟದ ಮಾಜಿ ಸೈನಿಕರ ಒಕ್ಕೂಟದಲ್ಲಿ ಸೇರಲು ಹೆಚ್ಚಿನ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಜಿಲ್ಲಾ ಸಮಿತಿಗೆ ೨೦ ವರ್ಷಗಳು ಹಾಗೂ ತಾಲ್ಲೂಕು ಸಂಘಕ್ಕೆ ೧೧ ವರ್ಷಗಳು ಸಂದಿದ್ದು, ಎಲ್ಲಾ ವ್ಯವಸ್ಥೆಗಳು ಇಲ್ಲಿಯೇ ಆಗುತ್ತಿರುವುದರಿಂದ ಮತ್ತೊಂದು ಸಂಘಕ್ಕೆ ಸೇರುವ ಅವಶ್ಯಕತೆ ಇಲ್ಲ ಎಂದು ಸದಸ್ಯರು ಮತ್ತೊಂದು ಸಂಘಕ್ಕೆ ಸೇರುವ ಅವಶ್ಯಕತೆ ಇಲ್ಲ ಎಂದು ಸದಸ್ಯರು