ಐಗೂರು, ಅ. ೮: ಕನ್ನಡ ಈ ನೆಲದ ಭಾಷೆ ಈ ಭಾಷೆಯನ್ನು ಉಳಿಸಬೇಕಾದರೆ ಕನ್ನಡಿಗರೆಲ್ಲರೂ ಜಾಗೃತರಾಗಬೇಕು, ಕನ್ನಡದ ದೀಪ ನಿರಂತರವಾಗಿ ಉರಿಯಲು ಎಲ್ಲರೂ ಕನ್ನಡ ದೀಪವನ್ನು ಉಳಿಸಬೇಕು ಎಂದು ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಕರೆ ನೀಡಿದರು

ಅವರು ಸ.ಕಿ. ಪ್ರಾಥಮಿಕ ಶಾಲೆ ಎಡವಾರೆಯಲ್ಲಿ ಎಸ್.ಎಸ್. ರಾಮ ಮೂರ್ತಿ ದತ್ತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಡವಾರೆ ಶಾಲಾ ಮಕ್ಕಳಿಂದ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಲಾಯಿತು. ಐಗೂರು ಅರಭಾಷೆ ಗೌಡ ಸಮಾಜದ ಅಧ್ಯಕ್ಷರಾದ ಬಾರನ ಭರತ್‌ಕುಮಾರ್ ದೀಪ ಬೆಳಗಿಸಿದರು. ನಿವೃತ್ತ ಪ್ರಾಂಶುಪಾಲರಾದ ಡಿ.ಎಸ್. ಚಂಗಪ್ಪ ಉಪನ್ಯಾಸ ಕಾರ್ಯ ಕ್ರಮದಲ್ಲಿ ಕನ್ನಡ ಭಾಷೆಯು ರಾಷ್ಟಿçÃಯ ಭಾಷೆ ಎಂದರಲ್ಲದೆ ತಾವು ರಾಷ್ಟçಕವಿ ಕುವೆಂಪು ಅವರ ಮನೆಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊAಡರು. ಮುಖ್ಯ ಅತಿಥಿ ಪಂಚಾಯಿತಿ ಸದಸ್ಯ ಬಾರನ ಪ್ರಮೋದ್ ಕನ್ನಡ ಪರಿಷತ್ತಿನ ಕಚೇರಿಗೆ ಗ್ರಾಮ ಪಂಚಾಯಿತಿಯಿAದ ಕಟ್ಟಡವನ್ನು ನೀಡಲಾಗುವುದು ಎಂದರು. ಕಸಾಪ ಐಗೂರು ಕೇಂದ್ರದ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್ ಊರಿನ ಎಲ್ಲರೂ ಕನ್ನಡ ಭಾಷೆಗಾಗಿ ಸಹಕರಿಸಿ ಎಂದು ವಿನಂತಿಸಿದರು. ಮೂಲೆ ಮೂಲೆ ಯಲ್ಲಿ ಹರಿದುಹೋದ ಕನ್ನಡವನ್ನು ಒಂದುಗೂಡಿಸಿ ಎಂದು ಕೆ.ಪಿ. ದಿನೇಶ್ ಕರೆ ನೀಡಿದರು.

ಎಡವಾರೆ ಶಾಲೆಯ ಮುಖ್ಯೋ ಪಾಧ್ಯಾಯರಾದ ವೈ. ಸಿ. ಕುಮಾರ್ ಸುಂದರವಾದ ಮಣ್ಣಿನ ಭಾಷೆ ಕನ್ನಡ ಭಾಷೆ ಎಂದು ತಿಳಿಸಿದರು. ವೇದಿಕೆ ಯಲ್ಲಿ ಕಾರ್ಯದರ್ಶಿ ವೀರರಾಜ್, ಮುಖ್ಯೋಪಾಧ್ಯಾಯರಾದ ಎಂ.ಟಿ. ಸರಳಕುಮಾರಿ, ವಿಶ್ವನಾಥ ಅರಸ್, ಎಂ.ಎಲ್. ಉಮೇಶ್, ಸಿ.ಎಸ್. ನಾಗರಾಜು, ದ್ರಾಕ್ಷಾಯಿಣಿ, ನಿವೃತ್ತ ಉಪಾಧ್ಯಾಯರಾದ ಸೋಮಯ್ಯ ಮಾಸ್ಟರ್, ಕೆ.ಟಿ. ಮೇದಪ್ಪ, ಅಭಿರಾಮ್, ವಾಸು, ಕೆ.ಪಿ. ಮುತ್ತಪ್ಪ, ಲಯನ್ಸ್ನ ಮಾಜಿ ಅಧ್ಯಕ್ಷ ಯೋಗೇಶ್, ನಿವೃತ್ತ ಡಿ.ವೈ.ಎಸ್.ಪಿ ಸೋಮಣ್ಣ, ಹೊನ್ನಪ್ಪ, ಮಂಜುನಾಥ್, ಶಾಲಾ ಶಿಕ್ಷಕರಾದ ಕೆಂಪೇಗೌಡ, ಮಂಜುನಾಥ್, ಅಜಿತ್ ಕುಮಾರ್, ಶಿಕ್ಷಕಿಯರಾದ ರಾಗಿಣಿ, ಜೋಶ್ ಪಿನ್ ಸಿಕ್ವೆರಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಎಲ್ಲಾ ಅತಿಥಿಗಳಿಗೆ ಕೊಡಗಿನ ಸಾಹಿತಿಗಳು ಬರೆದ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಡಿ.ಎಸ್. ಚಂಗಪ್ಪ ಅವರನ್ನು ಸನ್ಮಾನಿ ಸಲಾಯಿತು. ಜ್ಯೋತಿ ಅರುಣ್ ಸ್ವಾಗತಿಸಿ, ವಂದಿಸಿದರು.