ಇಂದು ವಿಶ್ವ ಅಂಚೆ ದಿನ

ಅದೊಂದು ಕಾಲವಿತ್ತು., ಪರಸ್ಪರ ಮಾಹಿತಿ, ಸಂದೇಶಗಳನ್ನು ರವಾನೆ ಮಾಡಲು ಮನುಷ್ಯರನ್ನು ಒಂದೂರಿನಿAದ ಮತ್ತೊಂದೂರಿಗೆ ಕಳುಹಿಸಿಕೊಡಲಾಗುತ್ತಿತ್ತು. ಅವರನ್ನು ಮಾಹಿತಿದಾರ, ಧೂತನೆಂದು ಕರೆಯುತ್ತಿದ್ದರು,. ಬುದ್ಧಿವಂತನಾದ ಮನುಷ್ಯ ಪಾರಿವಾಳಗಳನ್ನು ಪಳಗಿಸಿ ಅದರ ಕಾಲಿಗೆ ಪತ್ರಗಳನ್ನು ಕಟ್ಟಿ ರವಾನೆ ಮಾಡುವ ಉಪಾಯ ಕಂಡುಕೊAಡ. ಮುಂದುವರಿಯುತ್ತಾ ಹೊಸ ಆವಿಷ್ಕಾರಗಳಾಗುತ್ತಿದ್ದಂತೆ ವಾಹನಗಳ ಮೂಲಕ ಪತ್ರ ರವಾನೆ ಮಾಡುತ್ತಾ ಅದನ್ನು ಸಂಬAಧಿಸಿದ ವ್ಯಕ್ತಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಹೀಗೇ ಅಂಚೆ ವ್ಯವಸ್ಥೆ ಜಾರಿಗೆ ಬಂದು ಅಂಚೆ ಇಲಾಖೆಯೂ ಸ್ಥಾಪನೆಗೊಂಡಿತು.

ಆವಾಗ., ಅಂಚೆ ಕಚೇರಿಯೆಂದರೆ ಅದಕ್ಕಿದ್ದ ಗೌರವ ದೊಡ್ಡದು. ಊರಿನಲ್ಲಿ ಯಾರಿಗಾದರೂ ಒಂದು ಕಾಗದ ಅಂಚೆ ಮೂಲಕ ಬಂತೆAದರೆ ಆತ ಆ ಊರಿನ ಪ್ರತಿಷ್ಠಿತ ವ್ಯಕ್ತಿ ಎಂದೇ ಹೇಳಲಾಗುತ್ತಿತ್ತು. ಬರಬರುತ್ತಾ ಎಲ್ಲರ ಮನೆಗೂ ಅಂಚೆ ಕಾಗದ ಬರಲಾರಂಭಿಸುತ್ತಿದ್ದAತೆ ಅಂಚೆ ಅಣ್ಣ ಊರಿನವರೆಲ್ಲರಿಗೂ ಪ್ರೀತಿಯ ಅಣ್ಣನಾಗಿದ್ದ. ಅಂಚೆ ಅಣ್ಣನನ್ನು ಕಂಡರೆ ಸಾಕು ಓಡಿ ಹೋಗಿ ‘ಅಣ್ಣ ಕಾಗದ ಉಂಟಾ..?’ ಎಂದು ಮುಗಿ ಬೀಳುತ್ತಿದ್ದರು. ಶಾಲಾ-ಕಾಲೇಜು ಬಿಟ್ಟೊಡನೆ ಓಡಿ ಹೋಗುತ್ತಿದ್ದುದೇ ಅಂಚೆ ಕಚೇರಿ ಅಥವಾ ಅಂಚೆಯಣ್ಣ ಕಾಗದಗಳನ್ನು ಇರಿಸಿ ಹೋಗುತ್ತಿದ್ದ ಅಂಗಡಿಗಳಿಗೆ., ದೂರದ ಸಂಬAಧಿಗಳಿAದ, ಸ್ನೇಹಿತರಿಂದ, ಹೊರಗಡೆ ದುಡಿಯುತ್ತಿದ್ದ ಅಪ್ಪನಿಂದ ಕಾಗದ, ಗ್ರೀಟಿಂಗ್ ಕಾರ್ಡ್ಗಳು ಬಂದುವೆAದರೆ ಆ ಸಂತಸ ಹೇಳತೀರದು. ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸಿ ಸಮಯ ಸಿಕ್ಕಾಗಲೆಲ್ಲ ಮತ್ತೆ ಮತ್ತೆ ತೆರೆದು ಓದುತ್ತಿದ್ದುದೆಲ್ಲವೂ ಈಗ ನೆನಪು ಮಾತ್ರ..!

ಆಧುನಿಕತೆಯ ನಾಗಾಲೋಟದಲ್ಲಿ., ತಾಂತ್ರಿಕತೆಯ ಭರಾಟೆಯಲ್ಲಿ ಕೊರಿಯರ್, ಇಂಟರ್‌ನೆಟ್, ವ್ಯಾಟ್ಸ್ ಆ್ಯಪ್‌ಗಳು ಬಂದ ಬಳಿಕ ಕಾಗದ ಪತ್ರಗಳಿಗೆ ಬೆಲೆಯೇ ಇಲ್ಲವಾಗಿದೆ. ‘ನನ್ನ ಪ್ರೀತಿಯ., ಗೌರವಾನ್ವಿತ., ಪೂಜ್ಯ ಗುರುಗಳಿಗೆ..’ ಹೀಗೇ ಸಂಭೋದಿಸಲ್ಪಡುತ್ತಿದ್ದ ಪದಗಳೀಗ ‘ಹಾಯ್, ಹಲೋ., ಹೌ ಯೂ..’ ಎಂದಾಗಿಬಿಟ್ಟಿದೆ. ಅಂಚೆ ಬಟವಾಡೆ ಸರಕಾರಿ ಪತ್ರಗಳು, ಬ್ಯಾಂಕ್ ನೋಟೀಸ್‌ಗಳಿಗೆ ಮಾತ್ರ ಸೀಮಿತವಾದಂತಿದೆ. ಏನೇ ಆದರೂ ಆಗಿನಿಂದಲೂ ಮಾನವ ಜೀವಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ‘ಅಂಚೆ ಸೇವೆ’ಗೆ ಪ್ರೀತಿಯ ನಮನ ಸಲ್ಲಸಲೇಬೇಕು.

ಇಂದು ವಿಶ್ವ ಅಂಚೆ ದಿನ. ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ೯ ರಂದು ಆಚರಿಸಲಾಗುತ್ತದೆ. ೧೮೭೪ ರಲ್ಲಿ ಸ್ವಿಸ್ ರಾಜಧಾನಿ ಬರ್ನ್ನಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪನೆಯ ವಾರ್ಷಿಕೋತ್ಸವ ಆಚರಿಸಲಾಯಿತು. ೧೯೬೯ ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಯುಪಿಯು ಕಾಂಗ್ರೆಸ್‌ನಲ್ಲಿ ಇದನ್ನು ವಿಶ್ವ ಅಂಚೆ ದಿನವೆಂದು ಘೋಷಿಸಲಾಯಿತು. ಅಂದಿನಿAದ, ಪ್ರಪಂಚದಾದ್ಯAತದ ದೇಶಗಳು ವಾರ್ಷಿಕವಾಗಿ ಅಂಚೆ ದಿನವನ್ನು ಆಚರಿಸುತ್ತಾ ಬರುತ್ತಿವೆ. ಅನೇಕ ದೇಶಗಳಲ್ಲಿನ ಪೋಸ್ಟ್ಗಳು, ಹೊಸ ಅಂಚೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲು ಅಥವಾ ಪ್ರಚಾರ ಮಾಡಲು ಈ ದಿನವನ್ನು ಬಳಸಲಾಗುತ್ತದೆ.

‘ವಿಶ್ವಾಸಕ್ಕಾಗಿ ಒಟ್ಟಿಗೆ: ಸುರಕ್ಷಿತ ಮತ್ತು ಸಂಪರ್ಕಿತ ಭವಿಷ್ಯಕ್ಕಾಗಿ ಸಹಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಅಂಚೆ ಕಚೇರಿಗಳು ಸುಸಂಘಟಿತ, ಅಂತರ್ಗತ, ಸಂಪರ್ಕಿತ ಸಮುದಾಯಗಳನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಪ್ರಸ್ತುತ ಐದು ಮಿಲಿಯನ್‌ಗಿಂತಲೂ ಹೆಚ್ಚು ಅಂಚೆ ನೌಕರರಿಗೆ ಸಂದೇಶಗಳು, ಉಡುಗೊರೆಗಳು ಮತ್ತು ಸರಕುಗಳು, ಹಣ ಮತ್ತು ಔಷಧಿಗಳವರೆಗೆ ವಿವಿಧ ಅಗತ್ಯ ಮತ್ತು ವೈಯಕ್ತಿಕ ವಸ್ತುಗಳನ್ನು ವಹಿಸಿಕೊಡಲಾಗಿದೆ.

ವಿಶ್ವ ಅಂಚೆ ದಿನದ ಉದ್ದೇಶವು ಜನರ ಮತ್ತು ವ್ಯವಹಾರಗಳ ದೈನಂದಿನ ಜೀವನದಲ್ಲಿ ಅಂಚೆ ಕ್ಷೇತ್ರದ ಪಾತ್ರ ಮತ್ತು ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸು ವುದಾಗಿದೆ. ಈ ಆಚರಣೆಯು ಸದಸ್ಯ ರಾಷ್ಟçಗಳನ್ನು ರಾಷ್ಟಿçÃಯ ಮಟ್ಟದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿ ತಮ್ಮ ಪೋಸ್ಟ್ನ ಪಾತ್ರ ಮತ್ತು ಚಟುವಟಿಕೆಗಳ ಬಗ್ಗೆ ವಿಶಾಲವಾದ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುತ್ತದೆ.

ಪ್ರತಿ ವರ್ಷ, ೧೫೦ಕ್ಕೂ ಹೆಚ್ಚು ದೇಶಗಳು ವಿಶ್ವ ಅಂಚೆ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ. ಕೆಲವು ದೇಶಗಳಲ್ಲಿ, ವಿಶ್ವ ಅಂಚೆ ದಿನವನ್ನು ಕೆಲಸದ ರಜಾದಿನವಾಗಿ ಆಚರಿಸಲಾಗುತ್ತದೆ. ಕೆಲವು ಪೋಸ್ಟ್ಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ಸೇವೆಗಾಗಿ ಬಹುಮಾನ ನೀಡಲು ವಿಶ್ವ ಅಂಚೆ ದಿನವನ್ನು ಬಳಸುತ್ತವೆ.

‘ವ್ಯಾಟ್ಸ್ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಎಷ್ಟೇ ಸಂವಹನ ಮಾಡಿದರೂ ಮನದಲ್ಲಿರುವ ಭಾವನೆಗಳನ್ನು ಕಾಗದದಲ್ಲಿ ಬಿತ್ತಿದಷ್ಟು ತೃಪ್ತಿ ಆಗದು., ಅಂಚೆ ಸೇವೆಗೆ ಒಂದು ಹ್ಯಾಟ್ಸ್ ಅಪ್ ಮಾಡೋಣ..’

? ಕುಡೆಕಲ್ ಸಂತೋಷ್