ವೀರಾಜಪೇಟೆ, ಅ. ೮: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನವನ್ನು ಸರಕಾರ ಕೂಡಲೇ ಬಿಡುಗಡೆ ಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಯಿAದ ವೀರಾಜಪೇಟೆ ಕಾರ್ಮಿಕ ನಿರೀಕ್ಷಕರ ಕಚೇರಿಯ ಸಹಾಯಕ ಅಧಿಕಾರಿ ಬಿ.ಆರ್.ಕಾವ್ಯ ಅವರಿಗೆ ಮನವಿ ಸಲ್ಲಿಸಿಸಲಾಯಿತು.
ಈ ಸಂದರ್ಭ ಕಟ್ಟಡ ಕಾರ್ಮಿಕ ಸಂಘಟನೆಯ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಎ.ಸಿ.ಸಾಬು ಮಾತನಾಡಿ, ೨೦೨೨-೨೩ನೆ ಸಾಲಿನ ಶೈಕ್ಷಣಿಕ ಸಹಾಯಧನವನ್ನು ಕಾರ್ಮಿಕರ ಕಲ್ಯಾಣ ಮಂಡಳಿಯಿAದ ಪ್ರತಿವರ್ಷ ನೀಡುತ್ತಿದೆ. ಆದರೆ ಈ ವರ್ಷ ಇದುವರೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ, ಕಳೆದ ೨೦೨೧-೨೨ನೇ ಸಾಲಿನಲ್ಲಿ ಹಿಂದಿನ ಬಿಜೆಪಿ ಸರಕಾರ ಇದ್ದ ಸಂದರ್ಭ ಸುಮಾರು ೧.೫ ಲಕ್ಷ ಫಲಾನುಭವಿಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಅದು ಬಿಡಗಡೆಯಾಗಿಲ್ಲ. ಶಾಲೆಗಳು ಪ್ರಾರಂಭವಾದರೂ ಇದುವರೆಗೂ ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿಲ್ಲ ಎಂದು ತಿಳಿಸಿದ ಎ.ಸಿ.ಸಾಬು ಆಕ್ಷೇಪಿಸಿದರು.
ಮನವಿ ಸಲ್ಲಿಸುವ ಸಂದರ್ಭ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಸಮಿತಿಯ ಕಾಶಿಂ, ವೀರಾಜಪೇಟೆ ನಗರ ಅಧ್ಯಕ್ಷ ಕೆ.ಕೆ.ಹರಿದಾಸ್, ಸದಸ್ಯರಾದ ಕುಂಜಾ, ನಾಗರಾಜು, ಗಣೇಶ್, ಡಿ.ಎಂ. ವಿಕ್ರಂ ಮತ್ತಿತರರು ಹಾಜರಿದ್ದರು.