ಭಾಗಮAಡಲ ಮತ್ತು ತಲಕಾವೇರಿ ಯಾತ್ರಾ ಸ್ಥಳವಾದ್ದರಿಂದ ದಿನವೂ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಹಲವಾರು ಸಮಸ್ಯೆಗಳಿದ್ದು, ಸಂಬAಧಿಸಿದವರ ದೂರದೃಷ್ಟಿಯ ಕೊರತೆಯೇ ಕಾರಣ ಎನ್ನಬಹುದು. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಕೆಲವು ವರ್ಷಗಳಿಂದ ಭಾಗಮಂಡಲದಲ್ಲಿ ನಡೆಯುತ್ತಿರುವ ಕಾಮಗಾರಿಗಳೇ ಕಾರಣ. ಅಂದಾಜು ೨೫ ವರ್ಷಗಳ ಹಿಂದೆ ಕಾವೇರಿ ಮತ್ತು ಕನ್ನಿಕೆ ನದಿಗೆ ೨ ಹಳೆಯದಾದ ಸೇತುವೆಗಳಿದ್ದವು. ಮಳೆಗಾಲದಲ್ಲಿ ಸಾಧಾರಣ ಮಳೆ ಬಂದರೆ ಈ ೨ ಸೇತುವೆಗಳು ಮುಳುಗಡೆ ಯಾಗುತ್ತಿತ್ತು. ಈ ಸಂದರ್ಭ ಲೋಕೋಪಯೋಗಿ ಇಲಾಖೆ ಯಿಂದ ಈ ೨ ಸೇತುವೆಗಳ ಪಕ್ಕದಲ್ಲೇ ಕೆಲವು ಅಡಿ ಎತ್ತರದಲ್ಲಿ ನೂತನವಾಗಿ ೨ ಸೇತುವೆಗಳನ್ನು ನಿರ್ಮಿಸಲಾಯಿತು. ನಂತರದ ಮಳೆಗಾಲದಲ್ಲಿ ಈ ೨ ಸೇತುವೆಗಳ ಎತ್ತರದಲ್ಲಿದ್ದರಿಂದ ಮುಳುಗಡೆಯಾಗಲಿಲ್ಲ. ಆದರೆ ಅದರ ಪಕ್ಕದಲ್ಲಿ ರಸ್ತೆಗಳು ಮುಳುಗಡೆಯಾಗುತ್ತಿದ್ದವು. ಆಗ ಸೇತುವೆಗಳ ೨ ಬದಿಯಲ್ಲಿ ಪಿಲ್ಲರ್ ಅಳವಡಿಸಿ ರಸ್ತೆಯನ್ನು ಕೂಡ ಎತ್ತರಿಸಿದ್ದರೆ ಈಗಿನ ಮೇಲ್ಸೇತುವೆ ಅಗತ್ಯವಿರಲಿಲ್ಲ. ಈಗಿನ ಭಾಗಮಂಡಲದ ಪ್ರವಾಹಕ್ಕೆ ಮುಖ್ಯ ಕಾರಣ ಇಲ್ಲಿನ ಮುಡಿಶೆಡ್. ಮಳೆಗಾಲದಲ್ಲಿ ಕಾವೇರಿ ಮತ್ತು ಕನ್ನಿಕೆ ನದಿಯಲ್ಲಿ ಪ್ರವಾಹ ಬಂದಾಗ ಅರ್ಧದಷ್ಟು ನೀರನ್ನು ಮುಡಿಶೆಡ್ ತಡೆಹಿಡಿಯುತ್ತದೆ. ಇದರಿಂದ ನೀರು ಸರಾಗವಾಗಿ ಹರಿಯದೆ ಪೇಟೆಗೆ ಮತ್ತು ಭಗಂಡೇಶ್ವರ ದೇವಾಲಯಕ್ಕೆ ನೀರು ನುಗ್ಗುತ್ತದೆ. ೨೦೦೯ ರಲ್ಲಿ ಊರವರ ವಿರೋಧದ ನಡುವೆಯೇ ಅಂದಾಜು ರೂ. ೯೦ ಲಕ್ಷ ವೆಚ್ಚದಲ್ಲಿ ಈ ಮುಡಿಶೆಡ್ಡನ್ನು ಕಟ್ಟಲಾಯಿತು. ಇದನ್ನು ಕಟ್ಟುವ ಮುಂದೆ ಇಲ್ಲಿ ೧೦ ರಿಂದ ೨೦ ಇಂಚು ಮಳೆ ಬಿದ್ದರೆ ಮಾತ್ರ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತು. ಈಗ ೫ ರಿಂದ ೧೦ ಇಂಚು ಮಳೆ ಬಿದ್ದರೆ ಪ್ರವಾಹ ಉಂಟಾಗುತ್ತಿದೆ. ಈಗ ಮುಡಿಶೆಡ್ಡನ್ನು ಯಾರೂ ಉಪಯೋಗಿಸದೆ ನಿಷ್ಪçಯೋಜಕವಾಗಿ ಪಾಳು ಬಿದ್ದಿದೆ. ಇದನ್ನು ನೆಲಸಮ ಮಾಡಿದಲ್ಲಿ ಭಾಗಮಂಡಲ ಪ್ರವಾಹದ ಅರ್ಧ ಸಮಸ್ಯೆ ಮುಗಿದಂತಾಗುತ್ತದೆ. ಇದರಿಂದ ೨೦೨೧ ಮತ್ತು ಈ ವರ್ಷ ತಲಾ ೯೦ ಲಕ್ಷದಲ್ಲಿ ನದಿಯಲ್ಲಿ ಹೂಳೆತ್ತಿ ನದಿಯನ್ನು ಅಗಲಮಾಡಲಾಯಿತು. ಇದರಿಂದ ಪ್ರವಾಹ ಪರಿಸ್ಥಿತಿ ಕೊಂಚಮಟ್ಟಿಗೆ ತಗ್ಗಿದೆ.

೨೦೧೮ ರಲ್ಲಿ ಕೊಡಗಿನ ಮೊದಲ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಯಿತು. ಪ್ರವಾಹ ಪರಿಸ್ಥಿತಿಗೆ ಅನುಗುಣವಾಗಿ ಮೇಲ್ಸೇತುವೆ ನಿರ್ಮಿಸದೆ ಪೇಟೆ ಎಷ್ಟು ಉದ್ದವಿದೆಯೋ ಅಲ್ಲಿಯವರೆಗೂ ಕಾಮಗಾರಿ ಪ್ರಾರಂಭಿಸಲಾಯಿತು. ೩೩ ಕೋಟಿ ವೆಚ್ಚದ ಈ ಕಾಮಗಾರಿ ೫ ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ವರ್ಷದಲ್ಲಿ ೪ ತಿಂಗಳು ಮಳೆಗಾಲವಾದ್ದರಿಂದ ೫ ವರ್ಷದಲ್ಲಿ ೨೦ ತಿಂಗಳು ಕೆಲಸ ನಡೆಯದೆ ಕುಂಟುತ್ತಾ ಸಾಗಿ ಈಗ ಒಂದು ಹಂತಕ್ಕೆ ಬಂದು ತಲುಪಿದೆ.

ಈ ಮೇಲ್ಸೇತುವೆ ಕಾಮಗಾರಿಯಿಂದ ಸ್ಥಳೀಯರಿಗೆ ಈ ೫ ವರ್ಷದಲ್ಲಿ ಒಂದಲ್ಲ ಒಂದು ಸಮಸ್ಯೆಯಾಗುತ್ತಲೇ ಇದೆ. ಕೆಲವು ಜಾಗದ ಮಾಲೀಕರಿಗೆ ಇನ್ನೂ ಸಿಗದ ಪರಿಹಾರ ಹಣ. ಇದಕ್ಕಾಗಿ ದಿನವೂ ಕಚೇರಿಗಳಿಗೆ ಅಲೆಯುವುದೇ ಅವರಿಗೆ ಒಂದು ಕೆಲಸವಾಗಿದೆ. ಕೆಲವರ ವ್ಯಾಪಾರಕ್ಕೂ ಹೊಡೆತ ಬಿದ್ದಿದ್ದು, ಕೆಲವರು ಅಂಗಡಿಗಳನ್ನು ಕಳೆದುಕೊಂಡಿದ್ದು ಜೀವನಕ್ಕೆ ತೊಂದರೆಯಾಗಿದೆ.

ನಾಪೋಕ್ಲು ಸಂಪರ್ಕ ರಸ್ತೆಯಲ್ಲಿ ಮೇಲ್ಸೇತುವೆಯ ೨ ಬದಿಯಲ್ಲಿ ರಸ್ತೆ ಮಾಡದೆ ಅವೈಜ್ಞಾನಿಕವಾಗಿ ಒಂದೇ ಭಾಗದಲ್ಲಿ ಸಂಪರ್ಕ ರಸ್ತೆ ಮಾಡಿದ್ದು, ಇನ್ನೊಂದು ಭಾಗದಲ್ಲಿರುವ ಮನೆ ಮತ್ತು ಅಂಗಡಿ ಮಳಿಗೆಗಳು ಈಗ ನಿರ್ಮಿಸುತ್ತಿರುವ ರ‍್ಯಾಂಪ್‌ನ ಗೋಡೆಯಿಂದ ಮುಚ್ಚಿಹೋಗಿದ್ದು, ಯಾರೂ ಬಾಡಿಗೆಗೆ ಬಾರದೆ ಜಾಗದ ಮೌಲ್ಯ ಕಳೆದುಕೊಳ್ಳುವಂತಾಗಿದೆ. ಭಗಂಡೇಶ್ವರ ದೇವಾಲಯದ ಹಿಂಭಾಗದ ತಲಕಾವೇರಿ ರಸ್ತೆಯಲ್ಲಿ ನಿರ್ಮಿಸಿರುವ ಮೇಲ್ಸೆತುವೆ ಪಿಲ್ಲರ್‌ಗಳು ಕೆಲವು ದೊಡ್ಡ ವಾಹನಗಳಿಗೆ ತಾಗಿ ಜಖಂಗೊAಡಿದೆ. ಯಾತ್ರೆಗೆ ಬರುವ ಚಾಲಕ ತನ್ನದಲ್ಲದ ತಪ್ಪಿಗೆ ತಾನು ದಂಡ ತೆರಬೇಕಾಗಿದೆ. ಈ ಭಾಗದಲ್ಲಿ ಒಂದು ರಸ್ತೆಯನ್ನು ಎತ್ತರಿಸಿದ್ದರೆ ಇನ್ನೊಂದು ರಸ್ತೆಯನ್ನು ೨ ಅಡಿ ತಗ್ಗಿಸಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆ ಮಧ್ಯದಲ್ಲಿ ಪಿಲ್ಲರ್ ಪಕ್ಕದಲ್ಲೇ ನೀರು ಹರಿಯಲು ಚರಂಡಿ ಮಾಡಿದ್ದು ಇದಕ್ಕೆ ಸಂಪರ್ಕದ ಕೊರತೆಯಿಂದ ನೀರು ರಸ್ತೆಯಲ್ಲೆ ಹರಿಯುತ್ತಿದೆ.

ಈ ರಸ್ತೆಯ ಪಕ್ಕದಲ್ಲೆ ಪಂಚಾಯಿತಿ ವತಿಯಿಂದ ಕೆಲವು ಇಂಗು ಗುಂಡಿಗಳನ್ನು ತೆಗೆದಿದ್ದು ಕಾಮಗಾರಿ ಸಂದರ್ಭ ಅದೆಲ್ಲಾ ನಾಶವಾಗಿದೆ. ಅದೇ ರೀತಿ ಇಲ್ಲಿನ ೪ ಅಂತಸ್ತಿನ ಹೊಟೇಲ್‌ನವರು ನಿರ್ಮಿಸಿದ ಟಾಯ್ಲೆಟ್ ಗುಂಡಿಯು ನಾಶವಾಗಿದ್ದು, ಈಗ ರಸ್ತೆ ಬದಿಯಲ್ಲಿ ನೀರು ಹರಿಯುವ ಚರಂಡಿಯಲ್ಲಿ ಟಾಯ್ಲೆಟ್ ಗುಂಡಿಯನ್ನು ನಿರ್ಮಿಸಿದ್ದು ಇದರ ಒಳಗಿನಿಂದ ಜಲದ ನೀರು ಉಕ್ಕಿ ಹರಿದು ಟಾಯ್ಲೆಟ್ ಮಿಶ್ರಿತ ನೀರು ಕಾವೇರಿ ನದಿಗೆ ಸೇರುತ್ತಿದೆ.

ಜೋರು ಮಳೆ ಬಂದಾಗ ಈ ಟಾಯ್ಲೆಟ್ ನೀರು ರಸ್ತೆಯಲ್ಲಿ ಉಕ್ಕಿ ಹರಿಯುತ್ತಿದ್ದು ಸಾರ್ವಜನಿಕರು ಇದರ ಮೇಲೆಯೇ ನಡೆದುಕೊಂಡು ಹೋಗುವಂತಾಗಿದೆ. ಇನ್ನೂ ಹಲವಾರು ಸಮಸ್ಯೆಗಳು ಇಲ್ಲಿ ಕಂಡು ಬರುತ್ತಿದೆ. ಈ ಕಾಮಗಾರಿಯ ಪ್ರಾರಂಭದಲ್ಲಿದ್ದ ಇಂಜಿನಿಯರ್‌ಗಳು ವರ್ಗಾವಣೆಗೊಂಡಿದ್ದು ಈಗಿನ ಇಂಜಿನಿಯರ್‌ಗಳು ಹಿಂದೆ ಮಾಡಿದ ಕೆಲವೊಂದು ತಪ್ಪುಗಳಿಂದ ತಾವು ಕಷ್ಟಪಡುವಂತಾಗಿದೆ.

ಯಾವ ಸೇತುವೆ ಮಾಡಿದರೂ ಎಷ್ಟೋ ಲಕ್ಷ ಖರ್ಚು ಮಾಡಿ ಹೂಳೆತ್ತಿದರೂ ಹಾಗೂ ಮೇಲ್ಸೇತುವೆ ಸಂಚಾರಕ್ಕೆ ದೊರೆತರೂ ಮಳೆಗಾಲದಲ್ಲಿ ಸ್ಥಳೀಯ ಜನರ ಮನೆಗಳಿಗೆ ಮತ್ತು ಭಗಂಡೇಶ್ವರ ದೇವಾಲಯಕ್ಕೆ ನೀರು ನುಗ್ಗುವುದು ತಪ್ಪಿದ್ದಲ್ಲ.

ಈಗ ೩ ಬದಿಯಲ್ಲಿ ರ‍್ಯಾಂಪ್ ನಿರ್ಮಿಸುತ್ತಿರುವುದರಿಂದ ಎಲ್ಲಾ ಕೆಸರುಮಯವಾಗಿದ್ದು, ಒಂದು ರಸ್ತೆಯನ್ನು ಬಂದ್ ಮಾಡಿ ಒಂದೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ೧೭ ರಂದು ನಡೆಯುವ ಜಾತ್ರೆಗೆ ಇನ್ನೂ ಯಾವೆಲ್ಲ ಸಮಸ್ಯೆಗಳು ಕಂಡು ಬರುವುದು ನಿಶ್ಚಿತ. ದೂರದೃಷ್ಟಿಯ ಕೊರತೆಯಿಂದ ಒಂದು ಊರನ್ನು ಯಾವ ರೀತಿ ಹಾಳುಮಾಡ ಬಹುದೆಂಬುದಕ್ಕೆ ಈಗಿನ ಭಾಗಮಂಡಲ ಪೇಟೆಯೇ ಸ್ಪಷ್ಟ ನಿದರ್ಶನ.

- ಪಾಣತ್ತಲೆ ಜೀವನ್ ಕುಮಾರ್, ಭಾಗಮಂಡಲ.

ಮೊ. ೯೩೫೩೦೭೬೪೨೪