ಶನಿವಾರಸಂತೆ, ಅ. ೮: ಜಾನಪದ ಉಳಿದರೆ ಸಂಸ್ಕಾರ ಉಳಿಯುತ್ತದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಹೇಳಿದರು.

ಸಮೀಪದ ಕೊಡ್ಲಿಪೇಟೆಯ ಶ್ರೀಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗೌರಿ-ಗಣೇಶೋತ್ಸವ ಪ್ರಯುಕ್ತ ಶ್ರೀ ಗಂಗಾ ಮಹಿಳಾ ಸಮಾಜ ಹಾಗೂ ವೀರಶೈವ ಸಮಾಜದ ಸಹಭಾಗಿತ್ವದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸೂರು ಗ್ರಾಮದ ಶ್ರೀ ಕಾಲಭೈರವೇಶ್ವರ ಜೋಗಿ ಕಲಾ ತಂಡದ ಘೀ ಘೀ ಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜದ ಅಧ್ಯಕ್ಷ ಶಿಲ್ಪಿ ವರಪ್ರಸಾದ್ ಮಾತನಾಡಿ, ಬಾಲ್ಯದಲ್ಲಿ ದನ ಮೇಯಿಸುವಾಗ ಹಾಡುತ್ತಿದ್ದ ಘೀ ಘೀ ಪದ ಜಾನಪದ ಗೀತೆಯಾಗಿದ್ದು ಶನಿವಾರಸಂತೆ, ಅ. ೮: ಜಾನಪದ ಉಳಿದರೆ ಸಂಸ್ಕಾರ ಉಳಿಯುತ್ತದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಹೇಳಿದರು.

ಸಮೀಪದ ಕೊಡ್ಲಿಪೇಟೆಯ ಶ್ರೀಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗೌರಿ-ಗಣೇಶೋತ್ಸವ ಪ್ರಯುಕ್ತ ಶ್ರೀ ಗಂಗಾ ಮಹಿಳಾ ಸಮಾಜ ಹಾಗೂ ವೀರಶೈವ ಸಮಾಜದ ಸಹಭಾಗಿತ್ವದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸೂರು ಗ್ರಾಮದ ಶ್ರೀ ಕಾಲಭೈರವೇಶ್ವರ ಜೋಗಿ ಕಲಾ ತಂಡದ ಘೀ ಘೀ ಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜದ ಅಧ್ಯಕ್ಷ ಶಿಲ್ಪಿ ವರಪ್ರಸಾದ್ ಮಾತನಾಡಿ, ಬಾಲ್ಯದಲ್ಲಿ ದನ ಮೇಯಿಸುವಾಗ ಹಾಡುತ್ತಿದ್ದ ಘೀ ಘೀ ಪದ ಜಾನಪದ ಗೀತೆಯಾಗಿದ್ದು ಬೆಳೆಗಾರ ಕೆ.ಎನ್. ವಸಂತ್ ಮಾತನಾಡಿ, ಶ್ರೀ ಗಂಗಾ ಮಹಿಳಾ ಸಮಾಜ ಸರ್ಕಾರದ ಸವಲತ್ತು- ಸೌಲಭ್ಯ ಬಯಸದೇ ಸ್ವಯಂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮ ನೀಡಿದ ಶ್ರೀ ಕಾಲಭೈರವೇಶ್ವರ ಜೋಗಿ ಕಲಾ ತಂಡದ ಮುಖ್ಯಸ್ಥ ಕಲಾವಿದ ಗುಂಡಪ್ಪ ಜೋಗಿ, ಸಹ ಕಲಾವಿದರಾದ ಶಿವರುದ್ರಪ್ಪ ಜೋಗಿ, ನಾಗರಾಜ್ ಜೋಗಿ ಹಾಗೂ ಗಣೇಶ್ ಜೋಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶ್ರೀ ಗಂಗಾ ಮಹಿಳಾ ಸಮಾದ ಅಧ್ಯಕ್ಷೆ ಮಂಜುಳಾ ಸುರೇಶ್ ಮಾತನಾಡಿ, ಶ್ರೀಗಂಗಾ ಮಹಿಳಾ ಸಮಾಜ ಒಂದೇ ಕುಟುಂಬದAತೆ ಇದ್ದು ೮೦ ಸದಸ್ಯೆಯರ ಸೌಹಾರ್ದತೆ, ಸಹಕಾರದಿಂದ ಸಕಾರಾತ್ಮಕವಾಗಿ ನಡೆದು ಬರುತ್ತಿದ್ದು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಪುರುಷರ ಸಹಕಾರದಿಂದ ಮಹಿಳಾ ಸಂಘದ ಅಭಿವೃದ್ಧಿ ಸಾಧ್ಯ. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರದ ಅಗತ್ಯವಿದೆ ಎಂದು ಮನವಿ ಮಾಡಿದರು.

ಸಂಘದ ನಿರ್ದೇಶಕಿ ಮಮತಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಲತಾ, ಕಸಾಪ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಶಾಂತಮಲ್ಲಪ್ಪ, ಸಂಘದ ನಿರ್ದೇಶಕರು, ಸದಸ್ಯರು ಹಾಜರಿದ್ದರು.