ಮಡಿಕೇರಿ, ಅ. ೭: ಕಾರ್ಮಿಕ ಸಚಿವರು ಹಾಗೂ ಈ ಕಚೇರಿಯಿಂದ ನೀಡಿರುವ ನಿರ್ದೇಶನಗಳ ಅನುಸಾರ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಡಿಯಲ್ಲಿ ನೋಂದಣಿ ಅಭಿಯಾನವನ್ನು ಕೈಗೊಂಡು ವಾಣಿಜ್ಯ ಬಳಕೆಗೆ, ವಿದ್ಯುತ್ ಸಂಪರ್ಕ ಪಡೆದಿರುವ ಜಿ.ಎಸ್.ಟಿ. ಮತ್ತು ಎಂ.ಎಸ್.ಎA.ಇ. ವ್ಯಾಪಾರ ಉದ್ಯಮ ಪರವಾನಗಿ ಮುಂತಾದ ದತ್ತಾಂಶಗಳ ಆಧಾರದ ಮೇಲೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ನಿಯಮಾನುಸಾರ ನೋಂದಣಿ ಮಾಡಿಸಿ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತರುವಂತೆ ನಿರ್ದೇಶನಗಳನ್ನು ನೀಡಲಾಗಿತ್ತು.
ಕಾರ್ಮಿಕ ಸಚಿವರು ಈ ಕುರಿತು ನಡೆಸುತ್ತಿರುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲ್ಲಿಯವರೆಗೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿಯಲ್ಲಿ ಯಾವುದೇ ನಿರೀಕ್ಷಿತ ಪ್ರಗತಿ ಕಂಡು ಬಂದಿರುವುದಿಲ್ಲ ಮತ್ತು ನಿಗದಿಪಡಿಸಿದ ಗುರಿಯನ್ನು ಸಾಧಿಸಿರುವುದಿಲ್ಲವೆಂದು, ವಾಣಿಜ್ಯ ಬಳಕೆಯ ವಿದ್ಯುತ್ ಸಂಪರ್ಕ, ಜಿ.ಎಸ್.ಟಿ. ಮತ್ತು ಎಂ.ಎಸ್.ಎA.ಇ. ವ್ಯಾಪಾರ ಉದ್ಯಮ ಪರವಾನಗಿಗಳಿಗೆ ಹೋಲಿಸಿದರೆ ಕಾರ್ಮಿಕ ಇಲಾಖೆಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿಯು ಅತ್ಯಂತ ಕಡಿಮೆ ಇರುತ್ತದೆಂದು ಆಕ್ಷೇಪ ವ್ಯಕ್ತಪಡಿಸಿರುತ್ತಾರೆ.
ಆದ್ದರಿಂದ ಈ ಕೂಡಲೇ ಎಲ್ಲಾ ಕಾರ್ಮಿಕ ನಿರೀಕ್ಷಕರು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರುಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಕಾಯ್ದೆಯಡಿ ನೋಂದಣಿ ಮಾಡಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಈ ಕುರಿತಾಗಿ ಅಗತ್ಯ ಕ್ರಮಕೈಗೊಳ್ಳಲು ಹಾಗೂ ನಿಮ್ಮ ಕಾರ್ಯವ್ಯಾಪ್ತಿಯ ವಿವಿಧ ಸಂಸ್ಥೆಗಳ ವರ್ತಕರುಗಳನ್ನು ಭೇಟಿ ಮಾಡಿ ಎಲ್ಲಾ ಸಂಸ್ಥೆಗಳ ಮಾಲೀಕರಿಗೆ ನೋಂದಣಿ ಮಾಡಿಸಲು ಹಾಗೂ ಈಗಾಗಲೇ ನೋಂದಣಿಯಾಗಿ ನವೀಕರಣಕ್ಕೆ ಬಾಕಿ ಇರುವ ಸಂಸ್ಥೆಗಳ ನೋಂದಣಿ ಪತ್ರವನ್ನು ನವೀಕರಣಗೊಳಿಸಲು ತಿಳುವಳಿಕೆ ನೀಡಲು ಅಗತ್ಯ ಕ್ರಮ ಕೈಗೊಂಡು ನಿಗದಿತ ಗುರಿ ಸಾಧಿಸಲು ಸೂಚಿಸಿದೆ. ಇದಕ್ಕೆ ತಪ್ಪಿದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕೆ.ಸಿ.ಎಸ್.ಆರ್. ನಿಯಮಾವಳಿಗಳ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.
ಎಲ್ಲಾ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ೧೯೬೧ ರ ಕಲಂ ೪(೧)ರನ್ವಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಪ್ರಾರಂಭಿಸಿದ ೩೦ ದಿನಗಳೊಳಗೆ (ಸಂಸ್ಥೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳದಿದ್ದರೂ ಸಹ) ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಮಾಲೀಕರು ತಮ್ಮ ಅಂಗಡಿ-ವಾಣಿಜ್ಯ ಸಂಸ್ಥೆಗಳನ್ನು ನೋಂದಣಿ ಮಾಡಿಸಿಕೊಳ್ಳದೇ ಇರುವುದು ಕಾಯ್ದೆಯ ಕಲಂ ೩೦ ರನ್ವಯ ದಂಡನಾರ್ಹವಾಗಿರುತ್ತದೆ. ಸದರಿ ನೋಂದಣಿಯು ಆನ್ಲೈನ್ ಪ್ರಕ್ರಿಯೆಯಾಗಿದ್ದು, ನಿಗದಿತ ಶುಲ್ಕ ಹಾಗೂ ಅಗತ್ಯ ದಾಖಲಾತಿಗಳನ್ನು eಞಚಿಡಿmiಞಚಿ.ಛಿom ಆನ್ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿರುತ್ತದೆ.
ನೋಂದಣಿ ಶುಲ್ಕ: ಕಾರ್ಮಿಕರಲ್ಲದ ಸಂಸ್ಥೆಗಳಿಗೆ ರೂ. ೩೦೦, ೧ ರಿಂದ ೯ ಕಾರ್ಮಿಕರಿರುವ ಸಂಸ್ಥೆಗಳಿಗೆ ರೂ. ೬೦೦, ೧೦ ರಿಂದ ೧೯ ಕಾರ್ಮಿಕರಿಗೆ ರೂ. ೪,೦೦೦, ೨೦ ರಿಂದ ೪೯ ಕಾರ್ಮಿಕರಿಗೆ ೧೦,೦೦೦, ೫೦ ರಿಂದ ೯೯ ಕಾರ್ಮಿಕರಿಗೆ ೨೦,೦೦೦, ೧೦೦ ರಿಂದ ೨೫೦ ಕಾರ್ಮಿಕರು ರೂ. ೪೦,೦೦೦, ೨೫೧ ರಿಂದ ೫೦೦ ಕಾರ್ಮಿಕರು ರೂ. ೫೦,೦೦೦, ೫೦೧ ರಿಂದ ೧೦೦ ಕಾರ್ಮಿಕರು ರೂ. ೭೦,೦೦೦, ೧೦೦೧ ಕ್ಕಿಂತ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಿಗೆ ರೂ. ೭೫,೦೦೦.
ಈ ನೋಂದಣಿ ಸಂಬAಧ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಇ-ಮೇಲ್ ವಿಳಾಸ eಞಚಿಡಿmiಞಚಿಟಚಿbouಡಿ@gmಚಿiಟ.ಛಿom ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕರು ೨೨ನೇ ವೃತ್ತ, ಬೆಂಗಳೂರು ಇವರನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಕಾರ್ಮಿಕ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.