ಗೋಣಿಕೊಪ್ಪ ವರದಿ, ಅ. ೭ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕ್ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ತಂಡಗಳ ನಡುವಿನ ಸೆವೆನ್ಸೈಡ್ ಹಾಕಿ ಟೂರ್ನಿಯಲ್ಲಿ ಕಾಕೋಟ್ ಗ್ರೀನ್ಸ್ ಹಾಗೂ ಇವೈಟಿ ಬೇಗೂರು ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ. ಭಾನುವಾರ ಮಧ್ಯಾಹ್ನ ೩ ಗಂಟೆಗೆ ಫೈನಲ್ ಹಣಾಹಣಿ ನಡೆಯಲಿದೆ.
ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಕಾಕೋಟ್ ಗ್ರೀನ್ಸ್ ತಂಡವು ಕೊಟ್ಟಗೇರಿ ತಂಡದ ವಿರುದ್ಧ ಜಯಿಸಿತು. ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇವೈಟಿ ಬೇಗೂರು ತಂಡವು ಕದನೂರು ವಿರುದ್ಧ ಜಯಿಸಿತು.
ಫಲಿತಾಂಶ : ಕ್ವಾರ್ಟರ್ ಫೈನಲ್ನಲ್ಲಿ ಕಾಕೋಟ್ ಗ್ರೀನ್ಸ್ ತಂಡವು ಕೊಟ್ಟಗೇರಿ ತಂಡವನ್ನು ೫-೧ ಗೋಲುಗಳಿಂದ ಮಣಿಸಿತು. ಕಾಕೋಟ್ ಪರ ವಿಶಾಲ್ ೨, ಲೆಹರ್, ಬೋಪಣ್ಣ, ಧನುಶ್, ಕೊಟ್ಟಗೇರಿ ಆಟಗಾರ ಅಯ್ಯಪ್ಪ ತಲಾ ಒಂದೊAದು ಗೋಲು ಹೊಡೆದರು. ಗೋಣಿಕೊಪ್ಪ ವರದಿ, ಅ. ೭ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕ್ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ತಂಡಗಳ ನಡುವಿನ ಸೆವೆನ್ಸೈಡ್ ಹಾಕಿ ಟೂರ್ನಿಯಲ್ಲಿ ಕಾಕೋಟ್ ಗ್ರೀನ್ಸ್ ಹಾಗೂ ಇವೈಟಿ ಬೇಗೂರು ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ. ಭಾನುವಾರ ಮಧ್ಯಾಹ್ನ ೩ ಗಂಟೆಗೆ ಫೈನಲ್ ಹಣಾಹಣಿ ನಡೆಯಲಿದೆ.
ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಕಾಕೋಟ್ ಗ್ರೀನ್ಸ್ ತಂಡವು ಕೊಟ್ಟಗೇರಿ ತಂಡದ ವಿರುದ್ಧ ಜಯಿಸಿತು. ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇವೈಟಿ ಬೇಗೂರು ತಂಡವು ಕದನೂರು ವಿರುದ್ಧ ಜಯಿಸಿತು.
ಫಲಿತಾಂಶ : ಕ್ವಾರ್ಟರ್ ಫೈನಲ್ನಲ್ಲಿ ಕಾಕೋಟ್ ಗ್ರೀನ್ಸ್ ತಂಡವು ಕೊಟ್ಟಗೇರಿ ತಂಡವನ್ನು ೫-೧ ಗೋಲುಗಳಿಂದ ಮಣಿಸಿತು. ಕಾಕೋಟ್ ಪರ ವಿಶಾಲ್ ೨, ಲೆಹರ್, ಬೋಪಣ್ಣ, ಧನುಶ್, ಕೊಟ್ಟಗೇರಿ ಆಟಗಾರ ಅಯ್ಯಪ್ಪ ತಲಾ ಒಂದೊAದು ಗೋಲು ಹೊಡೆದರು. ಶೂಟೌಟ್ ಮೂಲಕ ಬಲ್ಯಮುಂಡೂರು ತಲಭಲೇಶ್ವರ ತಂಡದ ವಿರುದ್ಧ ಜಯಿಸಿತು.
ಪಾರಣೆ ಸೆವೆನ್ಸ್ ತಂಡವು ಅಂಜಿಕೇರಿನಾಡ್ ತಂಡವನ್ನು ಶೂಟೌಟ್ ಮೂಲಕ ಸೋಲಿಸಿತು.
ಕಕ್ಕಬ್ಬೆ ಮಲ್ಮ (ಬಿ) ತಂಡವು ಚೆಂಬೆಬೆಳ್ಳೂರು ವಿರುದ್ಧ ೬-೦ ಗೋಲುಗಳಿಂದ ಗೆದ್ದು ಬೀಗಿತು. ಮಲ್ಮ ಆಟಗಾರ ಯಶ್ವಂತ್ ೨, ಫಾಹದ್, ನಂಜಪ್ಪ, ಪ್ರಜ್ವಲ್, ಕಾರ್ಯಪ್ಪ ತಲಾ ಒಂದೊAದು ಗೋಲು ಹೊಡೆದು ಗೆಲುವಿನ ರೂವಾರಿಯಾದರು.
ಬಲ್ಯಮುಂಡೂರು ತಲಭಲೇಶ್ವರ ತಂಡವು ಅಮ್ಮತ್ತಿ ಕಾರ್ಮಾಡು ವಿರುದ್ಧ ೪-೧ ಗೋಲುಗಳ ಅಂತರದಿAದ ಜಯಿಸಿತು. ಬಲ್ಯಮುಂಡೂರು ಪರ ಸೋಮಣ್ಣ ೨, ಗಣಪತಿ, ನಿಶೀತ್, ಅಮ್ಮತ್ತಿ ಆಟಗಾರ ಚೆಂಗಪ್ಪ ತಲಾ ಒಂದೊAದು ಗೋಲು ಬಾರಿಸಿದರು.
ಸಮಾರೋಪ : ಭಾನುವಾರ ಮಧ್ಯಾಹ್ನ ೩ ಗಂಟೆಗೆ ಸಮಾರೋಪ ಆಯೋಜಿಸಲಾಗಿದೆ. ಸಂಸದ ಪ್ರತಾಪ್ ಸಿಂಹ, ಶಾಸಕ ಎ. ಎಸ್. ಪೊನ್ನಣ್ಣ, ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ, ಕೆಡಿಸಿಸಿ ಅಧ್ಯಕ್ಷ ಬಾಂಡ್ ಗಣಪತಿ, ಹಾಕಿ ಒಲಿಂಪಿಯನ್ ಸಿ. ಎಸ್. ಪೂಣಚ್ಚ, ಗೋಣಿಕೊಪ್ಪ ಕಾವೆರಿ ಕಾಲೇಜು ಉಪ ಪ್ರಾಂಶುಪಾಲೆ ಡಾ. ಅಜ್ಜಿಕುಟ್ಟೀರ ಎಸ್. ಪೂವಮ್ಮ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ಭಾಗವಹಿಸಲಿದ್ದಾರೆ.