ಗೋಣಿಕೊಪ್ಪಲು, ಅ. ೭: ಗೋಣಿಕೊಪ್ಪಲುವಿನಲ್ಲಿ ನಡೆಯ ಲಿರುವ ದಸರಾ ಜನೋತ್ಸವ ಕಾರ್ಯ ಕ್ರಮದ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ಸುರಕ್ಷತಾ ಕ್ರಮವಾಗಿ ದಸರಾ ವೇದಿಕೆ ಸೇರಿದಂತೆ ನಗರದ ಆಯ ಕಟ್ಟಿನ ಪ್ರದೇಶದಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿ ಸಲಾಗುತ್ತದೆ ಎಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜು ತಿಳಿಸಿದರು.

ನಗರದ ಕಾಮತ್ ನವಮಿ ಸಭಾಂಗಣದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಗೋವಿಂದರಾಜು, ದಸರಾ ಯಶಸ್ವಿ ಗಾಗಿ ಇಲಾಖೆಯ ಹಲವು ನಿಯಮ ಗಳನ್ನು ಪಾಲಿಸಬೇಕು. ದಶÀ ಮಂಟಪ ಗಳು, ಸ್ತಬ್ಧ ಚಿತ್ರಗಳು ನಿಗದಿತ ಸಮಯ ದಲ್ಲಿ ಹೊರಡಬೇಕು, ಯಾವುದೇ ಸಮಸ್ಯೆಗಳು ಎದುರಾಗದಂತೆ ದಶÀಮಂಟಪದ ಅಧ್ಯಕ್ಷರು, ಸದಸ್ಯರು, ಉಪ ಸಮಿತಿಗಳ ಪದಾಧಿಕಾರಿಗಳು ಇಲಾಖೆಯೊಂದಿಗೆ ಸಹಕರಿಸಬೇಕು, ಅಗತ್ಯ ಬಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸಬೇಕು, ಹೊರ ಭಾಗದಿಂದ ಬರುವ ಕಿಡಿಗೇಡಿಗಳು ಅನಾವಶ್ಯಕ ತೊಂದರೆ ನೀಡಬಹುದು. ಇಂತಹ ಸಂದರ್ಭಗಳಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ಒದಗಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ದಶÀಮಂಟಪ ಅಧ್ಯಕ್ಷ ಜಮ್ಮಡ ಅರಸು, ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ, ನಾಡ ಹಬ್ಬ ದಸರಾ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಸೇರಿದಂತೆ ಇನ್ನಿತರ ಪ್ರಮುಖರು ಹಲವು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಮಂಟಪಗಳು ಅನಾವಶ್ಯಕ ಕಿರಿಕಿರಿ ಉಂಟುಮಾಡಿದಲ್ಲಿ ಅಂತಹ ಸಮಿತಿ ಗಳನ್ನು ದಸರಾ ಕಾರ್ಯಕ್ರಮದಿಂದ ಹೊರಗಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಸರ್ಕಾರಿ ಇಲಾಖೆಯ ಮೂಲ ಕವು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಬರಲಿದೆ, ಕ್ಷೇತ್ರದ ಶಾಸಕರು ಮುಂದಿನ ದಿನಗಳಲ್ಲಿ ದಸರಾ ಸಭೆ ನಡೆಸಿ ಉಪ ಯುಕ್ತ ಸಲಹೆ ನೀಡಲಿದ್ದಾರೆ, ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪ ನೆಯೊಂದಿಗೆ ಆರಂಭವಾಗುವ ದಸರಾ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ವೇದಿಕೆಯಲ್ಲಿ ಯುವ ದಸರಾ ಸಮಿತಿಯ ಅಧ್ಯಕ್ಷ ನಾಮೇರ ಅಂಕಿತ್, ಮಹಿಳಾ ದಸರಾ ಸಮಿತಿಯ ಅಧ್ಯಕೆÀ್ಷ ಮನ್ನಕ್ಕಮನೆ ಸೌಮ್ಯಬಾಲು, ಮಕ್ಕಳ ದಸರಾ ಸಮಿತಿಯ ಅಧ್ಯಕ್ಷ ತಿರು ನೆಲ್ಲಿಮಾಡ ಜೀವನ್, ಠಾಣಾಧಿಕಾರಿ ರೂಪಾದೇವಿ ಬೀರಾದರ್, ದಿಲನ್ ಚಂಗಪ್ಪ, ಪ್ರಚಾರ ಸಮಿತಿಯ ಕಿಶೋರ್ ನಾಚಪ್ಪ, ಉಪಾಧ್ಯಕ್ಷರಾದ ಶಿವಾಜಿ ಸೇರಿದಂತೆ ಇತರ ಗಣ್ಯರು ಉಪಸ್ಥಿ ತರಿದ್ದರು. ಎ.ಎಸ್.ಐ ದೇವರಾಜು ಸ್ವಾಗತಿಸಿ, ದಸರಾ ಸಮಿತಿಯ ಪ್ರ.ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ ವಂದಿಸಿದರು.